ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಮತ್ತೂಮ್ಮೆ “ನಂಬರ್‌ಗೇಮ್’ ಪ್ರಾರಂಭವಾಗಿದೆ.
Advertisement
ಇದೇ ತಿಂಗಳು ಸೆ.25 ರಂದು ಹಾಲಿ ಮೇಯರ್-ಉಪಮೇಯರ್ ಅವಧಿ ಮುಗಿಯಲಿದ್ದು, ಕಿಂಗ್ ಮೇಕರ್ ಆಗಿರುವ ಜೆಡಿಎಸ್, ಮತ್ತೂಂದು ಅವಧಿಗೆ ಕಾಂಗ್ರೆಸ್ ಜತೆ ಮೈತ್ರಿ ಮುಂದು ವರಿಸುವುದೋ, ಬಿಜೆಪಿ ಜತೆ ಹೋಗುವುದೋ ಅಥವಾ ತಟಸ್ಥವಾಗಿ ಉಳಿವುದೋ ಎಂಬ ಜಿಜ್ಞಾಸೆಯಲ್ಲಿದೆ.
Related Articles
Advertisement
ಈ ಮಧ್ಯೆ, ಹಾಲಿಮತದಾರರ ಪಟ್ಟಿಯಲ್ಲಿರುವವರವಿರುದ್ಧವೂ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿತಕರಾರು ತೆಗೆದು ಚುನಾವಣಾ ಆಯೋಗಕ್ಕೆ ಹೋಗಿರುವುದರಿಂದ ಮತದಾನ ದಿನದವರೆಗೂ ಲೆಕ್ಕಾಚಾರ ಏರು ಪೇರಾದರೂ ಆಶ್ಚರ್ಯವಿಲ್ಲ.
ಈ ನಡುವೆ “ಕಿಂಗ್ ಮೇಕರ್’ ಆಗಿರುವ ಜೆಡಿಎಸ್, ಕಾಂಗ್ರೆಸ್ ಜತೆ ಮತ್ತೆ ಹೋಗಬೇಕೇ, ಬಿಜೆಪಿಗೆ ಬೆಂಬಲ ಕೊಡಬೇಕೇ? ಇಲ್ಲವೇ ತಟಸ್ಥವಾಗಿರ ಬೇಕೇ ಎಂಬ ಜಿಜ್ಞಾಸೆಯಲ್ಲಿದೆ. ಈ ಬಾರಿ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರದೇ ಅಂತಿಮ ತೀರ್ಮಾನವಾದರೆ ತಟಸ್ಥವಾಗಿರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದಾಗಿ ದೇವೇಗೌಡರನ್ನು ಭೇಟಿ ಅಥವಾ ದೂರವಾಣಿ ಮೂಲಕ ಮಾತನಾಡಿ ಮಾತು ಕತೆ ನಡೆಸಿ ಮನವೊಲಿಸಿದರೆ ಮೂರನೇ ಬಾರಿ ಮೈತ್ರಿ ಮುಂದು ವರಿಯಲು ಸಾಧ್ಯ, ಆದರೆ, ಇತ್ತೀಚೆಗೆ ಗೌಡರು ನಾವೇನು ಕಾಂಗ್ರೆಸ್‌ಗೆ ಬಾಂಡ್ ಬರೆ ದುಕೊಟ್ಟಿಲ್ಲ ಎಂದು ಹೇಳಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ.
ನಗರದಲ್ಲಿ ಇತ್ತೀಚೆಗೆ ಸುರಿದ ಮಳೆ ಮತ್ತು ಅನಾಹುತ, ಸಂಚಾರ ದಟ್ಟಣೆ ಸಮಸ್ಯೆಗಳ ಬಗ್ಗೆ ನಾಗಕರಿಕರ ಆಕ್ರೋಶ ಹೆಚ್ಚಾಗಿರುವುದರಿಂದ ಕಾಂಗ್ರೆಸ್ ಜತೆ ಭಾಗಿಯಾಗುವುದು ಬೇಡ ಎಂಬುದು ಕುಮಾರಸ್ವಾಮಿಯವರ ಆಲೋಚನೆ ಎಂದು ಹೇಳಲಾಗಿದೆ.
ಚುನಾವಣೆ ವರ್ಷ ಇರುವ ಸಂದರ್ಭದಲ್ಲಿ ಪಾಲಿಕೆಯಲ್ಲಿ ಆಧಿಕಾರ ಹಿಡಿದು ರಾಜ್ಯ ಸರ್ಕಾರ ದಿಂದ ಯಾವುದೇ ಅನುದಾನ ದೊರಕದೆ ಸಮಸ್ಯೆಯಾದರೆ ಜನತೆ ಆಕ್ರೋಶ ತಮ್ಮ ಮೇಲೆ ತಿರುಗಬಹುದು ಎಂಬ ಆತಂಕ ಬಿಜೆಪಿಯದು. ಇಷ್ಟರ ನಡುವೆಯೂ ಜೆಡಿಎಸ್ ತಟಸ್ಥವಾಗಿದ್ದು ತಾನಾಗಿಯೇ ಅಧಿಕಾರ ಬರುವುದಾದರೆ ಬೇಡ ಎನ್ನುವ ಸ್ಥಿತಿ ಯಲ್ಲಿ ಬಿಜೆಪಿ ನಾಯಕರಂತೂ ಇಲ್ಲ.
ವಿಧಾನಸಭೆ ಚುನಾವಣೆ ಹತ್ತಿರ ಇರುವುದರಿಂದ ರಾಜಧಾನಿಯ ಮತದಾರರ ಓಲೈಸಿಕೊಳ್ಳುವುದು ಮೂರೂ ಪಕ್ಷಗಳಿಗೆ ಅನಿವಾರ್ಯ. ಹೀಗಾಗಿ, ಬಿಬಿಎಂಪಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ತೆರೆಮರೆಯಲ್ಲಿ ಸಾಕಷ್ಟು ಪುಯತ್ನಗಳು ನಡೆಯುತ್ತಿವೆ.
ಎಸ್. ಲಕ್ಷ್ಮಿನಾರಾಯಣ