Advertisement

100 ಟೆಸ್ಟ್ ಆಡಿದ್ದು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ : ಕೊಹ್ಲಿ

12:14 PM Mar 04, 2022 | Team Udayavani |

ಮೊಹಾಲಿ: ಬಿಡುವಿಲ್ಲದ ಅಂತರ್ ರಾಷ್ಟ್ರೀಯ ವೇಳಾಪಟ್ಟಿಯ ಮೂಲಕ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ ಹೊರತಾಗಿಯೂ ಮೈಲಿಗಲ್ಲನ್ನು ಸಾಧಿಸಬಹುದು ಎಂಬ ಅಂಶದಿಂದ “ಮುಂದಿನ ಪೀಳಿಗೆ” ಸ್ಫೂರ್ತಿ ಪಡೆಯಬೇಕೆಂದು ವಿರಾಟ್ ಕೊಹ್ಲಿ ಅವರು ತಮ್ಮ ನೂರನೇ ಟೆಸ್ಟ್ ಪಂದ್ಯದ ಆಟಕ್ಕೆ ಮುನ್ನ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದ್ದಾರೆ.

Advertisement

ಶ್ರೀಲಂಕಾ ಎದುರಿನ ಪಂದ್ಯ ಆರಂಭಕ್ಕೂ ಮುನ್ನ ಅವರನ್ನು ತಂಡದ ಆಟಗಾರರು ಮತ್ತು ಬಾಳ ಸಂಗಾತಿ ಅನುಷ್ಕಾ ಅವರ ಸಮ್ಮುಖದಲ್ಲಿ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಸ್ಮರಣೀಯ ಕ್ಯಾಪ್ ನೀಡಿ ಪ್ರಶಂಸಿದರು.

ಸ್ಮರಣೀಯ ಪಂದ್ಯದಲ್ಲಿ ಕೊಹ್ಲಿ ಅವರ ಸಹೋದರ ವಿಕಾಸ್ ಕೊಹ್ಲಿ ಸೇರಿ ಕುಟುಂಬ ಸದಸ್ಯರು, ಆತ್ಮೀಯರು, ಬಾಲ್ಯದ ಕೋಚ್ ಹಾಜರಿದ್ದರು.

ಈಗಿನ ಕ್ರಿಕೆಟ್‌ನಲ್ಲಿ, ನಾವು ಮೂರು ಪ್ರಕಾರಗಳು ಮತ್ತು ಐಪಿಎಲ್‌ನೊಂದಿಗೆ ಆಡುವುದರೊಂದಿಗೆ , ಮುಂದಿನ ಪೀಳಿಗೆಯು ನನ್ನಿಂದ ತೆಗೆದುಕೊಳ್ಳಬಹುದಾದ ಒಂದು ಸ್ಫೂರ್ತಿ ಎಂದರೆ ನಾನು 100 ಪಂದ್ಯಗಳನ್ನು ಶುದ್ಧ ಸ್ವರೂಪದಲ್ಲಿ ಆಡಿದ್ದೇನೆ” ಎಂದು ರಾಹುಲ್ ದ್ರಾವಿಡ್ ಅವರು ಸನ್ಮಾನಿಸಿದ ನಂತರ ಕೊಹ್ಲಿ ಹೇಳಿದರು.

Advertisement

ದ್ರಾವಿಡ್ ಅವರು ಕೊಹ್ಲಿಗೆ ಸ್ಮರಣಾರ್ಥ ಕ್ಯಾಪ್ ಮತ್ತು ಹೊಳೆಯುವ ಸ್ಮರಣಿಕೆಯನ್ನು ನೀಡಿದರು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಖಜಾಂಚಿ ಅರುಣ್ ಧುಮಾಲ್ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಉಪಸ್ಥಿತರಿದ್ದರಾದರೂ ಬಯೋ-ಬಬಲ್ ನಿರ್ಬಂಧಗಳಿಂದಾಗಿ ಕ್ರೀಡಾಂಗಣಕ್ಕೆ ಇಳಿಯಲಿಲ್ಲ.

ದೇಶಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕರ್, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಮತ್ತು ಇಶಾಂತ್ ಶರ್ಮಾ ಅವರನ್ನೊಳಗೊಂಡ ಪಟ್ಟಿಗೆ ಕೊಹ್ಲಿ ಸೇರಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next