Advertisement

ಡಾಲರ್‌ ಹೆಸರಲ್ಲಿ ಖಾಲಿ ಹಾಳೆ ನೀಡಿ ವಂಚನೆ

09:35 AM Nov 25, 2021 | Team Udayavani |

ಬೆಂಗಳೂರು: ಡಾಲರ್‌ನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿ ಕೊಡಲು ಮುಂದಾದ ವ್ಯಕ್ತಿಗೆ ಮಹಿಳೆ ಯೊಬ್ಬರು ಯಾಮಾರಿಸಿ ಸುಮಾರು 98 ಸಾವಿರ ರೂ. ವಂಚನೆ ನಡೆಸಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ.

Advertisement

ಕುಮಾರ್‌ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ. ವಂಚನೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ತಾನು ಕೆಲಸ ಮಾಡುವ ಜಾಗದಲ್ಲಿ ಕಸ ಗುಡಿಸುವಾಗ ಯುಎಸ್‌ಎ ಮುಖಬೆಲೆಯ 800 ಡಾಲರ್‌ ನೋಟುಗಳು ಸಿಕ್ಕಿವೆ ಎಂದಿರುವ ಮಹಿಳೆ ತನ್ನ ಬಳಿಯಿದ್ದ ನೋಟುಗಳನ್ನು ಸ್ಥಳೀಯ ನಿವಾಸಿ ಕುಮಾರ್‌ ಎಂಬಾತನಿಗೆ ತೋರಿಸಿದ್ದಾಳೆ.

ಅದನ್ನು ನೋಡಿದ ಕುಮಾರ್‌ ಅವರು ಫಾರಿನ್‌ ಎಕ್ಸ್‌ ಚೇಂಜ್‌ ಸೆಂಟರ್‌ ಗೆ ಹೋಗಿ ಪರಿಶೀಲಿಸಿದ್ದಾರೆ. ಆಗ ಅವು ಅಸಲಿ ನೋಟುಗಳೆಂದು ತಿಳಿದುಬಂದಿದೆ. ಅನಂತರ ಆಕೆ ನನ್ನ ಬಳಿಯಿರುವ ಡಾಲರ್‌ಗಳನ್ನು ಭಾರತೀಯ ನೋಟುಗಳಾಗಿ ಪರಿವರ್ತಿಸಿ 1 ಲಕ್ಷ ರೂ. ನೀಡುವಂತೆ ಕೇಳಿದ್ದಾಳೆ.

ಇದನ್ನೂ ಓದಿ:- ಬೋಲ್ಡ್‌ ಲುಕ್ ನಲ್ಲಿ ನಿಶ್ವಿ‌ಕಾ ನಾಯ್ಡು: ‘ದಿಲ್‌ ಪಸಂದ್‌’ ನಲ್ಲಿ ರೊಮ್ಯಾಂಟಿಕ್‌ ಜೋಡಿ

ಆಕೆಯ ಮಾತನ್ನು ನಂಬಿದ ಕುಮಾರ್‌ ಮಾತುಕತೆಯಂತೆ ನ.17ರಂದು ಯಶವಂತಪುರಕ್ಕೆ ಹಣದ ಸಮೇತ ಬಂದಿದ್ದು ಬಟ್ಟೆಯಲ್ಲಿ ಸುತ್ತಿದ ವಸ್ತುವನ್ನು ಹಣವೆಂದು ಮಹಿಳೆ ನೀಡಿದ್ದಾಳೆ. ಕುಮಾರ್‌ 98 ಸಾವಿರ ರೂ. ನೀಡುತ್ತಿದ್ದಂತೆ ವಂಚಕಿ ಕ್ಷಣಾರ್ಧದಲ್ಲಿ ತಲೆಮರೆಸಿ ಕೊಂಡಿದ್ದಾಳೆ. ಕುಮಾರ್‌ ಬಂಡಲ್‌ ಬಿಚ್ಚಿ ನೋಡಿದಾಗ ಖಾಲಿ ಹಾಳೆಗಳಿದ್ದು ಮೋಸ ಹೋಗಿರುವುದು ಗೊತ್ತಾಗಿ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next