Advertisement

ಹೆತ್ತವರ ಇಚ್ಛೆಗೆ ವಿರುದ್ಧ ಮದುವೆ: ಮಗಳನ್ನು ಸುಟ್ಟು ಕೊಂದ ಅಪ್ಪ

12:13 PM Jun 24, 2017 | Team Udayavani |

ಮೊರಾದಾಬಾದ್‌, ಉತ್ತರ ಪ್ರದೇಶ : ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಿನ್ನೆ ಶುಕ್ರವಾರ ಮಧ್ಯಾಹ್ನ ಮುಸ್ಲಿಂ ವ್ಯಕ್ತಿ ಹಾಗೂ ಆತನ ಮನೆಯವರು ಆತನ 22 ವರ್ಷ ಪ್ರಾಯದ ಮಗಳನ್ನು ಮಂಚಕ್ಕೆ ಬಿಗಿದು ಸೀಮೆ ಎಣ್ಣೆ ಸುರಿದ ಜೀವಂತ ಸುಟ್ಟು ಹಾಕಿದ ಘಟನೆ ನಡೆದಿದೆ. ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಆಕೆ ಮದುವೆಯಾದದ್ದೇ ಈ ಮರ್ಯಾದೆಗೇಡು ಹತ್ಯೆಗೆ ಕಾರಣವೆಂದು ಗೊತ್ತಾಗಿದೆ. 

Advertisement

ಶುಕ್ರವಾರ ಮಧ್ಯಾಹ್ನ ಗುಲ್‌ಫಾಶಾ ಬೀ, ಆಕೆಯ ಎರಡು ವರ್ಷ ಪ್ರಾಯದ ಪುತ್ರ ಮತ್ತು ಕುಟುಂಬ ಸಂಬಂಧಿ ಮಹಿಳೆಯೋರ್ವರು  ಮನೆಯಲ್ಲಿದ್ದರು. ಆಗ ಆಕೆಯ ತಂದೆ, ಇತರ ಕೆಲವರೊಂದಿಗೆ ಮನೆಗೆ ಬಂದು ಮಗಳನ್ನು ಹೊಡೆದು ಮಂಚಕ್ಕೆ ಬಿಗಿದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಆಕೆಯನ್ನು ಜೀವಂತ ಕೊಂದರು. ಈ ಕಟುಕರು ಆಕೆಯ ಮಗನಿಗೆ ಯಾವುದೇ ಹಾನಿ ಮಾಡದೇ ಬಿಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯ ಉಳಿದ ಸದಸ್ಯರು ಆ ಹೊತ್ತಿಗೆ ಅಂತ್ಯಕ್ರಿಯೆಗೆಂದು ಹೊರಗೆ ಹೋಗಿದ್ದರು. ಮಂಚಕ್ಕೆ ಬಿಗಿದು ಬೆಂಕಿ ಹಚ್ಚಲ್ಪಟ್ಟಿದ್ದ ಗುಲ್‌ಫಾಶಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ಆಶಿಶ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಘಟನೆಯ ಸುದ್ದಿ ತಿಳಿದು ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಧಾವಿಸಿ ಬಂದ ಪೊಲೀಸರು ಸಾಕ್ಷ್ಯಗಳನ್ನು, ದೇಹದ ಸುಟ್ಟ ಭಾಗಗಳನ್ನು ಸಂಗ್ರಹಿಸಿದರು, ಅನಂತರ ಅಳಿದುಳಿದ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. 

ಗುಲ್‌ಫಾಶಾ ಅವರ ಅತ್ತೆ ಮಾವ ಪೊಲೀಸರಿಗೆ ತಿಳಿಸಿರುವ ಪ್ರಕಾರ ಆಕೆ ಮೂರು ವರ್ಷಗಳ ಹಿಂದೆ ಸಾಜದ್‌ ಅಲಿ ಎಂಬಾತನನ್ನು, ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಳು. ಇವರ ಮದುವೆಯನ್ನು ಗುಲ್‌ಫಾಶಾಳ ತಂದೆ ಮತ್ತು ಇತರರು ಒಪ್ಪಲು ನಿರಾಕರಿಸಿದ್ದರು.

Advertisement

ಸಾಜದ್‌ನ ತಂದೆ ಪೊಲàಸರಲ್ಲಿ ಐಪಿಸಿ ಸೆ.302ರ ಪ್ರಕಾರ ಮುಶ್‌ರಫ್ ರಝಾ ಖಾನ್‌ ಸಹಿತ 1ಮಂದಿಯ ವಿರುದ್ಧ ಕೊಲೆ ಕೇಸನ್ನು ದಾಖಲಿಸಿದ್ದಾರೆ. ಈ ಪೈಕಿ ಒಬ್ಟಾತನನ್ನು ಬಂಧಿಸಲಾಗಿದ್ದು ಇತರರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next