Advertisement

ಅಭಿವೃದ್ಧಿಗಾಗಿ ಕೈ ಜೋಡಿಸಲು ದೊಡ್ಡ ಅವಕಾಶ

06:00 AM Apr 28, 2018 | |

ವುಹಾನ್‌: ಜಗತ್ತಿನ ಒಟ್ಟು ಜನಸಂಖ್ಯೆ ಯಲ್ಲಿ ಶೇ.40ರಷ್ಟು ಪಾಲು ಹೊಂದಿರುವ ಭಾರತ, ಚೀನ ದೇಶಗಳ ಮುಂದೆ ತಮ್ಮ ಜನತೆಯ ಕಲ್ಯಾಣಕ್ಕಾಗಿ, ಶಾಂತಿ, ಸ್ಥಿರತೆಗಾಗಿ ಪರಸ್ಪರ ಕೈ ಜೋಡಿಸಿ ಕೆಲಸ ಮಾಡುವಂಥ ಬಹುದೊಡ್ಡ ಅವಕಾಶವಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಚೀನಾಕ್ಕೆ ಕಿವಿಮಾತು ಹೇಳಿದ್ದಾರೆ. 

Advertisement

ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆಗೆ ಚೀನದ ವುಹಾನ್‌ನಲ್ಲಿ ನಡೆಯುತ್ತಿರುವ ಅನೌಪಚಾರಿಕ ದ್ವಿಪಕ್ಷೀಯ ಸಭೆಯಲ್ಲಿ ಮಾತನಾಡಿದ ಅವರು, “”ಇಂಥ ಅನೌಪಚಾರಿಕ ಸಭೆಗಳ ಸಂಪ್ರದಾಯ ಮುಂದುವರಿಯ ಬೇಕು. ಸಾಧ್ಯವಾದರೆ, 2019ರಲ್ಲಿ ಇಂಥದ್ದೇ ಸಭೆ ದಿಲ್ಲಿಯಲ್ಲಿ ನಡೆಯಲಿ” ಎಂದು ಆಶಿಸಿದರು.

ಶ್ಲಾಘನೆ: ಕಳೆದ 2000 ವರ್ಷಗಳ ಇತಿಹಾಸದಲ್ಲಿ, ಭಾರತ-ಚೀನಗಳ ಒಟ್ಟು ಆರ್ಥಿಕತೆ, ಜಗತ್ತಿನ ಆರ್ಥಿಕತೆಯ ಶೇ. 50ರಷ್ಟು ಪಾಲು ಹೊಂದಿದ್ದು, 1600 ವರ್ಷಗಳಿಂದಲೂ ಜಾಗತಿಕ ಆರ್ಥಿಕತೆಯಲ್ಲಿ ಎರಡೂ ದೇಶಗಳು ತಮ್ಮದೇ ಆದ ಸಾರ್ವಭೌಮತ್ವವನ್ನು ಹೊಂದಿವೆ ಎಂದು ಮೋದಿ ಶ್ಲಾಘಿಸಿದರು. 

ವಿಶೇಷ ಪ್ರಧಾನಿ!: ತಮ್ಮ 2015ರ ಚೀನ ಭೇಟಿಯ ವೇಳೆ, ಜಿನ್‌ಪಿಂಗ್‌ ಅವರ ತವರೂರಾದ ಕ್ಸಿಯಾನ್‌ನಲ್ಲಿ ತಮಗೆ ಸ್ವಾಗತ ಸಿಕ್ಕಿದ್ದನ್ನು ನೆನಪಿಸಿಕೊಂಡ ಮೋದಿ, “”ಈಗ ನನಗೆ ವುಹಾನ್‌ನಲ್ಲಿ ಸ್ವಾಗತ ನೀಡಲಾಗಿದೆ. ಬೀಜಿಂಗ್‌ ಹೊರತು ಪಡಿಸಿ ಇತರ ನಗರಗಳಲ್ಲಿ ಸ್ವಾಗತ ಪಡೆದ ಭಾರತದ ಮೊದಲ ಪ್ರಧಾನಿ ನಾನೇ ಇರಬಹುದು”ಎಂದು ಹೆಮ್ಮೆಪಟ್ಟರು. ಈ ವೇಳೆ ಮಾತನಾಡಿದ ಜಿನ್‌ಪಿಂಗ್‌, “”ಮುಕ್ತ ಅವಕಾಶಗಳುಳ್ಳ ಹೊಸ ವಿಶ್ವವನ್ನು ಕಟ್ಟುವಲ್ಲಿ ಭಾರತ, ಚೀನ ಪ್ರಧಾನ ಪಾತ್ರ ವಹಿಸಲಿವೆ” ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next