ಮಾರುಕಟ್ಟೆ ಪ್ರೇರಿತ ಫ್ಯಾಶನ್ ಲೋಕದಲ್ಲಿಯೂ ಅನೇಕ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಇಂದಿನ ಫ್ಯಾಶನ್ ನಾಳೆಯೂ ಇರುತ್ತದೆ ಎಂಬ ಭರವಸೆಯೂ ಇಲ್ಲ ಎನ್ನುವಷ್ಟೂ ಮಾರುಕಟ್ಟೆಯಲ್ಲಿ ಸ್ಪರ್ಧೆ ಬೆಳೆದುನಿಂತಿದೆ. ಇದು ಕೇವಲ ವಸ್ತ್ರಗಳ ವಿಷಯಕ್ಕೆ ಮಾತ್ರ ಸೀಮಿತವಾದದ್ದಲ್ಲ. ಬದಲಾಗಿ ಕಿವಿಯೋಲೆ, ಬಳೆಗಳು, ಬಿಂದಿ, ಆಭರಣ, ಪಾದರಕ್ಷೆಗಳು ಮುಂತಾದವುಗಳ ವಿಷಯದಲ್ಲಿಯೂ ಪ್ರತಿನಿತ್ಯವೂ ಮಾರುಕಟ್ಟೆ ಬದಲಾವಣೆಗೆ ತೆರೆದುಕೊಳ್ಳುತ್ತಿದೆ. ಗ್ರಾಹಕರನ್ನು ಇನ್ನಷ್ಟು ಕುತೂಹಲಿಯನ್ನಾಗಿ ಮಾಡುತ್ತಿವೆ. ಮಾರುಕಟ್ಟೆಯಲ್ಲಿ ಬ್ಯಾಗ್‌ಗಳು ಹೊಸ-ಹೊಸ ಡಿಸೈನ್ ಮೂಲಕ ಗಮನಸೆಳೆಯುತ್ತಿವೆ. ಬ್ರ್ಯಾಂಡೆಡ್, ಫ್ಯಾನ್ಸಿ ಬ್ಯಾಗ್‌ಗಳು ಹೇಗೆ ನಮ್ಮ ಡ್ರೆಸ್ಸಿಂಗ್‌ಗೆ ಒಂದು ಹೊಸ ಲುಕ್ ತರುತ್ತವೆ ಎಂಬುದಕ್ಕೆ ಇಲ್ಲಿದೆ ಒಂದು ನೋಟ.
ಹ್ಯಾಂಡ್ ಬ್ಯಾಗ್
ನೀವು ಧರಿಸುವ ಬಟ್ಟೆಗೆ ನಿಮ್ಮ ಲುಕ್ ಹೆಚ್ಚಿಸುವ ಕೆಲಸವನ್ನು ಹ್ಯಾಂಡ್‌ಬ್ಯಾಗ್ಸ್ ಮಾಡುತ್ತದೆ. ಶುಭ- ಸಮಾರಂಭಗಳಲ್ಲಿ ನಿಮ್ಮ ಕೈಯಲ್ಲಿಯ ಪುಟಾಣಿ ಹ್ಯಾಂಡ್‌ಬ್ಯಾಗ್ ಅಂದ ಹೆಚ್ಚಿಸಿ ಎಲ್ಲರೂ ನಿಮ್ಮನ್ನು ನೋಡುವಂತೆ ಮಾಡುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಡಿಸೈನ್‌ಗಳಲ್ಲಿ ಮನಮೋಹಕ ಹ್ಯಾಂಡ್ ಬ್ಯಾಗ್‌ಗಳು ಒಂದಕ್ಕಿಂತ ಒಂದು ಭಿನ್ನವಾಗಿರುವುದನ್ನು ಗ್ರಾಹಕರು ತಿಳಿಯಬಹುದು. ಸೀರೆಯುಟ್ಟ ನೀರೆಗೆ, ವೆಸ್ಟರ್° ಬಟ್ಟೆಗಳನ್ನು ತೊಡುವ ಹುಡುಗಿಗೆ ಹ್ಯಾಂಡ್ ಬ್ಯಾಗ್ ಪಕ್ಕಾ ಸೂಟೇಬಲ್ ಆಗುತ್ತದೆ. ಆದರೆ ಯಾವ ಬಟ್ಟೆ ಧರಿಸುವಾಗ ಯಾವ ರೀತಿಯ ಹ್ಯಾಂಡ್ ಬ್ಯಾಗ್ಸ್ ಅನ್ನು ಚೂಸ್ ಮಾಡುವುದು ಎನ್ನುವ ಕನಿಷ್ಟ ಜ್ಞಾನ ಇರಬೇಕಾಗುತ್ತದೆ.
ಮಾರುಕಟ್ಟೆಯಲ್ಲಿ ವೈವಿಧ್ಯ ಮಯ ಬ್ಯಾಗ್‌ಗಳು ನಮ್ಮ ಕಣ್ಣು ಸೆಳೆಯುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಫ್ಯಾಶನೇಬಲ್ ಬ್ಯಾಗ್‌ಗಳ ಹೆಸರು ಇಲ್ಲಿದೆ. ಹೊಬೋ ಬ್ಯಾಗ್ (ಜೋಳಿಗೆಯಂತಹ ಬ್ಯಾಗ್‌ಗಳ ಮೆಲೆ ಕಸೂತಿ), ಟೊಟೆ ಬ್ಯಾಗ್ಸ್, ಡಫಲ್ ಬ್ಯಾಗ್ (ಆಫೀಸ್ ವೇರ್), ಮೆಸೆಮಜರ್ ಬ್ಯಾಗ್ಸ್, ಬ್ಯಾಕ್‌ಪ್ಯಾಕ್, ಸ್ಯಾಚೆಲ್, ಡಾಕ್ಟರ್ ಬ್ಯಾಗ್(ವೈದ್ಯಕೀಯ ವೃತ್ತಿಯವರಿಗೆ ಸ್ಯೂಟೇಬಲ್), ಲ್ಯಾಪ್‌ಟಾಪ್ ಬ್ಯಾಗ್, ಬಕೆಟ್ ಬ್ಯಾಗ್ (ಬಕೆಟ್ ಶೇಪ್‌ಗ್ಳಲ್ಲಿ), ಬೌಲರ್ ಬ್ಯಾಗ್(ಬಟ್ಟೆ ಕೊಂಡೊಯ್ಯಲು ಉಪ ಯೋಗಿಸುವುದು), ವ್ರಿಸ್ಲೆಟ್ ಬ್ಯಾಗ್, ಪೌಚ್ ಇತ್ಯಾದಿಗಳ ನವ ನವೀನ ವಿನ್ಯಾಸದ ಬ್ಯಾಗ್‌ಗಳು ದಿನದಿಂದ ದಿನಕ್ಕೆ ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿವೆ.
ಬ್ಯಾಗ್ ಕೊಳ್ಳುವುದಷ್ಟೇ ಅಲ್ಲ ಅದನ್ನು ಕಾಪಿಟ್ಟುಕೊಳ್ಳುವ ಬಗೆಗೂ ನಾವು ಗಮನ ಹರಿಸಬೇಕು. ಅದನ್ನು ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಇಟ್ಟುಕೊಂಡೆವು ಎಂದಾದಲ್ಲಿ ಬ್ಯಾಗ್‌ಗಳು ಬೇಗನೆ ಅಂದಗೆಟ್ಟು ಹೋಗುವುದು ನಿಸ್ಸಂಶಯ. ಬ್ಯಾಗಗಳನ್ನು ಉಳಿಸಿಕೊಳ್ಳುವುದರ ಬಗ್ಗೆ ಗಮನವಹಿಸುವುದು ಉತ್ತಮ.