Advertisement
ತಾನು ಹುಟ್ಟಿದಂದಿನಿಂದಲೂ ಹೀಗೆ ತನ್ನ ಹುಟ್ಟುಡುಗೆಯಲ್ಲಿಯೇ ಉಳಿದು, ಕುಳಿತ ಕಲ್ಲು ಬಂಡೆಯಿಂದಲೇ ತಾನು ಉದ್ಭವವಾಗಿ¨ªೋ ಎನ್ನುವಂತೆ ಲೋಕವನ್ನೇ ಮರೆತು ಗದ್ದಕ್ಕೆ ಕೈಕೊಟ್ಟು, ತನ್ನೊಳಗೇ ತಾನಾಡುತ್ತಿರುವ ಮಾತಿಗೆ ಕಿವಿಗೊಟ್ಟು, ಉಳಿದಿದ್ದನ್ನೆಲ್ಲ ಮರೆತಂತೆ ಕುಳಿತ ಇವನಿಗೆ The Thinker ಎಂಬ ಅನ್ವರ್ಥ ನಾಮ! ವಿಶ್ವವಿಖ್ಯಾತ ಶಿಲ್ಪಿ Auguste Rodinನ ಕೈಯಿಂದ ಮಣ್ಣಿನ ಮೂರ್ತಿಯಾಗಿ ಹುಟ್ಟಿ ನಂತರ ಕಂಚಿನ ಎರಕದಲ್ಲಿ ಮೂಡಿಬಂದವನಿವನು. ಡಾಂಟೆ ಕವಿಯ ಕೃತಿಯೊಂದರ ಸ್ಫೂರ್ತಿಯಲ್ಲಿ ಮೂಡಿಬಂದ, ತನ್ನದೇ ಮಹತ್ವಾಕಾಂಕ್ಷೆಯ ಹೊತ್ತಗೆ ನರಕದ ಬಾಗಿಲು ವಿನಲ್ಲಿ ಇವನನ್ನು ಕೂರಿಸಿ ಇವನನ್ನು “ಕವಿ’ ಎಂದು ಕರೆದ ರಾಡೆನ್, ನಂತರ ಸುಮ್ಮನೆ ಕುಳಿತ ಇವನ ಭಂಗಿಯÇÉೇ ಇನ್ಯಾವುದೋ ನೆರಳು ಕಂಡು, ಇವನನ್ನೊಂದು ಸ್ವತಂತ್ರ ಕೃತಿಯಾಗಿಯೇ ಕಂಚಿನಲ್ಲಿ ರೂಪಿಸಿ, ಇವನಿಗೆ “ಥಿಂಕರ್’ ಎಂಬ ಹೊಸ ಹೆಸರನ್ನಿಟ್ಟ ಕಥೆಯೇ ಒಂದು ಸುಂದರ ರೂಪಕದಂತಿದೆ. ಲೋಕವನ್ನೇ ಮರೆತು, ತಾನು ನರಕದ ಬಾಗಿಲಿನಲ್ಲಿ ಕುಳಿತಿದ್ದೇನೆಂಬುದನ್ನೂ ಮರೆತು, ಗಲ್ಲಕ್ಕೆ ಕೈಕೊಟ್ಟು ತನ್ನೊಳಗಿನ ಮಾತನ್ನು ಕೇಳಲು ಶುರುವಿಟ್ಟಿದ್ದೇ ಕಾರಣವಾಗಿ ನರಕದ ಬಾಗಿಲಿನಲ್ಲಿ “ಕವಿ’ಯಾದವನು ಅಲ್ಲಿಂದ ಹೊರಬಿದ್ದು, ತಾನೇ ತಾನಾಗಿ “ಚಿಂತಕ’ನಾಗಲು ಸಾಧ್ಯವಾಗಿದ್ದು ಎಂಥ ಚೋದ್ಯ! ಉಳಿದೆಲ್ಲ ಮಾತುಗಳಿಂದಲೂ ಪಾರಾಗಿ, ನಮ್ಮೊಳಗಿನದ್ದೇ ಇಂಥ¨ªೊಂದು ಮಾತು ಆಡಲು, ಕೇಳಲು ಮನುಷ್ಯ ಮಾತ್ರರಾದ ನಮಗೆಲ್ಲ ಸಾಧ್ಯ ಎಂಬ ಸಂಭಾವ್ಯವೇ ಕಣ್ಣು ಕೀಳದೆ ಇವನು ಕುಳಿತ ಎÇÉಾ ಕೋನಗಳಿಂದಲೂ ಇವನನ್ನು ನೋಡುತ್ತ ಕಣ್ತುಂಬಿಸಿ ಕೊಳ್ಳಬೇಕೆನ್ನುವ ಹಂಬಲವೊಂದನ್ನು ನಮ್ಮೊಳಗೆ ಹುಟ್ಟಿಸುತ್ತಿರಬಹುದು. ಇವನು ಕುಳಿತ ಭಂಗಿ ಮಾತ್ರ ಹಾಗೆ ಕುಳಿತುಕೊಳ್ಳಲು ಹೋದಾಗ ಅದು ಅಷ್ಟು ಸುಲಭವೂ ಸಹಜವೂ ಅಲ್ಲ ಎಂದು ಅರಿವಾಗಿಸುತ್ತದೆ. ತನ್ನ ಬಲ ಮೊಣಕೈಯನ್ನು ಎಡತೊಡೆಗೆ ಊರಿ, ಗದ್ದಕ್ಕೆ ಬಲಗೈಯನ್ನು ಊರುಗೊಟ್ಟು ಕಾಲೆºರಳುಗಳನ್ನು ಯಾವುದೋ ಭಾವ ತೀವ್ರತೆಯಲ್ಲಿ ಕುಳಿತ ಕಲ್ಲು ಬಂಡೆಯೊಳಗೇ ಹುದುಗಿಸುತ್ತಿರುವಂತೆ ತೋರುತ್ತಿರುವ ಈ ಭಂಗಿಯÇÉೇ ಒಂದು ಚೆಲುವಿದೆ. ಈ ಭಂಗಿ ಸಹಜವೋ ಅಲ್ಲವೋ ಎನ್ನುವ ಅರೆಗಳಿಗೆಯ ಬೆರಗಿಗೇ ನಮ್ಮೊಳಗೆ ಮಾತೊಂದು ಹುಟ್ಟಿಬಿಡುವಂತೆ ಮಾಡುವ ಶಕ್ತಿಯಿದೆ. ಇನ್ನು ಈ ಭಂಗಿಯಲ್ಲಿ ಕುಳಿತ ಇವನ ಮೈಮೇಲೆ ನೂಲಿನೆಳೆಯೂ ಇಲ್ಲ. ಇಂಗ್ಲಿಷಿನಲ್ಲಿ ಇದಕ್ಕೆ butt naked ಎಂಬ ಸುಂದರ ಹೆಸರು! ಎÇÉಾ ಉಪಾಧಿಗಳಿಂದ ಬಿಡಿಸಿಕೊಂಡ, ಯಾವ ನಿಯಮಾಧೀನತೆಗೂ ಸಿಕ್ಕಿಕೊಳ್ಳದ, conditioned ಸಿದ್ಧ ಮಾದರಿಗಳಿಂದ ಭಿನ್ನವಾಗಿ ಬಟ್ ನೇಕೆಡ್ ಆಗದ ಹೊರತು ಹೀಗೆ ಸ್ವಗತಕ್ಕಿಳಿಯಲು, ಇಂಥ¨ªೊಂದು ಮಗ್ನತೆಯಲ್ಲಿ, ಧ್ಯಾನದಲ್ಲಿ ಕಳೆದುಹೋಗಲು ಹೇಗೆ ತಾನೇ ಸಾಧ್ಯ! ಬೆತ್ತಲಾಗದೆ ಬಯಲು ಸಿಕ್ಕುವುದಾದರೂ ಹೇಗೆ?
Related Articles
ಜೀವ ಬಲದ ಜೀವವೊಂದು ಮಿಡುಕಿದೆ
ನಿನ್ನಾತ್ಮದೊಳಗೆ,
ಹುದುಗಿದೆ ನಿನ್ನ ಮೈಯೊಳಗೇ
ಅನಘÂì ರತ್ನವೊಂದು
ನೀನೇ ಶೋಧಿಸಬೇಕು ಹತ್ತಿ ಬೆಟ್ಟವನ್ನು,
ಹೊಕ್ಕು ಆ ಗಣಿಯನ್ನು.
Advertisement
ಅದನ್ನೇ ಹುಡುಕಿ ಅಲೆದಿರುವ ಅಲೆಮಾರಿ, ಅಯ್ಯೋ… ಸಾಕು ಹುಡುಕಿದ್ದು ಹೊರಗೆ
ಈಗ ನಿನ್ನೊಳಗೇ ಇಳಿ, ತಿಳಿ!
ಈ ಏಕಾಂತವೇ ಲೇಸು
ಮಿಕ್ಕೆÇÉಾ ನೂರು, ಸಾವಿರ
ಜೊತೆಗಳಿಗಿಂತಾ.
ಈ ಸ್ವಾತಂತ್ರ್ಯಕ್ಕಿನ್ನಾವುದು ಸಮ?
ನೀವೇ ಇಟ್ಟುಕೊಳ್ಳಿ ನಿಮ್ಮ ನಿಮ್ಮ ಭೂಮಿ, ಕಾಣಿಗಳನೆÇÉಾ
ನಿಮ್ಮ ಹೆಸರಿನಲ್ಲಿ. ಸತ್ಯದ ಜೊತೆ ಸಿಗುವ ಒಂದೇ ಒಂದು ಗಳಿಗೆ
ಮಿಗಿಲು ಈ ಇಡೀ ಲೋಕಕ್ಕಿಂತ,
ಜೀವಕ್ಕೆಂತಾ. ಲೋಕಾಂತದೊಳಗೂ ಸಿಗುವ ಈ ಏಕಾಂತವನ್ನು ನಾವಷ್ಟೇ ಸೃಷ್ಟಿಸಿಕೊಳ್ಳಲು ಸಾಧ್ಯ. ಆಗ ಮಾತ್ರ ಆಡದ ಮಾತುಗಳನ್ನೂ ಕಾಣಲು, ಕೇಳಲು ಸಾಧ್ಯವಾಗಬಹುದೇನೋ! – ಮೀರಾ ಪಿ. ಆರ್., ನ್ಯೂಜೆರ್ಸಿ