ಯಕ್ಷಗಾನದ ಪರ್ಯಾಯ ಪದವೇ “ಗಂಡು ಕಲೆ’. ಹಾಗಂತ, ಹೆಣ್ಮಕ್ಕಳೇನೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಕಿರೀಟ ಕಟ್ಟಿ, ಚಂಡೆ ಬಡಿದು, ಧೀಂಕಿಟ ಅನ್ನುತ್ತಾ, ಯಕ್ಷ ಲೋಕದಲ್ಲಿ ಛಾಪು ಮೂಡಿಸಿದ್ದಾರೆ. ತೆಂಕು-ಬಡಗು ಎರಡು ಮೇಳದಲ್ಲಿಯೂ ಹಿಮ್ಮೇಳದ ಭಾಗವತಿಕೆ, ಮದ್ದಲೆ, ಚಂಡೆ, ಮುಮ್ಮೇಳದ ನರ್ತನ, ಅಭಿನಯ, ಅರ್ಥಗಾರಿಕೆಯನ್ನು ಮೈಗೂಡಿಸಿಕೊಂಡ ಕಲಾವಿದೆಯರಿದ್ದಾರೆ. ಇವರೆಲ್ಲರ ಸಮಾಗಮದ ಕೂಡಾಟವೇ, “ಮಹಿಳಾ ಯಕ್ಷೋತ್ಸವ-2020′.
“ಯಕ್ಷಗಾನ ಯೋಗಕ್ಷೇಮ ಅಭಿಯಾನ’ದಡಿಯಲ್ಲಿ ತೆಂಕು-ಬಡಗಿನ ಮುಮ್ಮೇಳ ಕಲಾವಿದೆಯರಿಂದ, ಸುರೇಶ ಹೆಗಡೆಯವರ ಸಂಯೋಜನೆಯಲ್ಲಿ ಎರಡು ಪ್ರಸಂಗಗಳು ಮೂಡಿ ಬರಲಿವೆ. ಕವಿ ಕಡಂದಲೆ ರಾಮರಾವ್ ವಿರಚಿತ “ದ್ರೌಪದಿ ಪ್ರತಾಪ’, ಕವಿ ದೇವಿದಾಸ ವಿರಚಿತ “ದಕ್ಷ ಯಜ್ಞ’- ಇವು ಪ್ರದರ್ಶನಗೊಳ್ಳುವ ಪ್ರಸಂಗಗಳು.
ತೆಂಕು ತಿಟ್ಟು ಹಿಮ್ಮೇಳದಲ್ಲಿ ಶಿವಶಂಕರ ಭಟ್ ಬಲಿಪ, ಭವ್ಯಶ್ರೀ ಕಲ್ಕುಂದ, ಅವಿನಾಶ ಬೈಪಡಿತ್ತಾಯ, ಅಕ್ಷಯ ರಾವ್ ವಿಟ್ಲ, ದಿವ್ಯಶ್ರೀ ಸುಬ್ರಹ್ಮಣ್ಯ, ಶಿಖೀನ್ ಶರ್ಮ ಶರವೂರು, ಮುಮ್ಮೇಳದಲ್ಲಿ ಪೂರ್ಣಿಮಾ ಯತೀಶ್ ರೈ, ಸಾಯಿಸುಮಾ ಮಿಥುನ್ ನಾವುಡ, ಸುಷ್ಮಾ ಮೈರಾ³ಡಿ ವಷಿಷ್ಠ, ಲತಾ ಹೊಳ್ಳ, ಶರಣ್ಯ ರಾವ್ ಶರವೂರು, ಛಾಯಾಲಕ್ಷ್ಮಿ ಆರ್.ಕೆ. ಅಶ್ವಿನಿ ಆಚಾರ್ಯ.
ಬಡಗು ತಿಟ್ಟು ಹಿಮ್ಮೇಳದಲ್ಲಿ ಸರ್ವೇಶ್ವರ ಹೆಗಡೆ ಮೂರೂರು, ಸುಬ್ರಾಯ ಹೆಬ್ಟಾರ, ಆನಂದ ಅಂಕೋಲ, ಅನಂತ ಪದ್ಮನಾಭ ಪಾಠಕ್, ನಾರಾಯಣ ಹೆಬ್ಟಾರ, ಶ್ರೀನಿವಾಸ ಪ್ರಭು, ಆದಿತ್ಯ ಕಾಶೈನ್, ಗಣೇಶ ಭಂಡಾರಿ. ಮುಮ್ಮೇಳದಲ್ಲಿ ಕಿರಣ ಪೈ, ಸೌಮ್ಯಾ ಅರುಣ, ಅಶ್ವಿನಿ ಕೊಂಡದಕುಳಿ, ಅರ್ಪಿತಾ ಹೆಗಡೆ, ನಾಗಶ್ರೀ ಜಿ.ಎಸ್. ನಿಹಾರಿಕಾ ಭಟ್, ಮಾನಸಾ ಉಪಾಧ್ಯ, ವಿದ್ಯಾ ನಾಯ್ಕ, ವಿನಯ ನಾಯ್ಕ, ಶ್ರೇಯಾ, ಶ್ರಾವ್ಯಾ ಮುಂತಾದ 50ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ
ಯಾವಾಗ?: ಜ. 12, ಭಾನುವಾರ ಮಧ್ಯಾಹ್ನ 3.30
ಪ್ರವೇಶ: ರೂ.300, 100
ಮಾಹಿತಿ: 9986509511