Advertisement
ಕೇಂದ್ರ ಆರೋಗ್ಯ ಇಲಾಖೆ ಈ ಸಂಬಂಧ ಸ್ಪಷ್ಟನೆ ನೀಡಿದೆ. ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾಗುತ್ತಾರೆ ಎಂದು ಹೇಳಲು ಬರುವುದಿಲ್ಲ. ಅಂಥ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಹೇಳಿದೆ. ಮಕ್ಕಳಿಗೆ ಬೇರೆ ರೀತಿಯ .ಸಮಸ್ಯೆಗಳು ಕಾಣಿಸಬಹುದು; ಅವರು ಮಾನಸಿಕ ಒತ್ತಡ, ಸ್ಮಾರ್ಟ್ ಫೋನ್ ಅಡಿಕ್ಷನ್ ಮತ್ತು ಶೈಕ್ಷಣಿಕ ಸವಾಲುಗಳಿಂದ ಬಳಲಬಹುದು ಎಂದಿದ್ದಾರೆ.
ದೇಶದಲ್ಲಿ 17 ದಿನಗಳಿಂದ ಸೋಂಕು ಪೀಡಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಕಳೆದ 15 ವಾರಗಳಿಂದ ಕೊರೊನಾ ಪರೀಕ್ಷೆಗಳೂ ಹೆಚ್ಚಾಗುತ್ತಿವೆ. ಸದ್ಯ ಶೇ. 8.09 ಪಾಸಿಟಿವಿಟಿ ದರ
ಸದ್ಯ ಶೇ. 8.09ರಷ್ಟು ಪಾಸಿಟಿವಿಟಿ ದರ ವಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಈಗ 27.20 ಲಕ್ಷ ಸಕ್ರಿಯ ಪ್ರಕರಣಗಳಿವೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಪಶ್ಚಿಮ ಬಂಗಾಲ, ರಾಜ ಸ್ಥಾನ ಮತ್ತು ಒಡಿಶಾ ರಾಜ್ಯ ಗಳು ಶೇ. 71.62ರಷ್ಟು ಸಕ್ರಿಯ ಪ್ರಕರಣಗ ಳನ್ನು ಹೊಂದಿವೆ.
Related Articles
ಕರ್ನಾಟಕದಲ್ಲೂ ಕೊರೊನಾ ಸೋಂಕುಪೀಡಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಸೋಮವಾರ 25,311 ಮಂದಿಗೆ ಸೋಂಕು ತಗುಲಿದ್ದರೆ, 57,333 ಮಂದಿ ಚೇತರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 5,701 ಮಂದಿಗೆ ಸೋಂಕು ತಗುಲಿದ್ದು, 34,378 ಮಂದಿ ಗುಣಮುಖರಾಗಿದ್ದಾರೆ. ಆದರೆ ಸಾವಿನ ಸಂಖ್ಯೆ ಮಾತ್ರ ಸೋಮವಾರವೂ ಕಡಿಮೆ ಆಗಿಲ್ಲ. ರಾಜ್ಯದಲ್ಲಿ ಒಟ್ಟು 529 ಮಂದಿ ಮೃತಪಟ್ಟಿದ್ದರೆ, ಬೆಂಗಳೂರಿನಲ್ಲಿ 297 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 23.28ರಷ್ಟಿದ್ದರೆ, ಮರಣ ಪ್ರಮಾಣ ದರ ಶೇ. 2.09ರಷ್ಟಿದೆ. ಸದ್ಯ ಒಟ್ಟು 4,40,435 ಸಕ್ರಿಯ ಪ್ರಕರಣಗಳಿವೆ.
Advertisement