Advertisement

ಬಡ ಸಿಎಂ ಖಾತೆಯಲ್ಲಿ ಬರೀ 2,400 ರೂ.

06:20 AM Jan 31, 2018 | Team Udayavani |

ಅಗರ್ತಲಾ: ದೇಶದ ಅತಿ ಬಡ ಮುಖ್ಯಮಂತ್ರಿ ಎಂದೇ ಪರಿಗಣಿಸಲ್ಪಟ್ಟಿರುವ ತ್ರಿಪುರಾ ಸಿಎಂ ಮಾಣಿಕ್‌ ಸರ್ಕಾರ್‌, ಈಗಲೂ ಅದೇ ಹೆಗ್ಗಳಿಕೆಯಲ್ಲೇ ಮುಂದುವರಿದಿದ್ದಾರೆ. 

Advertisement

ಆಡಳಿತಾರೂಢ ಸಿಪಿಎಂ ಪಕ್ಷದ ಪಾಲಿಟ್‌ ಬ್ಯೂರೋ ಸದಸ್ಯರೂ ಆಗಿರುವ ಮಾಣಿಕ್‌ ಸರ್ಕಾರ್‌, ಸದ್ಯದಲ್ಲೇ ನಡೆಯಲಿರುವ ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ವೇಳೆ, ಅವರ ಬ್ಯಾಂಕ್‌ ಖಾತೆಯಲ್ಲಿ 2,410.16 ರೂ. ಇರುವುದು ಬೆಳಕಿಗೆ ಬಂದಿದೆ. ಇದು, 2013ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಅವರ ಬ್ಯಾಂಕ್‌ ಖಾತೆಯಲ್ಲಿ 9,720.38 ರೂ. ಇತ್ತು. ಈಗ ಅವರು ಅದಕ್ಕಿಂತಲೂ ಕಡಿಮೆ ಬ್ಯಾಲೆನ್ಸ್‌ ಹೊಂದಿದ್ದಾರೆ. 

ಇನ್ನು, ಅಗರ್ತಲಾದಲ್ಲಿ ತಮ್ಮ ಪೂರ್ವಿಕರಿಂದ ಬಂದಿರುವ, ತಮ್ಮ ಸಹೋದರರೊಂದಿಗೆ ಸ್ವಾಭಾವಿಕವಾಗಿ ಸಹ ಮಾಲೀಕತ್ವ ಹೊಂದಿರುವ 0.0118 ಎಕರೆ ಭೂಮಿಯೇ ತಮಗೆ ಸಂಬಂಧಪಟ್ಟ ಏಕೈಕ ಸ್ಥಿರಾಸ್ತಿಯೆಂದು ಅವರು ಘೋಷಿಸಿಕೊಂಡಿದ್ದಾರೆ. 

ಹೀಗೆ ನಡೆಯುತ್ತಿದೆ ಸಿಎಂ ಜೀವನ: ತಮ್ಮ ಮೌಲ್ಯಯುತ ಜೀವನದಿಂದಲೇ ಜನರ ವಿಶೇಷ ಪ್ರೀತಿ ಗಳಿಸಿರುವ 68 ವರ್ಷದ ಸರ್ಕಾರ್‌, 1998ರಿಂದ ಈವರೆಗೆ ಸತತ 6ನೇ ಬಾರಿಗೆ ಸರ್ಕಾರ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ತಾವು ಪಡೆಯುವ ಮಾಸಿಕ 26,315 ರೂ.ಗಳನ್ನು ಪೂರ್ತಿಯಾಗಿ ಸಿಪಿಎಂ ನಿಧಿಗೆ ದೇಣಿಗೆ ನೀಡುತ್ತಾರೆ. ಇದಕ್ಕೆ ಪ್ರತಿಯಾಗಿ, ಇವರ ಜೀವನಾಂಶದ ರೂಪದಲ್ಲಿ ಪಕ್ಷವು ಇವರಿಗೆ ಮಾಸಿಕ 9,700 ರೂ. ಹಣ ನೀಡುತ್ತದೆ. ಹೀಗೆ, ಸರಳವಾಗಿ ಸಾಗುತ್ತಿದೆ ಇವರ ಜೀವನ.

Advertisement

Udayavani is now on Telegram. Click here to join our channel and stay updated with the latest news.

Next