Advertisement

ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ ಶೇ. 80.57 ಮತದಾನ

08:13 PM Apr 25, 2019 | Team Udayavani |

ಕಾಸರಗೋಡು: 17ನೇ ಲೋಕಸಭೆ ಚುನಾವಣೆ ನಡೆದ ವೇಳೆ ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ ಒಟ್ಟು ಶೇ. 80.57 ಮತದಾನ ನಡೆದಿದೆ.

Advertisement

7 ವಿಧಾನಸಭೆ ಕ್ಷೇತ್ರಗಳು ಸೇರಿರುವ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿರುವ ಒಟ್ಟು 13,60,827 ಮತದಾತರಲ್ಲಿ 10,96,470 ಮಂದಿ ಮತಚಲಾವಣೆ ನಡೆಸಿದ್ದಾರೆ. ಇವರಲ್ಲಿ 5,07,594 ಮಂದಿ ಪುರುಷರು, 5,88,875 ಮಹಿಳೆಯರು, ಒಬ್ಬ ಟ್ರಾನ್ಸ್‌ ಜೆಂಡರ್‌ ಮತದಾನ ಮಾಡಿದ್ದಾರೆ.

6,56,433 ಮಂದಿ ಪುರುಷರು, 7,04,392 ಮಹಿಳೆಯರು ಮತದಾತರ ಪಟ್ಟಿಯಲ್ಲಿದ್ದಾರೆ. ಮತದಾನ ನಡೆಸಿದವರಲ್ಲಿ ಮಹಿಳೆಯರು ಅಗ್ರ ಸ್ಥಾನದಲ್ಲಿದ್ದಾರೆ. 2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿನ ಮತದಾನವನ್ನು ಹೋಲಿಸಿದರೆ, ಈ ಬಾರಿ ಮತದಾನ ನಡೆಸಿದವರ ಸಂಖ್ಯೆಯಲ್ಲಿ ಹೆಚ್ಚಳವುಂಟಾಗಿದೆ. ಕಳೆದ ಬಾರಿ ಶೇ. 78.49 ಮತದಾನ ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದಿತ್ತು. ಪಯ್ಯೂನ್ನೂರು ಲೋಕಸಭೆ ಕ್ಷೇತ್ರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮತದಾನ ನಡೆದಿದೆ. ಇಲ್ಲಿ ಶೇ. 83.31 ಮತ ಚಲಾವಣೆಯಾಗಿದೆ. ಇಲ್ಲಿ ಒಟ್ಟು ಇರುವ 1,75,116 ಮತದಾರರಲ್ಲಿ 1,50,358 ಮಂದಿ ಮತದಾನ ಮಾಡಿದ್ದಾರೆ. ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ನಡೆದಿದೆ. ಇಲ್ಲಿ ಶೇ. 75.87 ಮತದಾನ ಜರಗಿದೆ. ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಶೇ. 76.32, ಉದುಮದಲ್ಲಿ ಶೇ. 79.33, ಕಾಂಞಂಗಾಡ್‌ನ‌ಲ್ಲಿ ಶೇ. 81.06, ತೃಕ್ಕ‌ರಿಪುರದಲ್ಲಿ ಶೇ. 83.46, ಕಲ್ಯಾಶೆÏàರಿಯಲ್ಲಿ ಶೇ. 83.06 ಮತದಾನ ನಡೆದಿದೆ.

1,317 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ಸಾಧಾರಣ ಗತಿಯಲ್ಲಿ ಮತಚಲಾವಣೆ ಪ್ರಕ್ರಿಯೆ ಜರುಗಿತ್ತು. ಕೆಲವೆಡೆ ನಂತರವೂ ಬೇರೆ ಬೇರೆ ಕಾರಣಗಳಿಂದ ಮತದಾನ ರಾತ್ರಿ ವರೆಗೂ ಮುಂದುವರಿದಿತ್ತು. ಚುನಾವಣ ಕರ್ತವ್ಯಕ್ಕೆ 3,827 ಸರಕಾರಿ ಸಿಬಂದಿಯನ್ನು, 668 ರಿಸರ್ವ್‌ ಸಿಬಂದಿಯನ್ನು ನೇಮಿಸಲಾಗಿತ್ತು. ಸಂರಕ್ಷಣೆ ನಿಟ್ಟಿನಲ್ಲಿ 2641 ಪೊಲೀಸರನ್ನು ನೇಮಕ ಮಾಡಲಾಗಿತ್ತು.

ಪಡನ್ನಕ್ಕಾಡ್‌ ಸ್ಟ್ರಾಂಗ್‌ ರೂಂ
ಪಡನ್ನಕ್ಕಾಡ್‌ ನೆಹರೂ ಕಲಾ-ವಿಜ್ಞಾನ ಕಾಲೇಜು ಜಿಲ್ಲೆಯ ಮತಗಣನೆ ಕೇಂದ್ರವಾಗಿದೆ. ಇಲ್ಲಿನ 15 ಸ್ಟ್ರಾಂಗ್‌ ರೂಂಗಳಲ್ಲಿ 1,317 ಮತಗಟ್ಟೆಗಳ ವಿವಿಪ್ಯಾಟ್‌ ಸಹಿತದ ಮತಯಂತ್ರಗಳನ್ನು ದಾಸ್ತಾನು ಇರಿಸಲಾಗಿದೆ. ಸ್ಟ್ರಾಂಗ್‌ ರೂಂ ಗಳಿಗೆ ಸೀಲ್‌ ಹಾಕಿ ಕೀಲಿಕೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಮತಗಣನೆ ಮೇ 23ರಂದು ನಡೆಯಲಿದ್ದು, ಅಲ್ಲಿ ವರೆಗೆ ಸುರಕ್ಷೆ ವ್ಯವಸ್ಥೆಗಳು ಮುಂದುವರಿಯಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next