ಈಶ್ವರಮಂಗಲ: ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ನೇತೃತ್ವದಲ್ಲಿ ಹನುಮಗಿರಿ ಕ್ಷೇತ್ರದಲ್ಲಿ ರಾಮ ನವಮಿ (ಎ.13)ಯಂದು ಪ್ರಾರಂಭವಾದ ಹನುಮಗಿರಿ ಜಾತ್ರೆಯು ಹನುಮಜಯಂತಿಯಂದು (ಎ.19) ವಿವಿಧ ಧಾರ್ಮಿಕ ಕಾರ್ಯಕ್ರಮಗ ಳೊಂದಿಗೆ ಸಂಪನ್ನಗೊಂಡಿತು. ಶುಕ್ರವಾರ ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಅನ್ನ ಸಂತರ್ಪಣೆ ನಡೆಯಿತು. ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು.
ಗುರುವಾರ ಬೆಳಗ್ಗೆ ನಾಗ ತಂಬಿಲ, ಗಣಪತಿ ಹೋಮ, ಮಧ್ಯಾಹ್ನ ವಿಶೇಷ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತ ರ್ಪಣೆ, ಸಂಜೆ ತಾಯಂಬಕ ಸೇವೆ, ಮಹಾ ಪೂಜೆ, ಶ್ರೀ ದೇವರ ಬಲಿ ಹೊರಡುವುದು, ಉತ್ಸವ ಬಲಿ, ನೃತ್ಯ ಬಲಿ, ಬೆಡಿ ಸೇವೆ, ಕಟ್ಟೆ ಪೂಜೆ, ಅನ್ನ ಸಂತರ್ಪಣೆ ನಡೆಯಿತು.
ಕ್ಷೇತ್ರದ ಮಹಾಪೋಷಕ ಜಿ.ಕೆ.ಮಹಾಬಲೇಶ್ವರ ಭಟ್, ಕ್ಷೇತ್ರ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡಿತ್ತಾಯ, ಧರ್ಮದರ್ಶಿಗಳಾದ ಶಿವರಾಮ ಪಿ., ಶಿವರಾಮ ಶರ್ಮ, ರಘು ರಾಜ್, ಶಿವಪ್ರಸಾದ ಇ. ಉಪಸ್ಥಿತರಿದ್ದರು.
ಭಜನೆ ಸ್ಪರ್ಧೆ ಫೈನಲ್
ಕ್ಷೇತ್ರದಲ್ಲಿ ಸಾಂಪ್ರದಾಯಿಕ ಭಜನೆ ಸ್ಪರ್ಧೆ ನಡೆಯುತ್ತಿದ್ದು, 74ತಂಡಗಳು ಭಾಗವಹಿಸುತ್ತಿವೆ. ಪ್ರತಿನಿತ್ಯ 5 ಅಥವಾ 6 ಭಜನ ತಂಡಗಳು ಸ್ಪರ್ಧಿಸುತ್ತಿವೆ. ಎಂಟು ತಂಡಗಳು ಕೊನೆಯ ಸುತ್ತಿಗೆ ಆಯ್ಕೆಯಾಗಲಿದ್ದು, ಎ. 21ರಂದು ಫೈನಲ್ ನಡೆಯಲಿದೆ.
ಶುಕ್ರವಾರ ಅಪರಾಹ್ನ ಶ್ರೀ ಕೋದಂಡರಾಮ ಮತ್ತು ಆಂಜನೇಯ ಕ್ಷೇತ್ರದಲ್ಲಿ ಭಜನಾ ಸ್ಪರ್ಧೆ ಏಕಕಾಲದಲ್ಲಿ ನಡೆಯಿತು. ಶನಿವಾರವೂ ಅಪರಾಹ್ನ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ. ಎ. 21ರಂದು ಸಂಜೆ ಭಜನ ಮಂಗಳ ನಡೆಯಲಿದೆ. ಖ್ಯಾತ ಸಂಗೀತ ವಿಮರ್ಶಕಿ ಅನುಪಮಾ ಅರವಿಂದ ಕುಮಾರ್, ಬೆಂಗಳೂರು ಉತ್ಛ ನ್ಯಾಯಾಲಯದ ಹಿರಿಯ ವಕೀಲ ಶಶಿಕಿರಣ್ ಭಾಗವಹಿಸಲಿದ್ದಾರೆ.