Advertisement
ತೀರಾ ಇತ್ತೀಚಿನವರೆಗೂ, ನಮ್ಮ ಆಧುನಿಕ ವಿಜ್ಞಾನವು ಮನಸ್ಸು ಮತ್ತು ದೇಹದ ನಡುವೆ ನೇರ ಸಂಬಂಧವಿದೆ ಎನ್ನುವುದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಲೇ ಬಂದಿತ್ತು. ಆದಾಗ್ಯೂ ದೈಹಿಕ ಆರೋಗ್ಯ ಸಮಸ್ಯೆಗಳಿಂದ ಒತ್ತಡ ಮತ್ತು ದುಗುಡ ಎದುರಾಗುತ್ತದೆ ಎಂದು ಒಪ್ಪಿಕೊಳ್ಳಲಾಯಿತಾದರೂ ಮನಸ್ಸು ದೇಹದ ಮೇಲೆ ನೇರವಾಗಿ ಪರಿಣಾಮ ಬೀರಬಲ್ಲದು, ಇವೆರಡಕ್ಕೂ ಅವಿನಾಭಾವ ಸಂಬಂಧವಿದೆ ಎನ್ನುವುದಕ್ಕೆ ಸ್ಪಷ್ಟ ಪುರಾವೆಗಳಿಲ್ಲ ಎಂದೇ ವಾದಿಸುತ್ತಾ ಬಂದಿತ್ತು ಪಾಶ್ಚಾತ್ಯ ವೈದ್ಯ ವಲಯ.
Related Articles
Advertisement
ಆದರೆ ಈ ಬಾಹ್ಯವಾಗಿ ಹೇರಿಕೆಯಾದ ಈ ಮಾನದಂಡಗಳನ್ನು ಮುಟ್ಟಲು ಕೆಲವೇ ಕೆಲವರಿಗೆ ಮಾತ್ರ ಸಾಧ್ಯವಾಗುತ್ತದೆ. ಇನ್ನುಳಿದವರು ಎಷ್ಟೇ ಪ್ರಯತ್ನಿಸಿದರೂ ಮೇಲಿನ ಅಂಶಗಳು ಅವರ ಹಿಡಿತಕ್ಕೆ ಸಿಗುವುದೇ ಇಲ್ಲ. ತತ್ಪರಿಣಾಮವಾಗಿಯೇ ನಮ್ಮ ನಿತ್ಯದ ಆತ್ಮಕಥೆಯಲ್ಲಿ ಒತ್ತಡ, ದುಗುಡ, ಅವಸರ ತುಂಬಿಕೊಂಡಿವೆ. ಒಂದೋ ನಾವು ನಿರಂತರ ಸಿಟ್ಟು ಅಥವಾ ಫ್ರಸ್ಟ್ರೇಷನ್‌ನ ಸ್ಥಿತಿಯಲ್ಲಿರುತ್ತೇವೆ, ಇಲ್ಲವೇ, ಹೊಟ್ಟೆಕಿಚ್ಚು, ಕೀಳರಿಮೆ ಮತ್ತು ಖನ್ನತೆಗೆ ಒಳಗಾಗುತ್ತೇವೆ. ಇದನ್ನೆಲ್ಲ ನೋಡಿದಾಗ ನಾವೆಲ್ಲ ನಿಜಕ್ಕೂ ಹತಾಶೆ ಮತ್ತು ಅತೃಪ್ತಿಯ ಯುಗದಲ್ಲಿ ಬದುಕುತ್ತಿದ್ದೇ ವೇನೋ ಎಂದೆನಿಸದೇ ಇರದು.
ಆಧುನಿಕ ಸಮಾಜದಲ್ಲಿ ಅಧಿಕ ರಕ್ತದೊತ್ತಡ, ಖನ್ನತೆ, ಮಧುಮೇಹ, ಹೃದಯ ಸಂಬಂಧಿ ತೊಂದರೆಗಳು ಮತ್ತು ನಿಯಮಿತ ಅನಾರೋಗ್ಯದ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ ಎನ್ನುತ್ತವೆ ವೈಜ್ಞಾನಿಕ ಪುರಾವೆ ಗಳು. ಅಲ್ಲದೆ ಕಳೆದೊಂದು ದಶಕದಲ್ಲಿ ಜೀವನಶೈಲಿ ಸಂಬಂಧಿ ಸಾವುಗಳ ಸಂಖ್ಯೆಯೂ ವಿಪರೀತವಾಗುತ್ತಿದೆ.
ಎಲ್ಲಕ್ಕಿಂತಲೂ ಮುಖ್ಯವಾಗಿ ಇದು ಕೇವಲ ಅತಿವೇಗವಾಗಿ ಸಾಗುತ್ತಿ ರುವ ಮೆಟ್ರೋ ನಗರಗಳಿಗೆ, ಅಭಿವೃದ್ಧಿ ಹೊಂದಿರ ರಾಷ್ಟ್ರಗಳಿಗಷ್ಟೇ ಸೀಮಿತವಾದ ಸಮಸ್ಯೆಯಲ್ಲ. ಜಗತ್ತಿನಾದ್ಯಂತ ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ರಾಷ್ಟ್ರಗಳ ಕಥೆಯೂ ಇದೇ ಥೀಮ್‌ನಲ್ಲೇ ಸಾಗುತ್ತಿದೆ. ಅವೂಕೂಡ ಈ ಸಮಸ್ಯೆಯನ್ನು ಎದುರಿಸಲಾರಂಭಿಸಿವೆ. ಸತ್ಯವೇನೆಂದರೆ ನಾವು ಈಗ ಈ ಕ್ಷಣದಲ್ಲಿ ಇದ್ದುಕೊಂಡೇ ಸುತ್ತಲಿನ ಜಗದಿಂದ ಚಿತ್ತವನ್ನು ದೂರವಿಟ್ಟಾಗ ಮನಸ್ಸು ಶಾಂತವಾಗುತ್ತದೆ.
ಈ ಸಂಗತಿಯನ್ನು ಪಾಶ್ಚಿಮಾತ್ಯ ಮತ್ತು ಪೌರಾತ್ಯ ತತ್ವಶಾಸ್ತ್ರಗಳು ಹೇಗೆ ಭಿನ್ನ ನೆಲೆಗಟ್ಟಿನಲ್ಲಿ ನೋಡುತ್ತವೆ ಎನ್ನುವುದನ್ನು ಮೆಲಕು ಹಾಕುವುದು ಒಳಿತೆನಿಸುತ್ತದೆ. ಉದಾಹರಣೆಗೆ, ಪಾಶ್ಚಿಮಾತ್ಯ ಯೋಚನೆಯು, ಒಬ್ಬ ವ್ಯಕ್ತಿ ತಾನಿರುವ ವಾತಾವರಣದಿಂದ ಮಾನಸಿಕವಾಗಿ ವಿಮುಖನಾಗುವು ದನ್ನು ಋಣಾತ್ಮಕ ಸಂಗತಿ ಎಂದು ಭಾವಿಸುತ್ತದೆ. ಹೀಗಾಗಿ ಆ ವ್ಯಕ್ತಿಯ ತಲೆಯಲ್ಲಿ ವಿಕೃತ ಆಲೋಚನೆಗಳು ಸುಳಿದಾಡುತ್ತಿರಬಹುದು, ಆತನಿಗೆ ಆತ್ಮಹತ್ಯೆ-ಕೊಲೆಯ ಯೋಚನೆ ಬರುತ್ತಿರಬಹುದು ಎಂದು ಊಹಿಸಲಾಗುತ್ತದೆ. ಈ ಅಪಾಯಗಳಿಂದ ತಪ್ಪಿಸಿಕೊಳ್ಳುವ ಮಾರ್ಗ ವೆಂದರೆ ಆತ ತಾನಿರುವ ವಾತಾವರಣಕ್ಕೆ ಮತ್ತೆ ಅಭಿಮುಖವಾಗಬೇಕು ಎನ್ನಲಾಗುತ್ತದೆ.
ನಮ್ಮ ತಣ್ತೀಶಾಸ್ತ್ರದಲ್ಲಿ ಸುತ್ತಲಣ ಪರಿಸರದಿಂದ ಮನೋ ವಿಮುಖ ವಾಗುವುದನ್ನು ಕೆಟ್ಟ ಸಂಗತಿ ಎಂಬಂತೆ ಪರಿಭಾವಿಸಲಾಗುವುದಿಲ್ಲ. ಸತ್ಯವೇನೆಂದರೆ ಇದು ಮಾನಸಿಕ ನೆಮ್ಮದಿ ಸಾಧಿಸುವುದಕ್ಕೆ, ಆಲೋ ಚನೆಗಳನ್ನು ತಹಬದಿಗೆ ತಂದು ನಮ್ಮ ಮನೋಲೋಕವನ್ನು ಸ್ವತ್ಛಗೊಳಿ ಸುವುದಕ್ಕೆ ಇರುವ ಅತ್ಯುತ್ತಮ ಮಾರ್ಗ ಎಂದು ಭಾವಿಸಲಾಗುತ್ತದೆ. ಈಗಿನ ಸನ್ನಿವೇಶದಲ್ಲಿದ್ದೇ ಅದರಿಂದ ದೂರನಿಂತು ನಮ್ಮನ್ನು ನಾವು ಅವಲೋಕಿಸುವ ಸಾಮರ್ಥಯ ನಮ್ಮ ವರ್ತನೆಯನ್ನೇ ಬದಲಿಸಿಬಿಡಬಲ್ಲದು. ಮನಸ್ಸು ಭಾವನೆ-ಯೋಚನೆ ಮತ್ತು ವರ್ತನೆಗಳ ಸರಣಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಒಂದು ಭಾವನೆಯು ಯೋಚನೆಯಾಗಿ, ಆ ಯೋಚನೆಯು ವರ್ತನೆಯಾಗಿ ಪ್ರಕಟಗೊಳ್ಳುತ್ತದೆ. ಆ ವರ್ತನೆ ನಮ್ಮ ದೈಹಿಕ ಆರೋಗ್ಯದ ಮೇಲೆ ಅಗಾಧ ಪರಿಣಾಮ ಬೀರುವ ಸಾಮರ್ಥಯ ಹೊಂದಿದೆ.
ಪೌರಾತ್ಯ ತಣ್ತೀಶಾಸ್ತ್ರವು ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವ ಬಗ್ಗೆಯೂ ಕೆಲ ಅಮೂಲ್ಯ ಸಲಹೆ ನೀಡುತ್ತದೆ. ಆದರೆ ಮನಸ್ಸು ಒಂದು ಬಾರಿ ತಹಬದಿಗೆ ಬಂತೆಂದರೆ ಅದೇ ಸ್ಥಿತಿಯಲ್ಲಿ ನಿರಂತರ ಇರುವುದಿಲ್ಲವಲ್ಲ? ಹೀಗಾಗಿ ನಿತ್ಯವೂ ಅದರ ಮೇಲೆ ನಿಯಂತ್ರಣ ಸಾಧಿಸಬೇಕಾಗುತ್ತದೆ. (ಮನಸ್ಸು ಮರ್ಕಟ ಎನ್ನುವುದಿಲ್ಲವೇ?). ಯಾವ ಮನಸ್ಸಿನಲ್ಲಿ ಪ್ರಶಾಂತತೆ ಹಬ್ಬುತ್ತದೋ ಆ ಮನಸ್ಸು ಮಾತ್ರ ಮಾಯೆ/ಭ್ರಮೆಗೂ ಮತ್ತು ವಾಸ್ತವಕ್ಕೂ ಇರುವ ಅಂತರವನ್ನು ಗುರುತಿಸಲು ಶಕ್ತವಾಗುತ್ತದೆ. ಆ ಶಾಂತತೆ ಸಿದ್ಧಿಸದಿದ್ದರೆ ಭ್ರಮೆಯೇ ವಾಸ್ತವವೆಂದು ಅನಿಸತೊಡಗುತ್ತದೆ.
ಒಂದು ಗುಣಾತ್ಮಕ ಮತ್ತು ಮೌಲ್ಯಯುತ ಜೀವನ ನಡೆಸುವುದಕ್ಕೆ ಮಾನಸಿಕ ನೆಮ್ಮದಿ ಅತ್ಯಗತ್ಯ ಸಾಧನೆ. ಇದೇ ವೇಳೆಯಲ್ಲೇ ಮನಸ್ಸು- ದೇಹದ ನಡುವೆ ಅವಿನಾಭಾವ ಸಂಬಂಧವಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದೂ ಅಷ್ಟೇ ಮುಖ್ಯ. ದಲಾಯ್ ಲಾಮಾ ಅವರ ಮಾತಲ್ಲಿ ಹೇಳುವುದಾದರೆ, “ಮನಸ್ಸನ್ನು ಜಾಗೃತಗೊಳಿಸುವುದು’ ಎಂದರ್ಥ.
ಮನಸ್ಸು ಜಾಗೃತವಾಯಿತೆಂದರೆ, ನಾವು ನಮ್ಮನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಅದು ಜನರು ಮತ್ತು ಸನ್ನಿವೇಶಗಳೆಡೆಗಿನ ನಮ್ಮ ವರ್ತನೆ ಮತ್ತು ಭಾವನೆಯನ್ನು ನಿರ್ಧರಿಸುತ್ತದೆ. ಅಮೆರಿಕನ್ ಉದ್ಯಮಿ ಸ್ಟೀವನ್ ಕೋವೆ ಈ ಮಾತನ್ನು ಅದ್ಭುತವಾಗಿ ಹೇಳುತ್ತಾರೆ:
“ನಾವು ಸಮಸ್ಯೆಯನ್ನು ನೋಡುವ ರೀತಿಯಲ್ಲೇ ನಿಜವಾದ ಸಮಸ್ಯೆಯಿದೆ’. ಈ ಆಧುನಿಕ ಜಗತ್ತಿನಲ್ಲಿ ಎಲ್ಲರೂ ತಮ್ಮ ಮನೋಲೋಕದ ಮೇಲೆ ನಿಯಂತ್ರಣ ಹೊಂದುವ ಅಗತ್ಯ ಹೆಚ್ಚಾಗಿದೆ.
ಅಮಿತ್ ದಾಸ್‌ಗುಪ್ತಾ, ಮಾಜಿ ರಾಜತಾಂತ್ರಜ್ಞ