Advertisement

ಸ್ವತ್ಛತೆ ಕಾಪಾಡಲು ಮುಂದಾಗಿ: ಶಾಸಕ ರಾಜುಗೌಡ

12:17 PM Mar 05, 2019 | Team Udayavani |

ಸುರಪುರ: ವಿದ್ಯಾರ್ಥಿಗಳು ತರಗತಿಗಳಲ್ಲಿ ಚೆನ್ನಾಗಿ ಓದಿ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದು ಮುಂದೆ ಬಂದು ಸಮಾಜದಲ್ಲಿ ಉನ್ನತ ಸ್ಥಾನಗಳಿಸಬೇಕು ಎಂದು ಶಾಸಕ ರಾಜುಗೌಡ ಸಲಹೆ ನೀಡಿದರು.

Advertisement

ನಗರದಲ್ಲಿ 12.52 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಪರಿಶಿಷ್ಟ ಜಾತಿಯ (ಹಳೆ ಮತ್ತು ಹೊಸ) ಹಾಗೂ ಪರಿಶಿಷ್ಟ ಪಂಗಡದ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಾಸ್ಟೆಲ್‌ಗ‌ಳ ಕಟ್ಟಡ ಅದ್ಭುತವಾಗಿದ್ದು, ಉತ್ತಮವಾಗಿ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಸ್ವತ್ಛತೆ ಕಾಪಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
 
ಎಚ್‌ಕೆಆರ್‌ಡಿಬಿ ಮತ್ತು 371(ಜೆ) ಜಾರಿ ನಂತರ ಹೈದ್ರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಹೆಚ್ಚಿನ ಅನುದಾನ ಸಿಗುತ್ತಿದೆ. ಸಿ.ಸಿ. ರಸ್ತೆ ಚರಂಡಿ ಮಾಡಿದರೆ ಅದು ಅಭಿವೃದ್ಧಿಯಲ್ಲ, ಅದರ ಜತೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಈ ರೀತಿಯ ವಸತಿ ನಿಲಯಗಳಿಂದ ನಮ್ಮ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಅವರು ಅಭ್ಯಾಸ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನ ಮಾನ ಗಳಿಸಿದಾಗ ಮಾತ್ರ ಹೈದ್ರಾಬಾದ್‌ ಕರ್ನಾಟಕ ಪ್ರದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿದರು.

ತಾಪಂ ಇಒ ಬಿ. ಜಗದೇವಪ್ಪ, ತಾಪಂ ಅಧ್ಯಕ್ಷೆ ಅನುಸೂಬಾಯಿ ತಿರುಪತಿ ಚವ್ಹಾಣ, ಜಿಪಂ ವಿರೋಧ ಪಕ್ಷದ ನಾಯಕ ಮರಿಲಿಂಗಪ್ಪ ನಾಯಕ ಕರ್ನಾಳ, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ಯಲ್ಲಪ್ಪ ಕುರುಕುಂದಿ, ಉದ್ಯಮಿ ಗ್ಯಾನಚಂದ ಜೈನ್‌, ಎಚ್‌ .ಸಿ. ಪಾಟೀಲ, ವೇಣುಗೋಪಾಲ ಜೇವರ್ಗಿ, ದುರ್ಗಪ್ಪ ಗೋಗಿಕೇರಾ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಎಇಇ ಎ.ಆರ್‌. ಬೆಟ್ಟದೂರು, ನಗರಸಭೆ ಪೌರಾಯುಕ್ತ ಏಜಾಜ್‌ ಹುಸೇನ್‌, ಗುತ್ತೇದಾರ ನಾರಾಯಣ ಪ್ರಸಾದ ಇದ್ದರು.

ನಗರಸಭೆ ಸದಸ್ಯ ವಿಷ್ಣು ಗುತ್ತೇದಾರ್‌, ಶಿವಕುಮಾರ ಕಟ್ಟಿಮನಿ, ಮೊಹ್ಮದ್‌ ಗೌಸ್‌, ಅಯ್ಯಣ್ಣ ಪೂಜಾರಿ, ಶಂಕರನಾಯಕ, ಅಪ್ಪಾಸಾಹೇಬ ಪಾಟೀಲ, ನಿಂಗಣ್ಣ ಚಿಂಚೋಳಿ, ಭೀಮಣ್ಣ ಬೇವಿನಾಳ, ವಿರೂಪಾಕ್ಷಿ ಕರ್ನಾಳ, ಈಶ್ವರ ನಾಯಕ, ಶ್ರೀನಿವಾಸ ದರಬಾರಿ, ಬಸವರಾಜ ಕೊಡೇಕಲ್‌, ಮಲ್ಲೇಶಿ ಪಾಟೀಲ ನಾಗರಾಳ ಇದ್ದರು.
 
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ ಸ್ವಾಗತಿಸಿದರು. ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಭು ದೊರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀಕಾಂತ ಬಿರಾದಾರ ದೇವರಗೋನಾಲ ನಿರೂಪಿಸಿದರು. ಇಬ್ರಾಹಿಂಸಾಬ್‌ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next