Advertisement

ಮನೆಯೊಳಗೆ ನಾಗರಹಾವು ಮತ್ತು ಮನುಷ್ಯರ ವಾಸ…ಇದು “ಉರಗ ಪ್ರೇಮಿ” ಊರು!

11:43 AM Aug 20, 2021 | ಗಣೇಶ್ ಹಿರೇಮಠ |
ಭಾರತವು ಹಾವುಗಳನ್ನು ಮೋಡಿ ಮಾಡುವ ದೇಶ ಎಂದು ಪಾಶ್ಚಿಮಾತ್ಯದ ಕೆಲವು ದೇಶಗಳು ಹೇಳಿಕೊಳ್ಳುತ್ತವೆ. ಶೆಪ್ತಾಲ್ ಗ್ರಾಮಕ್ಕೆ ಭೇಟಿ ನೀಡಿದರೆ ಈ ಪರದೇಶಿಗಳ ಮಾತನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಯಾಕಂದರೆ ಈ ಗ್ರಾಮದ ಜನರಿಗೆ ಹಾವುಗಳೆಂದರೆ ಭಯವೇ ಇಲ್ಲ. ನಾವು ಬೆಕ್ಕು-ನಾಯಿಗಳ ಜೊತೆಗೆ ಹೇಗೆ ವಾಸಿಸುತ್ತೇವೋ ಹಾಗೇ ಇಲ್ಲಿಯ ಜನರು ನಾನಾ ಬಗೆಯ ಹಾವುಗಳನ್ನು ಕಿಂಚಿತ್ತೂ ಭಯವಿಲ್ಲದೆ ಮುದ್ದಿಸುತ್ತಾರೆ. ಉರಗಗಳನ್ನು ದೇವ ಸ್ವರೂಪಿಯಂತೆ ಕಾಣುವ ಇಲ್ಲಿಯ ಜನರಿಗೆ ಹಾವನ್ನು ಪೂಜಿಸುವ ಪದ್ಧತಿ ಹೇಗೆ ಆರಂಭವಾಯಿತು ಅನ್ನೋದು ಗೊತ್ತಿಲ್ಲ...
Now pay only for what you want!
This is Premium Content
Click to unlock
Pay with

ಹಾವುಗಳನ್ನು ಕಂಡರೆ ಮಾರುದ್ಧ ಹಾರುವವರೆ ಹೆಚ್ಚು. ಈ ವಿಷಜಂತು ನೋಡಿದಾಕ್ಷಣ ಎಂತಹ ಗಟ್ಟಿ ಗುಂಡಿಗೆಯಿದ್ದರೂ ಕೂಡ ಕ್ಷಣಕಾಲ ನಡಗುತ್ತದೆ. ಭಾರತದಲ್ಲಿ ಹಾವುಗಳನ್ನು ದೇವರ ರೂಪದಲ್ಲಿ ಪೂಜಿಸಲಾಗುತ್ತಿದೆಯಾದರೂ ಜೀವಂತ ಹಾವುಗಳನ್ನು ಕಂಡರೆ ಭಯ ಪಡುವವರೇ ಜಾಸ್ತಿ. ಆದರೆ, ಇಲ್ಲೊಂದು ಗ್ರಾಮದ ಜನರು ನಿಜ ನಾಗರಗಳ ಜೊತೆಗೆ ಸಹ ಜೀವನ ನಡೆಸುತ್ತಿದ್ದಾರೆ.

Advertisement

ಇದನ್ನ ಕೇಳಿದ್ರೆ ನಿಮಗೆ ಖಂಡಿತವಾಗಿಯೂ  ಶಾಕ್ ಆಗಬಹುದು. ಹಾವು ಮತ್ತು ಮನುಷ್ಯರು ಜೊತೆ ಜೊತೆಯಾಗಿ ಹೇಗೆ ಜೀವಿಸುತ್ತಾರೆ? ಅದು ಒಂದು ಚೂರು ಹೆದರದೆ, ಅದು ಕಚ್ಚಬಹುದು ಎಂಬ ಭಯವೇ ಇಲ್ಲದೇ ಹೇಗೆ ಜೀವಿಸುತ್ತಾರೆ ಅಲ್ವಾ? ಆದ್ರೆ ಇದೆಲ್ಲಾ ನಿಜವಾಗಿದೆ ಮಹಾರಾಷ್ಟ್ರದ ಶೆಪ್ತಾಲ್ ಗ್ರಾಮದಲ್ಲಿ. ಹೌದು ಇಲ್ಲಿ ಜನರು ಹಾವಿನ ಜೊತೆ ಉತ್ತಮ ಜೀವನ ನಡೆಸುತ್ತಿದ್ದಾರೆ.

ಭಾರತವು ಹಾವುಗಳನ್ನು ಮೋಡಿ ಮಾಡುವ ದೇಶ ಎಂದು ಪಾಶ್ಚಿಮಾತ್ಯದ ಕೆಲವು ದೇಶಗಳು ಹೇಳಿಕೊಳ್ಳುತ್ತವೆ. ಶೆಪ್ತಾಲ್ ಗ್ರಾಮಕ್ಕೆ ಭೇಟಿ ನೀಡಿದರೆ ಈ ಪರದೇಶಿಗಳ ಮಾತನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಯಾಕಂದರೆ ಈ ಗ್ರಾಮದ ಜನರಿಗೆ ಹಾವುಗಳೆಂದರೆ ಭಯವೇ ಇಲ್ಲ. ನಾವು ಬೆಕ್ಕು-ನಾಯಿಗಳ ಜೊತೆಗೆ ಹೇಗೆ ವಾಸಿಸುತ್ತೇವೋ ಹಾಗೇ ಇಲ್ಲಿಯ ಜನರು ನಾನಾ ಬಗೆಯ ಹಾವುಗಳನ್ನು ಕಿಂಚಿತ್ತೂ ಭಯವಿಲ್ಲದೆ ಮುದ್ದಿಸುತ್ತಾರೆ.

ಶೆಪ್ತಾಲ್ ಮಹಾರಾಷ್ಟ್ರದ ಪುಣೆಯಿಂದ ಸುಮಾರು 200 ಕಿ.ಮೀ ದೂರದಲ್ಲಿದೆ. ಈ ಊರಿನಲ್ಲಿರುವ ಒಣ ವಾತಾವರಣದಿಂದ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೇರೆ ಬೇರೆ ವಿಧದ ಹಾವುಗಳಿವೆ. ಇಲ್ಲಿನ ಜನರು ಹಾವನ್ನು ತಮ್ಮ ಕುಟುಂಬದ ಸದಸ್ಯನಂತೆ ಕಾಣುತ್ತಾರೆ. ಜೊತೆಗೆ ಮನೆಯೊಳಗೆ ಬರಲೂ ಅನುಮತಿ ನೀಡುತ್ತಾರೆ. ಹೆಚ್ಚಾಗಿ ಹಾವುಗಳು ಮನೆಯ ಒಳಗೆ ಜೀವಿಸುತ್ತವೆ.

ಶೋಲಾಪುರ ಜಿಲ್ಲೆಯಲ್ಲಿರುವ ಈ ಗ್ರಾಮದಲ್ಲಿನ ಜನರು ಪ್ರತಿದಿನ ಎಲ್ಲಾ ರೀತಿಯ ಹಾವನ್ನೂ ಪೂಜಿಸುತ್ತಾರೆ. 2600 ಜನರಿರುವ ಈ ಗ್ರಾಮದಲ್ಲಿ ಹಾವುಗಳನ್ನು ಕಂಡರೆ ಭಯವಿಲ್ಲ. ಉರಗಗಳನ್ನು ದೇವ ಸ್ವರೂಪಿಯಂತೆ ಕಾಣುವ ಇಲ್ಲಿಯ ಜನರಿಗೆ ಹಾವನ್ನು ಪೂಜಿಸುವ ಪದ್ಧತಿ ಹೇಗೆ ಆರಂಭವಾಯಿತು ಅನ್ನೋದು ಗೊತ್ತಿಲ್ಲ.

Advertisement

ಮನೆಯಲ್ಲಿ ಹಾವಿಗೆ ಸ್ಥಳ:

ನಾವು-ನೀವು ನಮ್ಮ ಮನೆಗಳಲ್ಲಿ ನಾಯಿಗಳಿಗಾಗಿ ಪ್ರತ್ಯೇಕ ಸ್ಥಳ ಕಾಯ್ದಿರುಸುತ್ತೇವೆ. ಸಾದ್ಯವಾದರೆ ಒಂದು ಪುಟ್ಟ ಜಾಗದಲ್ಲಿ ಬೆಚ್ಚನೆಯ ಕೋಣೆಯನ್ನು ನಿರ್ಮಿಸುತ್ತೇವೆ. ಆದರೆ, ಇಲ್ಲಿನ ಜನರು ಮನೆ ನಿರ್ಮಿಸುವಾಗ ಅಲ್ಲಿ ಹಾವಿಗೆ ನೆಲೆಸಲು ಸಾಧ್ಯವಾಗುವಂಥ ಒಂದು ಜಾಗವನ್ನೂ ನಿರ್ಮಿಸುತ್ತಾರೆ. ಈ ಜಾಗವನ್ನು ದೇವಸ್ಥಾನ ಎನ್ನುತ್ತಾರೆ. ಈ ಊರಲ್ಲಿ ವಿಷಕಾರಕ ನಾಗರ ಹಾವು, ಕಾಳಿಂಗ ಸರ್ಪವೂ ಮನೆಯೊಳಗೇ ಓಡಾಡುತ್ತವೆ. ಆದರೆ ಜನರು ಯಾವತ್ತೂ ಅದಕ್ಕೆ ನೋವು ಮಾಡಿದ ಉದಾಹರಣೆ ಇಲ್ಲ. ಮನೆಯಲ್ಲಿ ತುಂಬಾ ಹಾವುಗಳಿದ್ದರೆ, ದೇವರ ಆಶೀರ್ವಾದ ಹೆಚ್ಚಿದೆ ಎಂದೇ ಭಾವಿಸುತ್ತಾರೆ.

ಹೇಗೆ ನಮ್ಮ ಮಕ್ಕಳು ಆಟಿಕೆಗಳೊಂದಿಗೆ ಆಡುತ್ತಾರೋ, ಅದೇ ರೀತಿ ಇಲ್ಲಿನ ಮಕ್ಕಳು ಹಾವಿನೊಂದಿಗೆ ಆಡುತ್ತಾರೆ. ಜೊತೆಗೆ ಶಾಲೆ ಮತ್ತು ಕ್ಲಾಸ್ ರೂಮ್‌ಗಳಲ್ಲೂ ಹಾವು ಇರುವುದು ಕಾಮನ್. ಪಾಠ ನಡೆಯುತ್ತಿದ್ದ ಸಂದರ್ಭದಲ್ಲಿ ಹಾವುಗಳು ಬಂದರೆ ಇಲ್ಲಿನ ಮಕ್ಕಳು ಭಯ ಪಡುವುದಿಲ್ಲ. ತಮ್ಮಷ್ಟಕ್ಕೆ ತಾವು ಪಾಠ ಕೇಳುತ್ತಾರೆ. ಹಾವೂ ಕೂಡ ಅಲ್ಲಿಯೆ ಸುತ್ತಾಡುತ್ತಿರುತ್ತದೆ.

ಹಾವು ಕಚ್ಚಿದವರಿಗೆ ಔಷಧ :

ಈ ಊರಿನಲ್ಲಿ ಸಿದ್ದೇಶ್ವರ ದೇವಾಲಯವಿದೆ. ಇಲ್ಲಿ ಹಾವು ಕಚ್ಚಿದವರಿಗೆ ಔಷಧಿ ನೀಡಿ ಗುಣಪಡಿಸಲಾಗುತ್ತದೆ. ಇಲ್ಲಿನ ದೇವರಿಗೆ ಹಾವು ಕಚ್ಚಿದವರನ್ನು ಗುಣಪಡಿಸುವ ಶಕ್ತಿ ಇದೆ ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ಶಿವನ ಮೇಲೆ ಏಳು ತಲೆಯುಳ್ಳ ಹಾವಿನ ವಿಗ್ರಹವಿದೆ. ಇಲ್ಲಿವರೆಗೆ ಈ ಊರಲ್ಲಿ ಹಾವು ಕಚ್ಚಿದ ವರದಿ ಆಗೇ ಇಲ್ಲ ಎಂಬುದು ಮತ್ತೊಂದು ಅಚ್ಚರಿ.

ಮಹಾರಾಷ್ಟ್ರ ಸರ್ಕಾರದ ದಾಖಲೆಗಳಲ್ಲಿರುವಂತೆ 1974 ರಲ್ಲಿ ಹಾವು ಕಚ್ಚಿದ 100 ಪ್ರಕರಣಗಳು ಈ ಗ್ರಾಮದಲ್ಲಿ ವರದಿಯಾಗಿದ್ದವು. ಆದರೆ, ಅಲ್ಲಿಂದು ಇದುವರೆಗೆ ಯಾವೊಂದು ಪ್ರಕರಣಗಳು ದಾಖಲಾಗಿಲ್ಲ. ಇನ್ನು ಮತ್ತೊಂದು ಗಮನಾರ್ಹ ವಿಷಯ ಏನೆಂದರೆ ಈ ಗ್ರಾಮದಲ್ಲಿ ಇರುವ ಹಾವುಗಳು ವಿಷಪೂರಿತವೇ ಅಥವಾ ಅಲ್ಲವೋ ಎನ್ನುವುದು ಕೂಡ ಗೊತ್ತಿಲ್ಲ.

*ಗಣೇಶ್ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.