Advertisement

ಅಖಾಡವೇ ಇಲ್ಲಿ ಕೋರ್ಟ್‌! ಸಮಸ್ಯೆ ಬಗೆಹರಿಯಬೇಕೆಂದರೆ ದಂಗಲ್‌ ಕಡ್ಡಾಯ

08:45 AM Apr 18, 2018 | Team Udayavani |

ನೋಯ್ಡಾ: ಎರಡು ವ್ಯಕ್ತಿಗಳ ಮಧ್ಯೆ ವಿವಾದ ಉಂಟಾದರೆ ಇಲ್ಲಿ ಕೋರ್ಟು ಕಚೇರಿ ಅಲೆಯುವುದಿಲ್ಲ. ಪಂಚಾಯತ್‌ ಮುಖಂಡರ ಎದುರು ಕೂತು ಸಮಸ್ಯೆ ಹೇಳಿಕೊಂಡು, ಅವರ ಮೂಲಕ ಸಮಸ್ಯೆ ಪರಿಹರಿಸಿ ಕೊಳ್ಳುವುದೂ ಇಲ್ಲ. ಬದಲಿಗೆ ಗ್ರಾಮದಲ್ಲಿ ಕುಸ್ತಿ ಅಖಾಡವೇ ಇವರಿಗೆ ಕೋರ್ಟ್‌. ಪರಸ್ಪರ ಅಖಾಡಕ್ಕಿಳಿದು ಕುಸ್ತಿ ಆಡುತ್ತಾರೆ. ಕುಸ್ತಿಯಲ್ಲಿ ಸೋತವರು ವಿವಾದದಲ್ಲೂ ಸೋತಂತೆ. ಗೆದ್ದವರು ವಿಜಯದ ನಗೆ ಬೀರುತ್ತಾರೆ.

Advertisement

ಇದು ನೋಯ್ಡಾದ ಸರ್ಫಾಬಾದ್‌ ಎಂಬ ಗ್ರಾಮದ ಕಥೆ. ಅಚ್ಚರಿಯೆಂದರೆ ಈ ಗ್ರಾಮದಲ್ಲಿ ಕನಿಷ್ಠ 200ರಿಂದ 250ಕ್ಕೂ ಹೆಚ್ಚು ಹವ್ಯಾಸಿ ಹಾಗೂ ವೃತ್ತಿಪರ ಕುಸ್ತಿಪಟುಗಳಿದ್ದಾರೆ. ಪ್ರತಿ ಆಗಸ್ಟ್‌ನಲ್ಲಿ ಇಲ್ಲಿ ದಂಗಲ್‌ ಸೀಸನ್‌ ನಡೆಯುತ್ತದೆ. ಆಗಂತೂ ಉತ್ತರ ಪ್ರದೇಶ ಹಾಗೂ ಹರ್ಯಾಣದಿಂದ ಇಲ್ಲಿಗೆ ಜನರು ಆಗಮಿಸಿ ಕುಸ್ತಿ ಪಟುಗಳ ಪಟ್ಟಿನ ಮೋಜು ನೋಡಿ ಮನೋರಂಜನೆ ಪಡೆಯುತ್ತಾರೆ. ಕುಸ್ತಿಗೆ ಇಲ್ಲಿ 275 ವರ್ಷಗಳ ಇತಿಹಾಸವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಧುನೀಕರಣ ಈ ಹಳ್ಳಿಗೂ ತಟ್ಟಿದೆ. ಇಲ್ಲಿ ಐಷಾ ರಾಮಿ ಕಾರುಗಳು ಬಂದಿವೆ. ಯುವಕರು ನಗರದ ವೈಟ್‌ ಕಾಲರ್‌ ಉದ್ಯೋಗಗಳಿಗೆ ಮರುಳಾಗುವ ಆತಂಕ ಎದುರಾಗಿದೆ. ಈಗಲೂ ಗ್ರಾಮದಲ್ಲಿ ಹಲವು ಕುಸ್ತಿ ಅಖಾಡಗಳಿವೆ. ನೂರಕ್ಕೂ ಹೆಚ್ಚು ಜನರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಪೈಕಿ ಹಲವರು ನ್ಯಾಷನಲ್‌ ಗೇಮ್ಸ್‌ ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ ಪ್ರತಿನಿಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next