Advertisement

ಮಳೆಯಲ್ಲೂ ನಿಲ್ಲದ ಮತ ಬೇಟ

03:37 PM Aug 28, 2018 | |

ಮುದ್ದೇಬಿಹಾಳ: ಕನಿಷ್ಠ 18 ಸ್ಥಾನ ಗೆಲ್ಲುವ ಗುರಿ ಇಟ್ಟು ಬಿಜೆಪಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಸೋಮವಾರವೂ ಬಿರುಸಿನ ಪ್ರಚಾರ ಮುಂದುವರಿಸಿದರು. ಈ ವೇಳೆ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮಳೆಯಲ್ಲಿ ನೆನೆದೇ ಬೆಂಬಲಿಗರೊಂದಿಗೆ ಪ್ರಚಾರ ನಡೆಸಿ ಗಮನ ಸೆಳೆದರು.

Advertisement

ಮಹಾಂತೇಶ ನಗರದ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 4ನೇ ವಾರ್ಡ್‌ ಅಭ್ಯರ್ಥಿ ಬಸವರಾಜ ಮುರಾಳ, ವಾಲ್ಮೀಕಿ ಸರ್ಕಲ್‌ನಿಂದ 5ನೇ ವಾರ್ಡ್‌ ಅಭ್ಯರ್ಥಿ ಹುಲಗಪ್ಪ ನಾಯಕಮಕ್ಕಳ, ರಾಘವೇಂದ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 6ನೇ ವಾರ್ಡ್‌ ಅಭ್ಯರ್ಥಿ ಲಕ್ಷ್ಮೀಬಾಯಿ ವಾಲೀಕಾರ, ಯಮನೂರಪ್ಪ ಕಟ್ಟೆಯ ಬಳಿಯಿಂದ 16ನೇ ವಾರ್ಡ್‌ ಅಭ್ಯರ್ಥಿ ಬೀಬಿಜಾನ ಬೀಳಗಿ ಪರ ರೋಡ್‌ಶೋ ನಡೆಸಿ, ಮನೆಮನೆಗೆ ತೆರಳಿ ಕರಪತ್ರ ವಿತರಿಸಿ ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸುವಂತೆ ಮನವಿ ಮಾಡಿದರು. ಸೋಮನಗೌಡ ಬಿರಾದಾರ ಕವಡಿಮಟ್ಟಿ, ಶರಣು ಬೂದಿಹಾಳಮಠ,
ಬಸವರಾಜ ಗುಳಬಾಳ, ಸಂಗಮೇಶ ವಾಲೀಕಾರ, ಮೋಹನ ಹಂಚಾಟೆ, ಸುಭಾಷ್‌ ಬಿದರಕುಂದಿ, ಹನುಮಂತ ನಲವಡೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

ಜೆಡಿಎಸ್‌ ಪ್ರಚಾರ: ಜೆಡಿಎಸ್‌ ಧುರೀಣೆ ಮಂಗಳಾದೇವಿ ಬಿರಾದಾರ ಸೋಮವಾರ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿ ಮನೆಮನೆಗೆ ತೆರಳಿ ಕರಪತ್ರ ಹಂಚಿ ಮತಯಾಚಿಸಿದರು.

ಈ ಹಿಂದಿನ ಪುರಸಭೆ ಆಡಳಿತದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಗೊಂಡಿದ್ದರು. ಅದೇ ಲೆಕ್ಕಾಚಾರದಲ್ಲಿ ಈ ಬಾರಿಯೂ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಆಯ್ಕೆಗೊಳ್ಳುತ್ತಾರೆ ಎನ್ನುವ ವಿಶ್ವಾಸ ಇದೆ. ರಾಜ್ಯದಲ್ಲಿ ನಮ್ಮದೇ ಪಕ್ಷದ ಆಡಳಿತ ಇದೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜನಪರ ಆಡಳಿತ ನೀಡುತ್ತಿದ್ದಾರೆ. ಅವರ ಕೈ ಬಲಪಡಿಸಲು, ಪುರಸಭೆಗೆ ಹೆಚ್ಚಿನ ಅನುದಾನ ತಂದು ಪಟ್ಟಣವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಬಿಜೆಪಿಗೆ ಅಸಾಧ್ಯ. ಜೆಡಿಎಸ್‌ಗೆ ಅಧಿಕಾರ ಕೊಟ್ಟಲ್ಲಿ ಮಾತ್ರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ನಡೆಯಲಿದೆ. ಇದಕ್ಕಾಗಿ ಜೆಡಿಎಸ್‌ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಬೇಕು ಎಂದು ಮಂಗಳಾದೇವಿ ಮನವಿ ಮಾಡಿಕೊಂಡರು.

ಧುರೀಣರಾದ ಶಾಂತಗೌಡ ಬಿರಾದಾರ, ಹಿರಿಯ ನ್ಯಾಯವಾದಿ ಜೆ.ಎ. ಚಿನಿವಾರ, ಅರವಿಂದ ಕಾಶಿನಕುಂಟಿ, ರಮೇಶ ಕಮತ, ರವಿ ಬಡಿಗೇರ, ಲಕ್ಷ್ಮಣ ದಾಸರ, ಬಿ.ಎಚ್‌.ಹಾಲಣ್ಣವರ್‌, ಜೆಡಿಎಸ್‌ ಅಭ್ಯರ್ಥಿ ಹರೀಶ ನಾಟೀಕಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
 
ಕಾಂಗ್ರೆಸ್‌ ಪ್ರಚಾರ: ಕಾಂಗ್ರೆಸ್‌ ಅಭ್ಯರ್ಥಿಗಳು ಕೂಡಾ ತಮ್ಮ ಮುಖಂಡರ ಸಮ್ಮುಖದಲ್ಲಿ ಆಯಾ ವಾರ್ಡ್‌ಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದು ಅಲ್ಲಲ್ಲಿ ಕಂಡು ಬಂತು. ಕೆಲವು ಬಡಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು
ಯಾವುದೇ ನಾಯಕರ ಉಪಸ್ಥಿತಿ ಇಲ್ಲದೆ ಸ್ವತಃ ತಾವೇ, ತಮ್ಮ ಬೆಂಬಲಿಗರೊಂದಿಗೆ ಸ್ವಂತ ಶಕ್ತಿಯ ಬಲದ ಮೇಲೆ ತಿರುಗಾಡಿ ಕರಪತ್ರ ಹಂಚಿ ಮತಯಾಚಿಸುತ್ತಿರುವುದು ಕಂಡುಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next