ಗಂಗಾವತಿ: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜತೆ ಕೈ ಜೋಡಿದ್ದರಿಂದ ಗಂಗಾವತಿ ಹಾಗೂ ಬಳ್ಳಾರಿ ಕ್ಷೇತ್ರಕ್ಕೆ ಪ್ರಚಾರ ಆಗಮಿಸಲಿಲ್ಲ ಎಂದು ಶಾಸಕ ಬಿಜೆಪಿ ಹಿರಿಯ ಮುಖಂಡ ಗಾಲಿ ಜನಾರ್ದನ ರೆಡ್ಡಿ ಸ್ಪೋಟಕ ಸುದ್ದಿಯನ್ನು ಹೇಳಿದರು.
ಅವರು ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಪರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.
ಇಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಸಂಸ್ಕಾರವಿಲ್ಲ. ತಂದೆ, ತಾಯಿ, ಸಹೋದರರಿಗೆ ಮೋಸ ಮಾಡಿದ ವ್ಯಕ್ತಿಯಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸಂದರ್ಭದಲ್ಲಿ ನಾನು ಹೇಳಿದಂತೆ ಬಡವರಿಗೆ ಮನೆ, ರಸ್ತೆ, ವಿದ್ಯುತ್ ಹಾಗೂ ಮಹಿಳೆಯರಿಗೆ ಜಿನ್ಸ್ ಮಾಡಿ ಕೈಗಾರಿಕೆ ಸ್ಥಾಪಿಸಲಾಗುತ್ತದೆ. ಈಗ 10 ತಿಂಗಳು ಕಳೆದಿದ್ದು, ಮುಂದೆ ಎಲ್ಲಾ ಭರವಸೆ ಈಡೇರಿಸಲಾಗುತ್ತದೆ ಎಂದರು.
ಶ್ರೀನಾಥ ಹಾಗೂ ಎಂ.ಮಲ್ಲಿಕಾರ್ಜುನ ನಾಗಪ್ಪ ಪಕ್ಷದ್ರೋಹಿ ಕೆಲಸ ಮಾಡಿದ್ದಾರೆಂದು ಪದೇ ಪದೇ ಹೇಳಿ ಆಕ್ರೋಶ ವ್ಯಕ್ತಪಡಿಸುವುದು ಸರಿಯಲ್ಲ. ಸ್ವತಃ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರು ನನ್ನನ್ನು ಬೆಂಬಲಿಸಿದ್ದರು. ಎಲ್ಲಿಯೂ ಸಿದ್ದರಾಮಯ್ಯ, ಡಿ..ಕೆ.ಶಿವಕುಮಾರ್ ನನ್ನ ಬಗ್ಗೆ ಟೀಕಿಸಿಲ್ಲ ಎಂದ ಅವರು, ಗಂಗಾವತಿಯಲ್ಲಿ ಅನ್ಸಾರಿಗೆ ಖುಷಿಯಾಗಲಿ ಎಂದು ಲೋಕಸಭಾ ಚುನಾವಣೆ ಪ್ರಚಾರದಲ್ಲಿ ನನ್ನ ಬಗ್ಗೆ ಟೀಕಿಸಿ ಮಾತನಾಡಿದ್ದಾರೆ. ಲೋಕಸಭಾ ಸಮರದ ನಂತರ ಅನ್ಸಾರಿ ನಾನು ಮೊದಲು ಹೇಳಿದಂತೆ ಡಸ್ಟ್ ಬಿನ್ ಸೇರಲಿದ್ದಾರೆ. ಅವನ ಸೊಕ್ಕು ಅವನನ್ನು ತಿನ್ನಲಿದೆ ಎಂದು ಏಕ ವಚನದಲ್ಲಿ ಅನ್ಸಾರಿಯನ್ನು ಟೀಕಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಟಿ.ರವಿ, ಅಭ್ಯರ್ಥಿ ಡಾ.ಬಸವರಾಜ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ.ವೀರಪ್ಪ, ತಿಪ್ಪೇರುದ್ರಸ್ವಾಮಿ, ಸಿದ್ದರಾಮಯ್ಯ ಸ್ವಾಮಿ, ಸೈಯದ್ ಅಲಿ, ವಿರೂಪಾಕ್ಷಪ್ಪ ಸಿಂಗನಾಳ, ಅಮರಜ್ಯೋತಿ ನರಸಪ್ಪ, ರಾಘವೇಂದ್ರ ಶೆಟ್ಟಿ, ವೀರಭದ್ರ ನಾಯಕ, ಹನುಮಂತಪ್ಪ ನಾಯಕ, ಆರ್ಹಾಳ ಡ್ಯಾಗಿ ರುದ್ರೇಶ, ಶ್ರವಣಕುಮಾರ ರಾಯಕರ್ ಸೇರಿ ಅನೇಕರಿದ್ದರು.