Advertisement

ಮಾದಕ ವ್ಯಸನ ವಿರೋಧಿ ಮಾಸಾಚರಣೆ ಜಿಲ್ಲೆಯಲ್ಲಿ ಶೇ. 60ರಷ್ಟು ಯಶಸ್ವಿ

06:00 AM Oct 11, 2018 | Team Udayavani |

ಉಡುಪಿ: ಸಾಮಾಜಿಕ ಕಳಕಳಿಯೊಂದಿಗೆ, ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕಾಗಿ ನಿರಂತರ ಎರಡು ತಿಂಗಳ ಕಾಲ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳು ಶೇ. 60ರಷ್ಟು ಜಿಲ್ಲೆಯಲ್ಲಿ ಪರಿಣಾಮ ಬೀರುವ ಮೂಲಕ ಯಶಸ್ವಿಯಾಗಿದೆ ಎಂದು ಎಸ್‌ಪಿ ಲಕ್ಷ್ಮಣ್‌ ಬ. ನಿಂಬರಗಿ ಹೇಳಿದರು. 

Advertisement

ಜಿಲ್ಲಾ ಪೊಲೀಸ್‌ ಇಲಾಖೆ, ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಪ್ರಸ್‌ ಕ್ಲಬ್‌ ಆಶ್ರಯದಲ್ಲಿ ಬಡಗುಬೆಟ್ಟು ಕೋ-ಆಪ್‌. ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಶನಿವಾರ ನಡೆದ ಮಾದಕ ವ್ಯವಸ ವಿರೋಧಿ ಮಾಸಾಚರಣೆಯ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಿರಂತರವಾಗಿ 2 ತಿಂಗಳ ಕಾಲ ಜಿಲ್ಲೆಯ ನಾಗರಿಕರು, ವಿದ್ಯಾರ್ಥಿಗಳು, ವಿವಿಧ ಧರ್ಮಗುರುಗಳು, ಸಂಘ-ಸಂಸ್ಥೆಗಳು, ಇಲಾಖೆಗಳು, ಹೊಟೇಲ್‌ ಉದ್ಯಮಿಗಳು, ಸಮಾಜ ಸೇವಕರು ಕಾರ್ಯಕ್ರಮದಲ್ಲಿ 
ಕೈಜೋಡಿಸಿ ಯಶಸ್ಸಿಗೆ ಕಾರಣರಾಗಿದ್ದಾರೆ. ಒಟ್ಟು 12-15 ವಿವಿಧ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.

ಮಾದಕ ವ್ಯಸನ ಕುರಿತ ಜಾಗೃತಿ ಮೊಬೈಲ್‌ ಕಿರುಚಿತ್ರ ಸ್ಪರ್ಧೆಯಲ್ಲಿ ಒಟ್ಟು 32 ಕಾಲೇಜುಗಳು ಭಾಗವಹಿಸಿದ್ದು, ಅದರಲ್ಲಿ ಪದವಿ ಕಾಲೇಜುಗಳ ವಿಭಾಗದಲ್ಲಿ ವಿ.ವಿ. ಕಾಲೇಜು ಮಂಗಳೂರು (ಪ್ರಥಮ), ಕೆ.ಆರ್‌. ಹೆಗ್ಡೆ ಕಾಲೇಜ್‌ ಆಫ್ ಪ್ಯಾರಾಮೆಡಿಕಲ್‌ ಸೈ®Õ… ಕೋಟ (ದ್ವಿತೀಯ), ಮಿಲಾಗ್ರಿಸ್‌ ಕಾಲೇಜು ಕಲ್ಯಾಣಪುರ (ತೃತೀಯ), ವಿಬಿಸಿಎಲ್‌, ಎನ್‌ಎಂಎ ಕಾಲೇಜು ನಿಟ್ಟೆ (ಸಮಾಧಾನಕರ) ಹಾಗೂ ಪಿಯು ವಿಭಾಗದಲ್ಲಿ ಬಾರಕೂರು ನ್ಯಾಶನಲ್‌ ಪಿಯು ಕಾಲೇಜು (ಪ್ರಥಮ), ಹೆಬ್ರಿ ಅಮೃತ ಭಾರತಿ ಪಿ.ಯು.  ಕಾಲೇಜು (ದ್ವಿತೀಯ), ಅದಮಾರು ಪೂರ್ಣಪ್ರಜ್ಞ  ಪಿ.ಯು. ಕಾಲೇಜು (ತೃತೀಯ), ಶಿರೂರು ಗ್ರೀನ್‌ ವ್ಯಾಲಿ ಪಿ.ಯು. ಕಾಲೇಜು, ಕಾರ್ಕಳ ಸ.ಪ.ಪೂ. ಕಾಲೇಜು (ಸಮಾಧಾನಕರ) ಬಹುಮಾನ ಗಳಿಸಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಎಸ್‌ಪಿ ಲಕ್ಷ್ಮಣ್‌ ಬ. ನಿಂಬರಗಿ ಅವರನ್ನು ಸಮ್ಮಾನಿಸಲಾಯಿತು.

ಸಹಾಯಕ ಅರಣ್ಯಾಧಿಕಾರಿ ಪ್ರಭಾಕರನ್‌, ಬಡಗುಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಅಡಿಷನಲ್‌ ಎಸ್‌ಪಿ ಕುಮಾರ ಚಂದ್ರ, ಭಾಸ್ಕರ ಹಂದೆ, ಪತ್ರಕರ್ತರ ಸಂಘದ ಪ್ರ.ಕಾರ್ಯದರ್ಶಿ ಸಂತೋಷ್‌ ಸರಳೇಬೆಟ್ಟು, ಪ್ರಸ್‌ ಕ್ಲಬ್‌ ಸಂಚಾಲಕ ನಾಗರಾಜ್‌ ರಾವ್‌ ಉಪಸ್ಥಿತರಿದ್ದರು. ಅಶೋಕ್‌ ಪೂಜಾರಿ ಸ್ವಾಗತಿಸಿ, ಪ್ರಸ್‌ ಕ್ಲಬ್‌ ಕೋಶಾಧಿಕಾರಿ ದಿವಾಕರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next