Advertisement

ಕುಡಿದು ಸಿಕ್ಕಿಬಿದ್ದರೆ ಊರಿಗೆಲ್ಲ ಮಾಂಸದೂಟ ಹಾಕಿಸುವ ಶಿಕ್ಷೆ!

10:57 AM Oct 19, 2019 | Sriram |

ಅಹಮದಾಬಾದ್‌: ಗುಜರಾತ್‌ನ ಖತಿಸಿತಾರಾ ಗ್ರಾಮದಲ್ಲಿ ಕುಡಿದು ಸಿಕ್ಕಿಬಿದ್ದರೆ ಜೇಬು ಖಾಲಿಯಾಗುವುದು ಖಚಿತ! ಈ ಗ್ರಾಮದಲ್ಲಿ ಕುಡಿತ ನಿಷೇಧಿಸಲಾಗಿದ್ದು, ಒಂದು ವೇಳೆ ಯಾರಾದರೂ ಕುಡಿದಿದ್ದು ಕಂಡುಬಂದರೆ ಅವರು ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

Advertisement

750-800 ಜನರಿರುವ ಊರಿನಲ್ಲಿ ಎಲ್ಲರಿಗೂ ಮಾಂಸದೂಟ ಹಾಕಿಸಲು ಕನಿಷ್ಠ 20 ಸಾವಿರ ರೂ. ವೆಚ್ಚವಾಗುತ್ತದೆ. ಅಷ್ಟೇ ಅಲ್ಲ, ಅದರ ಮೇಲೆ 2 ಸಾವಿರ ರೂ. ದಂಡವನ್ನೂ ತೆರಬೇಕಾಗುತ್ತದೆ. ಒಂದು ವೇಳೆ ಕುಡಿದು ಗಲಾಟೆ ಮಾಡಿದರೆ ದಂಡ 5 ಸಾವಿರ ರೂ. ಆಗುತ್ತದೆ.

ಬನಸ್‌ಕಾಂತಾ ಜಿಲ್ಲೆಯ ಬುಡಕಟ್ಟು ಗ್ರಾಮವಾಗಿರುವ ಇಲ್ಲಿ ಈ ನಿಯಮದಿಂದಾಗಿ ಮದ್ಯದಾಸರಿಗೆ ನಿಯಂತ್ರಣ ಬಿದ್ದಿದೆ. 2018ರಲ್ಲಿ ಒಬ್ಬ ವ್ಯಕ್ತಿ ಮಾತ್ರ ಕುಡಿದು ಸಿಕ್ಕಿಬಿದ್ದಿದ್ದ. 2019ರಲ್ಲಿ ಈವರೆಗೆ ಯಾರೂ ಕುಡಿದು ಸಿಕ್ಕಿಬಿದ್ದಿಲ್ಲ. 2013-14ರಲ್ಲಿ ಕುಡಿತದ ದುಷ್ಪರಿಣಾಮಗಳನ್ನು ಅರಿತ ಗ್ರಾಮದ ಹಿರಿಯರು ಈ ನಿಯಮ ಜಾರಿಗೆ ತಂದಿದ್ದರು. ಆರಂಭದ ವರ್ಷಗಳಲ್ಲಿ ವರ್ಷಕ್ಕೆ ನಾಲ್ಕೈದು ಜನರು ಸಿಕ್ಕಿಬೀಳುತ್ತಿದ್ದರು. ಈಗ ಈ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next