Advertisement
– ಇದು ಹೆಚ್ಚು ಕಡಿಮೆ 14 ವಾಹಿನಿಗಳು ನಡೆಸಿದ ಮತಗಟ್ಟೆ ಸಮೀಕ್ಷೆಯ ಫಲಿತಾಂಶದ ಸಾರಾಂಶ. ಬಹುತೇಕ ಎಲ್ಲ ಸಮೀಕ್ಷೆಗಳ ಪ್ರಕಾರ, ಕೇಂದ್ರದಲ್ಲಿ ಮತ್ತೆ ಮೋದಿ ಅವರ ಸರಕಾರವೇ ಸ್ಥಾಪಿತಗೊಳ್ಳಲಿದೆ. ಕಳೆದ ಬಾರಿಯಂತೆಯೇ ಸುಮಾರು 300 ಸೀಟುಗಳನ್ನು ಎನ್‌ಡಿಎ ಗೆಲ್ಲಲಿದೆ. ಕರ್ನಾಟಕದಲ್ಲೂ ಬಿಜೆಪಿ ತನ್ನ ಕರಾಮತ್ತು ತೋರಿಸಲಿದ್ದು, ಹೆಚ್ಚು ಕಡಿಮೆ 20 ಸೀಟುಗಳಲ್ಲಿ ಜಯ ಸಾಧಿಸಲಿದೆ ಎಂದು ಈ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
Related Articles
ಒಡಿಶಾದಲ್ಲೂ ಬಿಜೆಪಿ ತನ್ನ ಸ್ಥಾನ ಹೆಚ್ಚು ಮಾಡಿಕೊಳ್ಳ ಲಿದೆ. ಇಲ್ಲೂ ಬಿಜೆಡಿ ಮತ್ತು ಬಿಜೆಪಿ ನಡುವೆ ನೇರಾ ನೇರ ಸ್ಪರ್ಧೆ ಇದೆ. ಇಂಡಿಯಾ ಟುಡೆ-ಆ್ಯಕ್ಸಿಸ್ ಅಂತೂ ಬಿಜೆ ಡಿಗೆ ಶೂನ್ಯ ಸೀಟು ನೀಡಿದೆ. ಈ ಮಧ್ಯೆ ದಿಲ್ಲಿ, ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
Advertisement
ದಕ್ಷಿಣದಲ್ಲಿ ಬಿಜೆಪಿಗೆ ಹಿನ್ನಡೆಕರ್ನಾಟಕ ಹೊರತುಪಡಿಸಿ, ದಕ್ಷಿಣ ಭಾರತದಲ್ಲಿ ಮತದಾರ ಬಿಜೆಪಿಯತ್ತ ಕೃಪೆ ತೋರಿಲ್ಲ. ಆದರೆ ಕರ್ನಾಟದಲ್ಲಿ ಹಿಂದಿನ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನ ಸಿಗಲಿವೆ ಎಂದು ಭವಿಷ್ಯ ನುಡಿದಿವೆ. ಇಂಡಿಯಾ ಟುಡೆ-ಆ್ಯಕ್ಸಿಸ್, ನ್ಯೂಸ್ 24-ಚಾಣಕ್ಯ ಪ್ರಕಾರ ಬಿಜೆಪಿ 20ರಿಂದ 26ರ ವರೆಗೂ ಗೆಲ್ಲಬಹುದು ಎಂದಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟ ಇಲ್ಲಿ ನಷ್ಟ ಅನುಭ ವಿಸಲಿವೆ ಎಂದಿವೆ. ಇನ್ನು ಕೇರಳ,ಆಂಧ್ರ,ತೆಲಂಗಾಣದಲ್ಲಿ ಬಿಜೆಪಿ ತಲಾ ಒಂದು ಸ್ಥಾನ ಗೆಲ್ಲಬಹುದು. ಕೇರಳದಲ್ಲಿ ಶಬ ರಿಮಲೆ ವಿವಾದ ಬಿಜೆಪಿ ಕೈಹಿಡಿದಿಲ್ಲ ಎಂದು ವಿಶ್ಲೇಷಿಸಲಾ ಗಿದೆ. ಆದರೆ ತೆಲಂಗಾಣದಲ್ಲಿ ಟಿಆರ್‌ಎಸ್‌ಗೆ, ಆಂಧ್ರ ದಲ್ಲಿ ವೈಎಸ್‌ಆರ್‌ಪಿಗೆ ಗೆಲುವು ದಕ್ಕಲಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೇಲುಗೈ ಸಾಧಿಸಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈಶಾನ್ಯ ರಾಜ್ಯಗಳಲ್ಲೂ ಮೇಲುಗೈ
ಈಶಾನ್ಯ ರಾಜ್ಯದ 25 ಸ್ಥಾನಗಳಲ್ಲಿ ಬಹುತೇಕ ಸ್ಥಾನಗ ಳನ್ನು ಎನ್ ಡಿಎ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಅದರಲ್ಲೂ ಅಸ್ಸಾಂನಲ್ಲಿ ಹೆಚ್ಚಿನ ಲಾಭವಾಗ ಲಿದೆ.ಮಣಿಪುರ, ಸಿಕ್ಕಿಂ,ತ್ರಿಪುರ,ನಾಗಾಲ್ಯಾಂಡ್‌ಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿಕೊಳ್ಳಲಿದೆ. ಕಾಂಗ್ರೆಸ್-ಯುಪಿಎಗೆ ಹಿನ್ನಡೆ
ಬಡವರಿಗೆ ವಾರ್ಷಿಕ 72 ಸಾವಿರ ರೂ. ನೀಡುವ “ನ್ಯಾಯ್’ಯೋಜನೆ ಘೋಷಿಸಿದ್ದ ಕಾಂಗ್ರೆ ಸ್‌ಗೆ ಹೆಚ್ಚಿನ ಲಾಭವಾಗಿಲ್ಲ ಎಂದು ಎಲ್ಲ ಸಮೀಕ್ಷೆಗಳು ಹೇಳಿವೆ. ಆದರೆ ಹಿಂದಿ ಬೆಲ್ಟ್ ನಲ್ಲಿ ಕೆಲ ವೊಂದು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಪಂಜಾಬ್‌ನಲ್ಲಿ ಅಮ ರಿಂದರ್ ಸಿಂಗ್ ಅವರ ವರ್ಚಸ್ಸು ಕೆಲಸ ಮಾಡಲಿದೆ. ಇಲ್ಲೂ ಎನ್‌ಡಿಎಗೆ ಹಿನ್ನಡೆಯಾಗಲಿದೆ. -ನ್ಯೂಸ್ ಎಕ್ಸ್-ನೇತಾ ನಡೆಸಿದ ಸಮೀಕ್ಷೆಯಲ್ಲಿ ಮಾತ್ರ ಎನ್‌ಡಿಎಗೆ ಹಿನ್ನಡೆ -ಇಂಡಿಯಾ ಟುಡೆ-ಆ್ಯಕ್ಸಿಸ್‌ನಲ್ಲಿ ಬಿಜೆಪಿಗೆ 339-365 ಸ್ಥಾನ -ಮೂರಂಕಿ ತಲುಪುವಲ್ಲಿ ವಿಫಲವಾಗಲಿರುವ ಕಾಂಗ್ರೆಸ್, ಯುಪಿಎಗೆ 150ಕ್ಕಿಂತ ಕಡಿಮೆ -ಆಂಧ್ರದಲ್ಲಿ ನಾಯ್ಡುಗೆ ಮುಖಭಂಗ, ಟಿಎಂಸಿಗೆ ಬಿಜೆಪಿ ಭರ್ಜರಿ ಸ್ಪರ್ಧೆ – ಹಿಂದಿ ಹಾರ್ಟ್‌ಲ್ಯಾಂಡ್‌ನಲ್ಲಿ ಬಿಜೆಪಿಯ ಪ್ರಾಬಲ್ಯ ಮುಂದುವರಿಕೆ -ಮಹಾರಾಷ್ಟ್ರದಲ್ಲೂ ಬಿಜೆಪಿ ಮೈತ್ರಿಕೂಟಕ್ಕೇ ಗೆಲುವು ರಾಜ್ಯದಲ್ಲಿ ಭಾರೀ ಮುನ್ನಡೆ
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿ ಒಟ್ಟಾಗಿ ಚುನಾವಣೆ ಎದುರಿಸಿದ್ದರೂ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಹಳೇ ಮೈಸೂರು ಭಾಗದಲ್ಲೂ ಬಿಜೆಪಿ ಬಲ ವೃದ್ಧಿಸಿಕೊಂಡಿದೆ ಎಂದು ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಎಲ್ಲ ಸಮೀಕ್ಷೆಗಳನ್ನು ಸೇರಿಸಿ ಪೋಲ್ ಆಫ್ ಪೋಲ್ ಮಾಡುವುದಾದರೆ, ಬಿಜೆಪಿಗೆ 20, ಕಾಂಗ್ರೆಸ್-ಜೆಡಿಎಸ್‌ಗೆ 7 ಮತ್ತು ಇತರರಿಗೆ 1 ಸ್ಥಾನ ಸಿಗುವ ಸಂಭವವಿದೆ. ರಿಪಬ್ಲಿಕ್-ಸಿ ವೋಟರ್ ಪ್ರಕಾರ ಬಿಜೆಪಿಗೆ 18, ಕಾಂಗ್ರೆಸ್-ಜೆಡಿಎಸ್‌ಗೆ 9, ಇತರರಿಗೆ 1 ಸ್ಥಾನ ಸಿಗಲಿದೆ. ಟೈಮ್ಸ್ ನೌ-ವಿಎಂಆರ್ ಪ್ರಕಾರ ಬಿಜೆಪಿಗೆ 21, ಕಾಂಗ್ರೆಸ್-ಜೆಡಿಎಸ್‌ಗೆ 7, ಇತರರಿಗೆ ಶೂನ್ಯ ಸ್ಥಾನಗಳು ಸಿಗುವ ಸಂಭವವಿದೆ. ಎರಡು ವಾಹಿನಿಗಳು ಮಂಡ್ಯದಲ್ಲಿ ಸುಮಲತಾ ಗೆಲ್ಲಬಹುದು ಎಂದು ಭವಿಷ್ಯ ನುಡಿದಿವೆ. ಆದರೆ ಉಳಿದ ಎಲ್ಲ ವಾಹಿನಿಗಳು ಇತರರಿಗೆ ಯಾವುದೇ ಸ್ಥಾನ ನೀಡಿಲ್ಲ. ನೆಟ್‌ವರ್ಕ್ 18- ಐಪಿಎಸ್‌ಒಎಸ್ ಪ್ರಕಾರ ಬಿಜೆಪಿಗೆ 21-23, ಕಾಂಗ್ರೆಸ್ ಮೈತ್ರಿಕೂಟಕ್ಕೆ 5-7, ನ್ಯೂಸ್ 24-ಟುಡೇಸ್ ಚಾಣಕ್ಯ ಪ್ರಕಾರ ಬಿಜೆಪಿಗೆ 23, ಕಾಂಗ್ರೆಸ್ ಮೈತ್ರಿಕೂಟಕ್ಕೆ 5 ಸ್ಥಾನ ಸಿಗಲಿದೆ. ರಿಪಬ್ಲಿಕ್ ಟಿವಿ-ಜನ್ ಕಿಬಾತ್‌ನಂತೆ ಬಿಜೆಪಿಗೆ 18-20, ಕಾಂಗ್ರೆಸ್ ಮೈತ್ರಿಕೂಟಕ್ಕೆ 7-10, ಇತರರಿಗೆ 0-1 ಸ್ಥಾನ ಸಿಗುವ ಸಾಧ್ಯತೆ ಇದೆ.