ಮಡಿಕೇರಿ: ಕೊಡಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಅವರ ಆದರ್ಶಗಳು ಎಲ್ಲರ ಹೃದಯಗಳಲ್ಲಿ ಇರಬೇಕು. ಕೇವಲ ಪ್ರತಿಮೆಗಳನ್ನು ಪ್ರತಿಷ್ಟಾಪಿಸಿ ರಾಜಕಾರಣಿಗಳು ಮಾಲೆ ಹಾಕುವುದರಿಂದ ಪ್ರಯೋಜನವೇನು ಇಲ್ಲವೆಂದು ಖ್ಯಾತ ವಾಗ್ಮಿ ಸಾಹಿತಿ ಹಿರೇಮಗಳೂರು ಕಣ್ಣನ್ ಹೇಳಿದರು.
ಮೂರ್ನಾಡು ವಿದ್ಯಾಸಂಸ್ಥೆ, ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತು ಮತ್ತು ಮೂರ್ನಾಡು ಹೋಬಳಿ ಜಾನಪದ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ದೇಶದ್ದು ಟೇಕ್ ಕೇರ್ ಸಂಸ್ಕೃತಿ, ಡೋಂಟ್ ಕೇರ್ ಸಂಸ್ಕೃತಿ ಅಲ್ಲವೆಂದು ತಿಳಿಸಿದ ಹಿರೇಮಗಳೂರು ಕಣ್ಣನ್, ನಮ್ಮ ಅಹಂಕಾರಗಳು ಪ್ರಕೃತಿಯ ಮುಂದೆ ನಿಲ್ಲುವುದಿಲ್ಲ. ವಿದ್ಯೆ ಪವಿತ್ರವಾದುದು. ಆದರೆ ಈಗಿನ ವಿದ್ಯಾ ಕ್ಷೇತ್ರಗಳ ದೃಷ್ಟಿಕೋನವೆ ಬೇರೆಯಾಗಿದೆ. ಸಂಬಳಕ್ಕಾಗಿಯೆ ಕರ್ತವ್ಯ ನಿರ್ವಹಿಸಿದರೆ ಸಂಸ್ಕೃತಿ ಬೆಳೆಸುವ ಕಾರ್ಯ ಸ್ಥಗಿತವಾಗುತ್ತ ದೆಂದರು.ಅಧ್ಯಕ್ಷತೆಯನ್ನು ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ವಹಿಸಿದ್ದರು. ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಾ ಮಲ್ಲಿಕಾರ್ಜುನ ಸ್ವಾಮಿ, ವಿದ್ಯಾ ಸಂಸ್ಥೆ ಕಾರ್ಯದರ್ಶಿ ಚೌರೀರ ಪೆಮ್ಮಯ್ಯ, ಪುದಿಯೊಕ್ಕಡ ಸುಬ್ರಮಣಿ, ಬಡುವಂಡ ಸುಬ್ರಮಣಿ, ಪೆಮ್ಮುಡಿಯಂಡ ವೇಣು ಅಪ್ಪಣ್ಣ, ನಂದೇಟಿರ ರಾಜಾ ಮಾದಪ್ಪ, ಕುಶಾಲಪ್ಪ, ಸುಶೀಲಾಮೂರ್ನಾಡು ಹೋಬಳಿ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಡಿ. ಪ್ರಶಾಂತ್, ಕೆ.ಜಿ. ಹರೀಶ್, ನವೀನ್ ಕಮಲು ಮುದ್ದಯ್ಯ ಉಪಸ್ಥಿತರಿದ್ದರು
ನೋವು ನೀಡದಿರಿ
ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಜಿ. ಅನಂತಶಯನ ಭತ್ತ, ಬೆಲ್ಲ, ತೆಂಗಿನಕಾಯಿಗಳನ್ನು ಇಡುವುದರೊಂದಿಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ದೇಶದ ಮಹಾನುಭಾವರನ್ನೆಲ್ಲಾ ಇಂದಿನವರು ಮರೆಯತ್ತಿದ್ದೇವೆ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಎಲ್ಲವನ್ನು ತ್ಯಾಗ ಮಾಡಿರುತ್ತಾರೆ. ಅವರನ್ನು ಮನೆಯಿಂದ ಹೊರದೂಡುವುದು ಧರ್ಮವಲ್ಲ. ಪೋಷಕರಿಗೆ ನಗು ಕೊಡಲು ಸಾಧ್ಯವಾಗದಿದ್ದರೂ ನೋವು ನೀಡಬಾರದೆಂದರು. ಹೋಬಳಿ ಜಾನಪದ ಸಾಹಿತ್ಯ ಪರಿಷತ್ತಿ ನಿಂದ ವಿಶೇಷ ಕಾರ್ಯ ಕ್ರವ ಆಯೋಜಿಸಲಾಗುತ್ತಿದೆ ಎಂದರು.