Advertisement

ಲಘುವಾಗಿ ಮಾತನಾಡಿದ ಟ್ರಂಪ್‌ಗೆ ಭಾರತದ ಪ್ರತ್ಯುತ್ತರ

12:30 AM Jan 04, 2019 | Team Udayavani |

ವಾಷಿಂಗ್ಟನ್‌/ಹೊಸದಿಲ್ಲಿ: ಆಫ್ಘಾನ್‌ನಲ್ಲಿ ಲೈಬ್ರರಿ ಸ್ಥಾಪಿಸಲು ಹಣಕಾಸು ನೆರವು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಲಘುವಾಗಿ ಮಾತನಾಡಿದ್ದು, ಇದಕ್ಕೆ ಪಕ್ಷಭೇದ ಮರೆದು ಭಾರತೀಯ ರಾಜಕೀಯ ಪಕ್ಷಗಳು ತಕ್ಕ ಪ್ರತ್ಯುತ್ತರ ನೀಡಿವೆ.

Advertisement

ಭಾರತವು ಯುದ್ಧ ಪೀಡಿತ ಆಫ್ಘಾನ್‌ನಲ್ಲಿ ಲೈಬ್ರರಿ ಸ್ಥಾಪಿಸಲು ನೆರವು ನೀಡಿದೆ. ಇದರಿಂದ ಆ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ. ಭಾರತ ಸೇರಿದಂತೆ ಹಲವು ದೇಶಗಳು ಆಫ್ಘಾನ್‌ನ ಭದ್ರತೆ ದೃಷ್ಟಿಯಿಂದ ಯಾವ ಕೆಲಸವನ್ನೂ ಮಾಡುತ್ತಿಲ್ಲ ಎಂದು ಟ್ರಂಪ್‌ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಭಾರತ, “ನಾವು ಆಫ್ಘಾನ್‌ನಲ್ಲಿ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಕೈಗೊಂಡಿದ್ದೇವೆ. ಅದಕ್ಕೆ ಅಲ್ಲಿನ ಜನರಿಂದಲೂ ಸೂಕ್ತ ಸ್ಪಂದನೆ ಸಿಕ್ಕಿದೆ. ನಮ್ಮ ಇಂಥ ನೆರವು ಆ ದೇಶವನ್ನು ಆರ್ಥಿಕವಾಗಿ ಸಬಲಗೊಳ್ಳಲು ಸಹಾಯಕವಾಗಿದೆ’ ಎಂದು ಹೇಳಿದೆ. ಅಮೆರಿಕ ಅಧ್ಯಕ್ಷರ ಮಾತಿನ ವೈಖರಿಯನ್ನು ಒಪ್ಪಲಾಗದು ಎಂದು ಹೇಳಿರುವ ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌, “ಭಾರತದ ಪ್ರಧಾನಿ ಬಗ್ಗೆ ಟ್ರಂಪ್‌ ಆಡಿರುವ ಮಾತುಗಳು ಉತ್ತಮ ಅಭಿರುಚಿಯದ್ದಲ್ಲ. 2004ರಿಂದಲೂ ಭಾರತವು ಆಫ್ಘಾನ್‌ನಲ್ಲಿ ರಸ್ತೆಗಳು, ಅಣೆಕಟ್ಟುಗಳು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುತ್ತಾ ಬಂದಿದೆ. 3 ಶತಕೋಟಿ ಡಾಲರ್‌ ನೆರವನ್ನೂ ನೀಡಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next