ನಮ್ಮ ಪರಿಸರದಲ್ಲಿ ಅದೆಷ್ಟು ಔಷಧೀಯ ಗುಣಗಳಿರುವ ಸಸ್ಯ ಪ್ರಭೇದಗಳಿವೆ. ಪ್ರಭೇದಗಳನ್ನು ಗುರುತಿಸಿ ಅವುಗಳಲ್ಲಿ ಔಷಧೀಯ ಗುಣಗಳಿವೆ ಎಂಬುದನ್ನು ನಾವು ತಿಳಿದು ಕೊಂಡಿರುವುದಿಲ್ಲ, ಆರೋಗ್ಯವನ್ನು ಕಾಪಾಡುವಲ್ಲಿ ಹಣ್ಣುಗಳು ಸಹ ಮುಖ್ಯ ಪಾತ್ರವಹಿಸಿದ್ದು, ಕೆಲವೊಂದು ಹಣ್ಣುಗಳನ್ನು ತಿಂದರೆ ಅನೇಕ ಕಾಯಿಲೆಗಳು ದೂರವಾಗುತ್ತದೆ. ಇದರಂತೆ ನೋನಿ ಹಣ್ಣು ಕೂಡ ಇದನ್ನು ಸೇವಿಸಿದರೆ ಆರೋಗ್ಯ ವೃದ್ಧಿಸುವುದು ಖಂಡಿತ.
ನೋನಿ ಹಣ್ಣು ಇದು ಮೂಲತಃ ಭಾರತದ ಔಷಧೀಯ ಹಣ್ಣಾಗಿದೆ. ಸುಮಾರು 150ಕ್ಕೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ನೋನಿ ಕಾಯಿಯು ಹಲವು ಕಾಯಿಲೆಗಳ ಶಮನಕ್ಕೆ ಉಪಯುಕ್ತವಾಗಿದೆ ಮಾನಸಿಕ ಒತ್ತಡ ಅಲರ್ಜಿ ಅಸ್ತಮಾ ಕ್ಯಾನ್ಸರ್ ಗಂಟಲು ನೋವು ಕೂದಲು ಉದರುವಿಕೆ ಸಕ್ಕರೆ ಕಾಯಿಲೆ ಮೂತ್ರಜನಕಾಂಗದ ಕಾಯಿಲೆ ಚರ್ಮರೋಗ ಕೆಮ್ಮು ಜ್ವರಗಳಂಥ ಕಾಯಿಲೆಗಳಿಗೂ ಕೂಡ ರಾಮಬಾಣವಾಗಿದೆ.
ವಿಟಮಿನ್ ಸಿ, ಎ, ಬಿ ಮತ್ತು ಕಬ್ಬಿಣದ ಅಂಶಗಳನ್ನು ಹೊಂದಿರುವ ನೋನಿ ಹಣ್ಣಿನ ಬಳಕೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.
ಈ ಹಣ್ಣಿನಲ್ಲಿ ಔಷಧೀಯ ಗುಣಗಳ ಬಗ್ಗೆ ವಿಶ್ವವಿದ್ಯಾನಿಲಯದ ಸಂಶೋಧನೆಯಿಂದಲೂ ದೃಢಪಟ್ಟಿದ್ದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು, ಮಾನಸಿಕ ಒತ್ತಡದಿಂದ ಮುಕ್ತರಾಗಲು, ನಿದ್ರೆಯ ಸಮಸ್ಯೆ ಇರುವವರು, ಸುಸ್ತು ಕಾಡುತ್ತಿರುವವರು, ಉಸಿರಾಟದ ಸಮಸ್ಯೆ ಇರುವವರು, ಮಲಬದ್ಧತೆ, ರಕ್ತದೊತ್ತಡ, ಕೀಲುನೋವು, ಹೃದಯಸಂಬಂಧಿ ಕಾಯಿಲೆಗಳು, ಖನ್ನತೆಯಿಂದ ಬಳಲುತ್ತಿರುವವರು ಹಾಗೂ ಪಿತ್ತಜನಕಾಂಗ ಮೂತ್ರಜನಕಾಂಗದ ನಿರ್ವಹಣೆಗೆ ಸುಗಮವಾಗುವಂತೆ ನೋಡಿಕೊಳ್ಳಲು ಈ ಹಣ್ಣು ನೆರವಾಗುತ್ತದೆ ನೋನಿಯನ್ನು ಔಷಧಿಯಾಗಿ ಸೇವಿಸುವರು ಮೊದಲ ಮೂರು ದಿನ ಬೆಳಗಿನ ಉಪಹಾರಕ್ಕೆ ಮುಂಚಿತವಾಗಿ ಒಂದು ಟೀ ಸ್ಪೂನ್ ಸೇವಿಸಬೇಕು. ಒಂದು ತಿಂಗಳ ಸೇವನೆಯ ಅನಂತರ ಉಪಹಾರಕ್ಕೆ ಮುಂಚೆ ಎರಡು ಸ್ಪೂನ್, ಮಧ್ಯಾಹ್ನ ಊಟಕ್ಕಿಂತ ಮೊದಲು 2 ಸ್ಪೂನ್ ರಸವನ್ನು ಸೇವಿಸಬೇಕು.
ಹೊಸ ಚೈತನ್ಯ
ಔಷಧೀಯ ಗುಣವನ್ನು ಹೊಂದಿರುವ ಈ ನೋನಿಯ ಜೊತೆ ನೀರು, ಬೆಲ್ಲ, ಏಲಕ್ಕಿ ಸೇರಿಸಿ ಜ್ಯೂಸ್ ಮಾಡಿದಾಗ ಹಾಲಿನಂತೆ ನೊರೆಯು ಬರುತ್ತದೆ ಕುಡಿಯುವುದಕ್ಕೂ ಬಹಳ ರುಚಿಯಾಗಿದ್ದು, ಪ್ರತಿನಿತ್ಯ ಇದರ ಸೇವನೆ ಮಾಡಿದರಿಂದ ಆರೋಗ್ಯಕ್ಕೆ ಹೊಸ ಚೈತನ್ಯ ಪಡೆದಂತಾಗುತ್ತದೆ.
- ರಾಜೇಶ್ ಎಂ. ಕಾನರ್ಪ