Advertisement

Bangladesh ಹಿಂದೂ, ಅಲ್ಪಸಂಖ್ಯಾಕರ ರಕ್ಷಣೆಗೆ ಮೋದಿಗೆ ಅಭಯ ನೀಡಿದ ಯೂನಸ್

01:02 AM Aug 17, 2024 | Team Udayavani |

ಹೊಸದಿಲ್ಲಿ: ಬಾಂಗ್ಲಾದೇಶದ ಮಧ್ಯಾಂತರ ಸರಕಾರದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಒಂದು ವಾರದ ನಂತರ  ಮೊಹಮ್ಮದ್ ಯೂನಸ್ ಅವರು ಶುಕ್ರವಾರ(ಆ16)ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.

Advertisement

ಹಿಂದೂಗಳು ಮತ್ತು ಇತರ ಎಲ್ಲಾ ಅಲ್ಪಸಂಖ್ಯಾತಕರ ರಕ್ಷಣೆ ಮತ್ತು ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಯೂನಸ್ ಹೇಳಿದ್ದಾರೆ.ಪ್ರಜಾಸತ್ತಾತ್ಮಕ, ಸ್ಥಿರ, ಶಾಂತಿಯುತ ಮತ್ತು ಪ್ರಗತಿಪರ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಹಿಂಸಾಚಾರ ಪೀಡಿತ ದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾಕ ಸಮುದಾಯಗಳ ಸುರಕ್ಷತೆಯನ್ನು ಖಾತ್ರಿಪಡಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾಸತ್ತಾತ್ಮಕ, ಸ್ಥಿರ, ಶಾಂತಿಯುತ ಮತ್ತು ಪ್ರಗತಿಪರ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಮೋದಿ ಪುನರುಚ್ಚರಿಸಿದರು ಮತ್ತು ಹಿಂಸಾಚಾರ ಪೀಡಿತ ದೇಶದ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆಯನ್ನು ಖಾತ್ರಿಪಡಿಸುವ ಮಹತ್ವವನ್ನು ಒತ್ತಿ ಹೇಳಿದರು.

“ಪ್ರೊಫೆಸರ್ ಮುಹಮ್ಮದ್ ಯೂನಸ್ ಅವರಿಂದ ದೂರವಾಣಿ ಕರೆ ಸ್ವೀಕರಿಸಲಾಗಿದ್ದು, ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಪ್ರಜಾಪ್ರಭುತ್ವ, ಸ್ಥಿರ, ಶಾಂತಿಯುತ ಮತ್ತು ಪ್ರಗತಿಪರ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಮತ್ತು ಎಲ್ಲಾ ಅಲ್ಪಸಂಖ್ಯಾಕರ ರಕ್ಷಣೆ, ಸುರಕ್ಷತೆ ಮತ್ತು ಭದ್ರತೆಯ ಕುರಿತಾಗಿ ಭರವಸೆ ನೀಡಿದರು ಎಂದು ಪ್ರಧಾನಿ ಮೋದಿ ಎಕ್ಸ್‌ ಪೋಸ್ಟ್ ಮಾಡಿದ್ದಾರೆ.

Advertisement

“ಆಯಾ ರಾಷ್ಟ್ರೀಯ ಆದ್ಯತೆಗಳಿಗೆ” ಅನುಗುಣವಾಗಿ ದ್ವಿಪಕ್ಷೀಯ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುವ ಮಾರ್ಗಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿದೆ.

ಹಸೀನಾ ನೇಮಿಸಿದ್ದ ರಾಯಭಾರಿಗಳು ವಾಪಸ್‌: ಸರಕಾರ
ಶೇಖ್‌ ಹಸೀನಾ ಸರಕಾರ ನೇಮಿಸಿದ್ದ 7 ರಾಯಭಾರಿಗಳನ್ನು ದೇಶಕ್ಕೆ ಮರಳುವಂತೆ ಬಾಂಗ್ಲಾ ಮಧ್ಯಾಂತರ ಸರಕಾರ ಆದೇಶಿಸಿದೆ. ಪ್ರಸ್ತುತ ಇರುವ ತಮ್ಮ ಜವಾಬ್ದಾರಿ ಗಳನ್ನು ಬಿಟ್ಟು ತತ್‌ಕ್ಷಣವೇ ಢಾಕಾ ದಲ್ಲಿರುವ ಕೇಂದ್ರ ಕಚೇರಿಗೆ ಬರ ಬೇಕು ಎಂದು ತಿಳಿಸಲಾಗಿದೆ. ವಾಷಿಂಗ್ಟನ್‌, ರಷ್ಯಾ, ಸೌದಿ ಅರೇಬಿಯಾ, ಜಪಾನ್‌, ಜರ್ಮನಿ, ಯುಎಇ, ಮಾಲ್ದೀವ್ಸ್‌ನಲ್ಲಿರುವ ರಾಯಭಾರಿಗಳನ್ನು ದೇಶಕ್ಕೆ ಮರಳಲು ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next