Advertisement

ದಾಖಲೆ ಬಿಸಿಲಿಗೆ ಸಾಕ್ಷಿಯಾಗಿದ್ದ ರಾಜಧಾನಿಯಲ್ಲಿ ದಿಢೀರ್‌ ಮಳೆ

12:02 PM Apr 06, 2017 | Team Udayavani |

ಬೆಂಗಳೂರು: ಮಾರ್ಚ್‌ನಲ್ಲಿ ದಾಖಲಾಗಿದ್ದ ದಾಖಲೆಯ ಉಷ್ಣಾಂಶದಿಂದ ಬೆಂದಿದ್ದ ಬೆಂಗಳೂರು,  ಏಪ್ರಿಲ್‌ ಆರಂಭದಲ್ಲೇ ಸುರಿದ ಮಳೆಯಿಂದ ತಂಪಾಗಿದೆ.  ಕಳೆದ ಮೂರ್‍ನಾಲ್ಕು ದಿನಗಳಿಂದ 35ರಿಂದ 36 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಹಿನ್ನೆಲೆಧಿಯಲ್ಲಿ ಬಿಸಿಗಾಳಿಗೆ ಬಸವಳಿದಿದ್ದ ರಾಜಧಾನಿಯ ನಾಗರಿಕರಿಗೆ ಬುಧವಾರ ಸಂಜೆ ಸುರಿದ ಜಿಟಿಜಿಟಿ ಮಳೆ ಹಿತ ತಂದಿತು. 

Advertisement

ರಸ್ತೆಯಲ್ಲಿದ್ದ ವಾಹನ ಸವಾರರು ಮಳೆಗೆ ಮೈಯೊಡ್ಡಿದರೆ, ಕೆಲವು ಬಡಾಧಿವಣೆಗಳಲ್ಲಿ ಮಕ್ಕಳು ರಸ್ತೆಗಿಳಿದು ಮಳೆಯಲ್ಲಿ ಖುಷಿಧಿಪಟ್ಟರು. ಆದರೆ, ಮನೆಗೆ ಧಾವಿಧಿಸುವ ಭರದಲ್ಲಿದ್ದ ವಾಹನ ಸವಾರರು ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆಗೆ ಸಿಲುಕಿದರು.

ನಗರದ ಉತ್ತರ ಭಾಗದಲ್ಲಿ ಹೆಚ್ಚು ಮಳೆ ದಾಖಲಾಗಿದ್ದು, ಹೊಸ್ಕೂರು, ಶಿವಕೋಟೆಯಲ್ಲಿ 17 ಮಿ.ಮೀ. ಮಳೆಯಾಗಿದೆ. ಕಾಡುಗೋಡಿ, ಸಿಂಗಸಂದ್ರ, ಹುಣಸಮಾರನಹಳ್ಳಿ, ಕೋನಪ್ಪನ ಅಗ್ರಹಾರ ಮತ್ತಿತರ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. 

ಮುಂಗಾರು ಪೂರ್ವ ಮಳೆ ಇದು
ಛತ್ತೀಸ್‌ಗಡದಿಂದ ಕರಾವಳಿವರೆಗೆ “ಕಡಿಮೆ ಒತ್ತಡದ ತಗ್ಗು’ (ಟ್ರಫ್) ನಿರ್ಮಾಣವಾಗಿದ್ದರಿಂದ ಮಳೆಯಾಗುತ್ತಿದೆ. ಇದು ಮುಂಗಾರು ಪೂರ್ವ ಮಳೆಯಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಇನ್ನೂ ಮೂರ್‍ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಗುರುವಾರ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next