Advertisement

ಸ್ವೀಡನ್‌ನಲ್ಲಿ ಕೆಲಸದ ನಡುವೆ ಸೆಕ್ಸ್‌ ಬ್ರೇಕ್‌!

03:50 AM Feb 24, 2017 | |

ಸ್ಟಾಕ್‌ಹೋಮ್‌: ನೂತನ ಅನ್ವೇಷಣೆ, ಹೊಸ ಬದಲಾವಣೆಗಳಿಗೆ ಹೆಸರಾಗಿರುವ ಸ್ವೀಡನ್‌ ಈ ಬಾರಿ ಇಲ್ಲಿನ ಉದ್ಯೋಗಿಗಳಿಗೆ ದಿನನಿತ್ಯದ ಕೆಲಸ ನಡುವೆಯೂ 1 ತಾಸು ಸೆಕ್ಸ್‌ ಬ್ರೇಕ್‌ ನೀಡುವ ಚಿಂತನೆಯೊಂದನ್ನು ನಡೆಸಿದೆ. ಸ್ವೀಡನ್‌ನ ಓವರ್‌ಟೊನಿಯಾ ಪಟ್ಟಣದ ಕಾರ್ಪೋರೇಟರ್‌ ಪರ್‌ ಎರಿಕ್‌ ಮುಸ್ಕೋಸ್‌ ವೃತ್ತಿ ನಿರತ ದಂಪತಿಗಾಗಿ ಶುಲ್ಕ ರಹಿತ 1 ಗಂಟೆ ಸೆಕ್ಸ್‌ ಬ್ರೇಕ್‌ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. 

Advertisement

ಪ್ರಸ್ತುತ ಬಿಡುವಿಲ್ಲದ ಸಮಾಜದಲ್ಲಿ ದಂಪತಿ ಒಟ್ಟಾಗಿ ಹೆಚ್ಚು ಸಮಯ ಕಳೆಯುತ್ತಿಲ್ಲ. ಇದರಿಂದ ಸಂಬಂಧಗಳು ಹಾಳಾಗುತ್ತಿವೆ. ಸೆಕ್ಸ್‌ ಬ್ರೇಕ್‌  ವ್ಯವಸ್ಥೆ ಜಾರಿಗೆ ತರುವುದರಿಂದ ಸಂಬಂಧಗಳು ಗಟ್ಟಿಯಾಗಿ, ಜನರು ಸಾಮರಸ್ಯದಿಂದ ಬದುಕುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಪ್ರಸ್ತಾವನೆಯನ್ನು ಬೆಂಬಲಿಸಿರುವ ಲೈಂಗಿಕ ತಜ್ಞ ಆಮಿ ಲೆವಿನ್‌ “ಊಟದ ಬಿಡುವಿನ ವೇಳೆ ಸಂಭೋಗ ನಡೆಸುವುದನ್ನು ರೂಢಿಸಿಕೊಳ್ಳುವುದು ಸೂಕ್ತ. ಇದಕ್ಕಾಗಿ 1 ತಾಸನ್ನು ಮೀಸಲಿಡಬಹುದು. ಶೀಘ್ರವೇ ಏಕೆ ವ್ಯವಸ್ಥೆ ಜಾರಿಯಾಗಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಪ್ರತಿ ನಾಲ್ವರು ವಿವಾಹಿತರ ಪೈಕಿ ಓರ್ವ ವಿವಾಹಿತ/ವಿವಾಹಿತೆ ಕೆಲಸದ ಒತ್ತಡಗಳಿಂದ ಸಂಭೋಗ ನಡೆಸಲು ಸಾಧ್ಯವಾಗದೆ ಆಯಾಸದಿಂದ ನಿದ್ರೆಗೆ ಜಾರುತ್ತಾರೆ ಎಂದು ನ್ಯಾಷನಲ್‌ ಸ್ಲಿಪ್‌ ಫೌಂಡೇಷನ್‌ ನಡೆಸಿದ ಸಮೀಕ್ಷೆಯಲ್ಲಿ ವರದಿಯಾಗಿದೆ.

2015ರಲ್ಲಿ ಗುಟೇನ್‌ ಬರ್ಗ್‌ನಲ್ಲಿ ಕೆಲಸ ಮಾಡುತ್ತಿದ್ದ ದಯಾದಿಗಳಿಗೆ ಆರೋಗ್ಯ ದೃಷ್ಟಿಯಿಂದ ಪ್ರತಿನಿತ್ಯ ಕೇವಲ 6 ತಾಸು ಮಾತ್ರ ಕೆಲಸ ಮಾಡುವ ಪ್ರಮುಖ ಯೋಜನೆಯನ್ನು ಇಲ್ಲಿನ ಸರ್ಕಾರ ಜಾರಿಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next