Advertisement

ರಾಜ್ಯ ಕಾಂಗ್ರೆಸ್‌ ಸದಸ್ಯತ್ವಕ್ಕೆ 1 ಸಾವಿರ ರೂ?

12:50 AM Feb 23, 2023 | Team Udayavani |

ಹೊಸದಿಲ್ಲಿ: ನಯಾ ರಾಯಪುರದಲ್ಲಿ ಫೆ.24­ರಿಂದ ಕಾಂಗ್ರೆಸ್‌ ಮಹಾಧಿವೇಶನ ನಡೆಯಲಿ­ರುವಂತೆಯೇ ಪಕ್ಷ ತನ್ನ ಸದಸ್ಯ ಶುಲ್ಕದಲ್ಲಿ ಏರಿಕೆ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ. ಇದರ ಜತೆಗೆ 2024ರ ಚುನಾವಣೆಗೆ ಅನ್ವಯವಾಗಿ ಪಕ್ಷದಲ್ಲಿ ಹಲವು ಬದಲಾವಣೆ ಮಾಡುವ ಸಾಧ್ಯತೆಗಳ ಬಗ್ಗೆಯೂ ಚಿಂತನೆ ನಡೆಸಿದೆ.

Advertisement

ಪಕ್ಷಕ್ಕೆ ಹೆಚ್ಚಿನ ವಿತ್ತೀಯ ಬಲ ತರುವ ನಿಟ್ಟಿಲ್ಲಿ ಸದಸ್ಯ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ರಾಜ್ಯ ಕಾಂಗ್ರೆಸ್‌ ಸಮಿತಿ ಸದಸ್ಯತ್ವಕ್ಕಿದ್ದ 100 ರೂ. ಶುಲ್ಕವನ್ನು 1ಸಾವಿರ ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾವ ಮಾಡಲಾಗಿದೆ. ಎಐಸಿಸಿ ಸದಸ್ಯತ್ವ ಶುಲ್ಕವನ್ನು 3 ಸಾವಿರ ರೂ.ಗಳಿಗೆ ಏರಿಕೆ ಮಾಡಿದ್ದು, ಅಭಿವೃದ್ಧಿ ಶುಲ್ಕವನ್ನು ವಾರ್ಷಿಕ 1ಸಾವಿರ ರೂ.ಗಳಂತೆ 5 ವರ್ಷ ಪಾವತಿಸುವ ನಿಯಮವನ್ನು ರೂಪಿಸಿದೆ.

ಪ್ರಿಯಾಂಕಾಗೆ ಚುನಾವಣೆ: ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆ ಮೂಲಕ ಕುಟುಂಬ ರಾಜಕಾರಣದ ಮಣೆ ಕಿತ್ತೂಗೆದು ಪುನರು­ಜ್ಜೀವನಕ್ಕೆ ಕಾಲಿಟ್ಟಿರುವ ಕಾಂಗ್ರೆಸ್‌, ಈಗ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರ ಆಯ್ಕೆಯಲ್ಲೂ ಬದಲು ಮಾಡಲು ಚಿಂತನೆ ನಡೆಸಲಾಗಿದೆ.

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು, ಮಾಜಿ ಪ್ರಧಾನಿಗಳು, ಲೋಕಸಭೆ-­ರಾಜ್ಯಸಭೆ­ಯಲ್ಲಿ ಪಕ್ಷದ ನಾಯಕರು, ಸಂಸದೀಯ ಪಕ್ಷದ ಅಧ್ಯಕ್ಷರು ಸಮಿತಿಗೆ ನೇರವಾಗಿ ಆಯ್ಕೆಯಾಗುತ್ತಾರೆ. ಆದರೆ ನಾಯಕಿ ಪ್ರಿಯಾಂಕಾ ವಾದ್ರಾ, ಸೋನಿಯಾ ಗಾಂಧಿ ಮಾತ್ರ ಚುನಾವಣೆ ಎದುರಿಸಿಯೇ ಸಮಿತಿಗೆ ಆಯ್ಕೆಯಾಗಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next