Advertisement

ಕೇರಳ ಮಾದರಿಯಲ್ಲಿ ಗ್ರಾ.ಪಂ. ಸದಸ್ಯರಿಗೆ ಗೌರವ ಧನ ಸಿಗಲು ಪ್ರಯತ್ನ:  ಮಹಾಂತೇಶ ಕವಟಗಿಮಠ

03:05 PM Dec 05, 2021 | Team Udayavani |

ಚಿಕ್ಕೋಡಿ: ಗ್ರಾಮ ಪಂಚಾಯತಿ ಸದಸ್ಯರಿಗೆ ಸಮರ್ಪಕ ಗೌರವ ಧನ ಸಿಗುತ್ತಿಲ್ಲ. ಸಕಾಲದಲ್ಲಿ ಸದಸ್ಯರಿಗೆ ಗೌರವ ಧನ ಸಿಗಬೇಕೆನ್ನುವ ದೃಷ್ಟಿಯಿಂದ ಕೇರಳ ಮಾದರಿಯಲ್ಲಿ ಸ್ಥಳೀಯ ಸಂಸ್ಥೆಯ ಸದಸ್ಯರಿಗೆ ಗೌರವದಿಂದ ಗೌರವ ಧನ ಸಿಗಲು ಪ್ರಯತ್ನ ಮಾಡುತ್ತೇನೆ ಎಂದು ಬೆಳಗಾವಿ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಹೇಳಿದರು.

Advertisement

ಚಿಕ್ಕೋಡಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯನಾಗಿ ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನ ಒದಗಿಸಿರುವ ತೃಪ್ತಿ ಇದೆ. ಡಿ.10 ರಂದು ನಡೆಯುವ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆ ಮಾಡಬೇಕೆಂದು ಅವರು ಮನವಿ ಮಾಡಿದರು.

ಶಾಸಕರು ಮಾಡುವ ಕೆಲಸದಂತೆ ವಿಧಾನ ಪರಿಷತ್ ಸದಸ್ಯರು ಕೆಲಸ ಮಾಡಬಹುದು ಎಂಬುದು ಕಳೆದ ಎರಡು ಅವಧಿಯಲ್ಲಿ ತೋರಿಸಿಕೊಟ್ಟಿದ್ದೇನೆ. ಬೆಳಗಾವಿ ಜಿಲ್ಲೆಯ ಕಡು ಬಡವರಿಗೆ 10 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆ ಮಾಡುವ ಉದ್ದೇಶದಿಂದ 100 ಬ್ಯಾರೇಜ ನಿರ್ಮಾಣ ಮಾಡಲು ಕನಸ್ಸು ಇಟ್ಟುಕೊಂಡಿದ್ದು, ಚಿಕ್ಕೋಡಿ, ರಾಯಬಾಗ ಹಾಗೂ ಖಾನಾಪೂರ ಸೇರಿದಂತೆ ವಿವಿಧ ತಾಲೂಕಿನಲ್ಲಿ 25 ಕ್ಕೂ ಹೆಚ್ಚು ಬ್ಯಾರೇಜ ನಿರ್ಮಾಣ ಮಾಡಿ ಲೋಕಾರ್ಪಣೆಗೊಳಿಸಲಾಗಿದೆ. ಕೇರಳ ಮಾದರಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನ ತ್ವರಿತವಾಗಿ ಸಿಗಲು ಸರಕಾರದ ಮಟ್ಟದಲ್ಲಿ ಹೋರಾಟ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next