Advertisement
272 ರನ್ ಗಳ ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾಗಿ ಬಂದ ಕೊಹ್ಲಿ 5 , ಧವನ್ 8 ರನ್ ಗಳಿಸಿ ಔಟಾದರು. ತಂಡಕ್ಕೆ ಆಧಾರವಾದ ಶ್ರೇಯಸ್ ಅಯ್ಯರ್ 82(102 ಎಸೆತ), ವಾಷಿಂಗ್ಟನ್ ಸುಂದರ್ 11, ರಾಹುಲ್ 14 , ರನ್ ಗಳಿಸಿ ಬೇಗನೆ ನಿರ್ಗಮಿಸಿದರು. ಗೆಲುವಿನ ಭರವಸೆ ಮೂಡಿಸಿದ್ದ ಅಕ್ಷರ್ ಪಟೇಲ್ 56 ರನ್ ಗಳಿಸಿದ್ದ ವೇಳೆ ಔಟಾದರು. ಶಾರ್ದೂಲ್ ಠಾಕೂರ್ 7, ದೀಪಕ್ ಚಾಹರ್ 11 ರನ್ ಗಳಿಗೆ ಔಟಾದರು.
Related Articles
Advertisement
ವಿಕೆಟ್ ಕೀಪರ್, ಉಪನಾಯಕ ಕೆ.ಎಲ್. ರಾಹುಲ್ ಅವರು ರೋಹಿತ್ ಅನುಪಸ್ಥಿತಿ ಇದ್ದ ವೇಳೆ ನಾಯಕತ್ವವನ್ನು ವಹಿಸಿಕೊಂಡಿದ್ದರು.
ಅಮೋಘ ಅಜೇಯ ಶತಕ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಮೆಹಿದಿ ಹಸನ್ ಮಿರಾಜ್ ಅವರ ಅಮೋಘ ಅಜೇಯ ಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿತು.ಅನಾಮುಲ್ 11 ರನ್ , ಲಿಟ್ಟನ್ ದಾಸ್ 7 , ಶಾಂಟೊ 21 , ಶಕೀಬ್ 8 , ಮುಶ್ಫಿಕರ್ ರಹೀಮ್ 12, ಅಫೀಫ್ ಹೊಸೈನ್ ಶೂನ್ಯಕ್ಕೆ ಔಟಾದರು. ಮಹಮ್ಮದುಲ್ಲಾ 77 ರನ್ ಗಳಿಸಿ ತಂಡಕ್ಕೆ ನೆರವಾದರು. ನಸುಮ್ ಅಹ್ಮದ್ ಔಟಾಗದೆ 18 ರನ್ ಗಳಿಸಿದರು.
ಮೊದಲ ಏಕದಿನ ಪಂದ್ಯದ ಹೀರೋ ಮಿರಾಜ್ 83 ಎಸೆತಗಳಲ್ಲಿ 100 ರನ್ ಗಳಿಸಿದರು. ಅವರಿಗೆ ಸಾಥ್ ನೀಡಿದ ಮಹ್ಮದುಲ್ಲಾ (96 ಎಸೆತಗಳಲ್ಲಿ 77) ಅವರೊಂದಿಗೆ 165 ಎಸೆತಗಳಲ್ಲಿ 148 ರನ್‌ಗಳ ಜೊತೆಯಾಟ ಆಡಿದರು. ಮೊದಲು ಭಾರತವು ಬಾಂಗ್ಲಾದೇಶವನ್ನು ಆರು ವಿಕೆಟ್‌ಗೆ 69 ರನ್‌ಗೆ ನಿಯಂತ್ರಿಸಿತ್ತು. ಇದು ಭಾರತದ ವಿರುದ್ಧದ ಏಳನೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟವಾಗಿದೆ.
ಮಿರಾಜ್ ಅವರು ಶಾರ್ದೂಲ್ ಠಾಕೂರ್ ಅವರ 50 ನೇ ಓವರ್ ನಲ್ಲಿ ಎರಡು ಸಿಕ್ಸರ್‌ಗಳನ್ನು ಸಿಡಿಸಿ ತಮ್ಮ ಅತ್ಯುತ್ತಮ ಮೊತ್ತವನ್ನು ದಾಖಲಿಸಿದರು.
ಭಾರತದ ಪರ ಬೌಲಿಂಗ್ ನಲ್ಲಿ ವಾಷಿಂಗ್ಟನ್ ಸುಂದರ್ 10ಓವರ್ ಗಳಲ್ಲಿ 37 ರನ್ ಗಳಿಸಿ 3 ವಿಕೆಟ್ ಪಡೆದರು. ಸಿರಾಜ್ 10 ಓವರ್ ಗಳಲ್ಲಿ 73 ರನ್ ನೀಡಿ 2 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್ 2 ವಿಕೆಟ್ ಪಡೆದರು.
ಡಿಸೆಂಬರ್ 10, ಶನಿವಾರ ಮೂರನೇ ಏಕದಿನ ಪಂದ್ಯ ನಡೆಯಲಿದೆ.