Advertisement
ಜಿಲ್ಲಾ ಕೇಂದ್ರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆ ಆವರಣದಲ್ಲಿ ಜನರಿಕ್ ಔಷಧ ಮಳಿಗೆ ತೆರೆಯಲು ಸ್ಥಳಾವಕಾಶ ನೀಡಲಾಗುತ್ತಿತ್ತು. ಆಸ್ಪತ್ರೆ ಮಹಾದ್ವಾರದ ಎಡಭಾಗದಲ್ಲಿಯೇ ಔಷಧ ಮಳಿಗೆ ಇದ್ದುದ್ದರಿಂದ ಕೇವಲ ಆಸ್ಪತ್ರೆ ರೋಗಿ ಗಳಿಗಷ್ಟೇ ಅಲ್ಲ, ಹೊರಗಿನಿಂದ ಬಂದ ವರಿಗೂ ರಿಯಾಯ್ತಿ ದರದಲ್ಲಿ ಔಷಧಿ ಸಿಗುತ್ತಿತ್ತು.
Related Articles
Advertisement
ಉಚಿತ ಔಷಧಿ: ಜನರಿಕ್ ಔಷಧಿ ಮಳಿಗೆಗಳನ್ನು ತೆರೆಯಬೇಕೆಂದು ಸೂಚಿಸಲಾಗಿರುವ ಜಿಲ್ಲಾ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಸರ್ಕಾರ ರಾಷ್ಟ್ರೀಯ ಉಚಿತ ಔಷಧಿ ಸರಬರಾಜು ಯೋಜನೆಯಿಂದ ಗುಣಮಟ್ಟದ ಔಷಧಿಗಳನ್ನು ಸಂಪೂರ್ಣ ಉಚಿತವಾಗಿ ರೋಗಿಗಳಿಗೆ ನೀಡಲಾಗುತ್ತಿದೆ. ಇದೇ ಕಾರಣದಿಂದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಹೊರಗಿನಿಂದ ತರುವಂತೆ ಚೀಟಿ ನೀಡುವಂತಿಲ್ಲ ಎಂಬ ಸುತ್ತೋಲೆ ಸರ್ಕಾರ ಹೊರಡಿಸಿದೆ. ಈ ಸುತ್ತೋಲೆ ಹಾಗೂ ಉಚಿತ ಔಷಧಿ ವಿತರಣೆಯಿಂದಾಗಿ ಸರಕಾರಿ ಆಸ್ಪತ್ರೆ ಆವರಣದಲ್ಲಿರುವ ಜನರಿಕ್ ಔಷಧಿ ಮಳಿಗೆಗಳು ಖಾಲಿ ಹೊಡೆಯುವಂತಾ ಯಿತು. ಖಾಸಗಿ ಯಾಗಿಯೂ ಬಹು ತೇಕ ನರ್ಸಿಂಗ್ ಹೋಮ್, ಕ್ಲಿನಿಕ್‌ಗಳಲ್ಲಿ ಅಲ್ಲಿಯೇ ಔಷಧಿ ಮಾರಾಟ ಮಾಡು ತ್ತಿರುವುದ ರಿಂದ ಜನರಿಕ್ ಔಷಧ ಮಳಿಗೆಗೆ ಗ್ರಾಹಕರೇ ಇಲ್ಲದಂತಾ ಯಿತು. ಜನರಿಕ್ ಔಷಧಿ ಮಳಿಗೆಗೆ ನಷ್ಟ ಸಂಭ ವಿಸಲು ಈ ಅಂಶವು ಪ್ರಮುಖ ಕಾರಣವಾಗಿದೆ.
ಜನತಾ ಬಜಾರ್: ಕೋಲಾರ ಎಸ್‌ಎನ್‌ಆರ್ ಆಸ್ಪತ್ರೆಯ ಆವರಣದಲ್ಲಿ 10 ವರ್ಷಗಳ ಹಿಂದೆಯೇ ಟಿಎಪಿಸಿಎಂಸ್ ಮೂಲಕ ಜನತಾ ಬಜಾರ್ ಔಷಧ ಮಳಿಗೆ ನಡೆಯುತ್ತಿದೆ. ಇಲ್ಲಿ ಸಾರ್ವ ಜನಿಕರಿಗೆ ಹತ್ತು ವರ್ಷ ಗಳಿಂದಲೂ ಶೇ.10 ರಿಯಾಯ್ತಿ ದರದಲ್ಲಿ ಔಷಧಿ ಮಾರಾಟ ಮಾಡಲಾಗುತ್ತಿದೆ. ಜನರಿಕ್ ಔಷಧಿ ಮಳಿಗೆ ಕೋಲಾರದಲ್ಲಿ ಜನ ಪ್ರಿಯ ವಾಗದಿರಲು ಜನತಾ ಬಜಾರ್ ಜನ ಪ್ರಿಯವಾಗಿರುವುದೂ ಕಾರಣ ವಾಗಿದೆ.
ತಾಲೂಕಿಗೊಂದು ಜನೌಷಧ ಮಳಿಗೆ: ಜಿಲ್ಲಾ ಕೇಂದ್ರದ ಜನರಿಕ್ ಔಷಧಿ ಮಳಿಗೆಯ ಪರಿಸ್ಥಿತಿಯೇ ಹೀಗಿರುವಾಗ ಇನ್ನು ತಾಲೂಕಿಗೊಂದರಂತೆ ತೆರೆದಿರುವ ಜನರಿಕ್ ಔಷಧಿ ಮಳಿಗೆಗಳು ತೆವಳುತ್ತಾ ಸಾಗಿವೆ. ಬಂಗಾರಪೇಟೆ ಹೊರತುಪಡಿಸಿ ಉಳಿದ ತಾಲೂಕು ಆಸ್ಪತ್ರೆಗಳಲ್ಲಿಯೂ ಜನರಿಕ್ ಔಷಧಿ ಮಳಿಗೆಗಳಿವೆ. ಆದರೂ ಇವು ಎಡವುತ್ತಾ ಸಾಗುತ್ತಿವೆ. ಆಸ್ಪತ್ರೆ ಆವರಣಗಳಲ್ಲಿರುವ ಜನರಿಕ್ ಔಷಧಿ ಮಳಿಗೆಗಿಂತಲೂ ಪ್ರತಿ ತಾಲೂಕಿಗೊಂದರಂತೆ ಖಾಸಗಿಯವರಿಗೆ ನೀಡಿರುವ ಜನೌಷಧ ಮಳಿಗೆಗಳಲ್ಲಿ ಸುಲಭ ದರದಲ್ಲಿ ಔಷಧಿಗಳು ಸಿಗು ವಂತಾಗಿದೆ. ಕೋಲಾರದ ಬ್ರಾಹ್ಮಣರ ಬೀದಿಯಲ್ಲಿರುವ ಜನೌಷಧ ಮಳಿಗೆ ಈ ನಿಟ್ಟಿನಲ್ಲಿ ಜನರ ಕೈಗೆಟುಕುತ್ತಿದೆ.
ಪತ್ರ ಬರೆದರೂ ಪ್ರತಿಕ್ರಿಯೆ ಇಲ್ಲ: ಕೋಲಾರ ಎಸ್‌ಎನ್‌ಆರ್ ಆಸ್ಪತ್ರೆಯ ಆವರಣದಲ್ಲಿದ್ದ ಜನರಿಕ್ ಔಷಧಿ ಮಳಿಗೆ ಯನ್ನು ಏಕಾಏಕಿ ಮುನ್ಸೂಚನೆ ಇಲ್ಲದೆ ಮುಚ್ಚಿಕೊಂಡು ಹೋಗಿರುವ ಕುರಿತು ಜಿಲ್ಲಾ ಶಸ್ತ್ರ ಚಿಕಿತ್ಸಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಟೆಂಡರ್ ಪಡೆದವರಿಗೂ ಪತ್ರ ಬರೆದಿದ್ದಾರೆ. ಆದರೆ, ಯಾವುದಕ್ಕೂ ಸ್ಪಂದನೆ ವ್ಯಕ್ತವಾಗಿಲ್ಲ. ಇದರಿಂದಾಗಿ ಕಳೆದ ವರ್ಷದಿಂದಲೂ ಜನಸಂಜೀವಿನಿ ಜನರಿಕ್ ಔಷಧ ಮಳಿಗೆಗೆ ಬೀಗ ಬೀಳುವಂತಾಗಿದೆ.
● ಕೆ.ಎಸ್.ಗಣೇಶ್