ತಿಪಟೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸಾಧನೆಗೈಯಬೇಕಾದರೆ ತಾಂತ್ರಿಕತೆಯ ಅರಿವು ಅವಶ್ಯಕ ಎಂದು ಪ್ಲಾಟಿಫೈ ಸೆಲ್ಯೂಷನ್ ಕಂಪನಿ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ತ್ರಿವಿಕ್ರಮ ರಾವ್ ತಿಳಿಸಿದರು.ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೈಕ್ರೋಸಾಫ್ಟ್- ಪ್ಲಾಟಿಫೈ ಕಂಪನಿಯ ವತಿಯಿಂದ ನಿರ್ಮಿಸಿದ್ದ ಆರ್ಟಿ ಫಿಶಿಯಲ್ ಇಂಟಲಿಜೆನ್ಸಿ ಮತ್ತು ಮೆಷಿನ್ ಲರ್ನಿಂಗ್ ಲ್ಯಾಬ್ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನದೊಂದಿಗೆ ಸಾಗಿದರೆ ಮಾತ್ರ ಏನನ್ನಾ ದರೂ ಸಾಧನೆ ಮಾಡ ಬಹುದಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವು ಲ್ಯಾಬ್‌ನ್ನು ಪ್ರಾರಂಭಿಸಲಾಗಿದ್ದು, ಈ ಲ್ಯಾಬ್ ತಿಪಟೂರಿನಲ್ಲಿ ಪ್ರಪ್ರಥಮವಾಗಿ ಪ್ರಾರಂಭ ಮಾಡಲಾಗಿದೆ. ಗ್ರಾಮೀಣ ಹಾಗೂ ನಗರ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಅವಶ್ಯಕತೆ ಇದ್ದು, ವಿದ್ಯಾರ್ಥಿಗಳು ನಮ್ಮ ಐಡಿಗೆ ಲಾಗಿನ್ ಆಗಿ ಇದರ ಪ್ರಯೋಜನ ಪಡೆದುಕೊಂಡು ಹೊಸ ಹೊಸ ಸಂಶೋಧನೆಗಳತ್ತ ಚಿಂತನೆ ನಡೆಸಬೇಕು ಎಂದರು.
ಕಲ್ಪತರು ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಉಪಯೋಗ ವಾಗಲಿದೆ ಎಂಬ ಯೋಜನೆಗಳು, ಅವಶ್ಯಕತೆಗಳು ಹಾಗೂ ಅವಕಾಶಗಳಿಗಾಗಿ ನಮ್ಮ ಸಂಸ್ಥೆ ಏನು ಬೇಕಾದರೂ ಮಾಡಲಿದೆ. ಎಲ್ಲಾ ರೀತಿಯ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಅವರಿಗೆ ಬೇಕಾದ ಪೂರಕ ಸೌಲಭ್ಯ ಗಳನ್ನು ಕಲ್ಪಿಸಲಾಗಿದೆ. ಆಧುನಿಕ ಸಮಾಜದಲ್ಲಿ ತಂತ್ರಜ್ಞಾನದ ಅವಶ್ಯಕತೆ ಹೆಚ್ಚಿರುವ ಕಾರಣ ಮೈಕ್ರೋಸಾಫ್ಟ್ – ಪ್ಲಾಟಿಫೈ ಕಂಪನಿಯ ಸಹಯೋಗ ದೊಂದಿಗೆ ಲ್ಯಾಬ್ ಪ್ರಾರಂಭಿಸಲಾಗಿದ್ದು ವಿದ್ಯಾರ್ಥಿ ಗಳು ಇದರ ಸದುಪಯೋಗ ಪಡೆದುಕೊಂಡು ಕಾಲೇಜಿಗೆ ಕೀರ್ತಿ ತರಬೇಕು ಎಂದರು.
ಕೆಐಟಿ ಪ್ರಾಂಶುಪಾಲ ಡಾ. ನಂದೀಶಯ್ಯ ಮಾತ ನಾಡಿ, ವಿದ್ಯಾರ್ಥಿಗಳಿಗೆ ಪ್ರತಿಷ್ಟಿತ ಕಂಪನಿಗಳಲ್ಲಿ ಉದ್ಯೋಗ ಲಭಿಸಬೇಕಾದರೆ ಅದಕ್ಕೆ ಸಾಕಷ್ಟು ಪೂರ್ವ ತಯಾರಿಯಾಗುವ ಜೊತೆಗೆ ಅನುಭವವೂ ಮುಖ್ಯವಾಗಿರುತ್ತದೆ. ಆದ್ದರಿಂದ ಪಠ್ಯದ ಜೊತೆಗೆ ಇತರೆ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಡೆವಲಪ್‌ಮೆಂಟ್ ಮೈಕ್ರೋಸಾಫ್ಟ್ನ ನಿರ್ದೇಶಕ ಅಬಿರಾಮ್ ಎ ರಂಗನಾಥ್, ಕೆವಿಎಸ್ ಉಪಾಧ್ಯಕ್ಷ ಎಸ್.ಎಸ್. ನಟರಾಜು, ಖಜಾಂಚಿ ಟಿ.ಎಸ್. ಶಿವಪ್ರಸಾದ್, ಕಾರ್ಯದರ್ಶಿ ಪ್ರೊ. ರಾಜಕುಮಾರ್, ಕೆ.ಪಿ. ರುದ್ರಮುನಿಸ್ವಾಮಿ, ಟಿ.ಯು. ಜಗದೀಶ ಮೂರ್ತಿ, ಜಿ.ಕೆ. ಪ್ರಭು, ಸದಸ್ಯರಾದ ಬಾಗೇಪಲ್ಲಿ ನಟರಾಜು, ಸುಮನ್, ಸ್ವರ್ಣಗೌರಿ, ನಂಜುಂಡ ಸ್ವಾಮಿ ಮತ್ತಿತರರಿದ್ದರು.