Advertisement

ಜಗತ್ತಿನ ಯಾವ ದೇಶದಲ್ಲೂ ಜನರನ್ನು ಗ್ಯಾಸ್‌ ಚೇಂಬರ್‌ಗೆ ತಳ್ಳಿ ಸಾಯಿಸುವುದಿಲ್ಲ

01:15 AM Sep 19, 2019 | Team Udayavani |

ನವದೆಹಲಿ: “ಜಗತ್ತಿನ ಯಾವ ಮೂಲೆಯಲ್ಲೂ ಜನರನ್ನು ಗ್ಯಾಸ್‌ ಛೇಂಬರ್‌ನೊಳಕ್ಕೆ ಕಳುಹಿಸಿ ಸಾಯಲು ಬಿಡುವುದಿಲ್ಲ. ಆದರೆ ಭಾರತದಲ್ಲಿ…’

Advertisement

ಮಲಹೊರುವ ಪದ್ಧತಿ ಹಾಗೂ ಒಳಚರಂಡಿ ಸ್ವಚ್ಛಗೊಳಿಸುವ ಪ್ರಕ್ರಿಯೆ ವೇಳೆ ಜನರು ಸಾವಿಗೀಡಾಗುತ್ತಿರುವ ವಿಚಾರದ ಕುರಿತು ಸುಪ್ರೀಂ ಕೋರ್ಟ್‌ ತನ್ನ ಕಳವಳವನ್ನು ವ್ಯಕ್ತಪಡಿಸಿದ ಬಗೆ ಇದು. ಎಸ್‌ಸಿ/ಎಸ್‌ಟಿ ಕಾಯ್ದೆಗೆ ಸಂಬಂಧಿಸಿ ಕಳೆದ ವರ್ಷ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಮರುಪರಿಶೀಲನೆಗೆ ಕೋರಿ ಕೇಂದ್ರ ಸರಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾ. ಅರುಣ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಒಳಚರಂಡಿ ಅಥವಾ ಮ್ಯಾನ್‌ಹೋಲ್‌ಗ‌ಳನ್ನು ಸ್ವಚ್ಛಗೊಳಿಸುವಂಥ ಕಾರ್ಮಿಕರಿಗೆ ಸೂಕ್ತ ರಕ್ಷಣಾ ಕವಚಗಳು ಹಾಗೂ ಆಮ್ಲಜನಕದ ಸಿಲಿಂಡರ್‌ಗಳ ವ್ಯವಸ್ಥೆ ಯನ್ನು ಏಕೆ ಕಲ್ಪಿಸಿಲ್ಲ ಎಂದು ಕೇಂದ್ರ ಸರಕಾರದ ಪರ ಹಾಜರಾಗಿದ್ದ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ರನ್ನು ನ್ಯಾಯಪೀಠ ಪ್ರಶ್ನಿಸಿತು.

ಸರಕಾರವನ್ನು ತರಾಟೆಗೆ ತೆಗೆದುಕೊಂಡ ಪೀಠ, “ಜಗತ್ತಿನ ಯಾವ ದೇಶದಲ್ಲೂ ಜನರನ್ನು ಗ್ಯಾಸ್‌ ಛೇಂಬರ್‌ಗೆ ನೂಕಿ ಸಾಯಿಸುವುದಿಲ್ಲ. ಆದರೆ, ನಮ್ಮ ದೇಶದಲ್ಲಿ ಪ್ರತಿ ತಿಂಗಳು ಮೂರರಿಂದ ನಾಲ್ವರು ಕಾರ್ಮಿಕರು ಇಂಥ ಹೀನಾಯ ಸಾವನ್ನು ಕಾಣುತ್ತಿ ದ್ದಾರೆ. ಮಾನವರೆಲ್ಲರೂ ಸಮಾನರು ಎಂದು ಸಂವಿಧಾನ ಹೇಳುತ್ತದೆ. ಆದರೆ, ಅಧಿಕಾರಿಗಳು ಎಲ್ಲರಿಗೂ ಸಮಾನ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಯಾವುದೇ ರಕ್ಷಣಾ ವ್ಯವಸ್ಥೆಯಿಲ್ಲದೇ ಜನರನ್ನು ಸಾಯಲು ಬಿಡುವುದು ಅಮಾನವೀಯ’ ಎಂದು ಹೇಳಿತು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳೇ ದಾಟಿವೆ. ಆದರೂ, ಜಾತಿ ತಾರತಮ್ಯ ಎನ್ನುವುದು ಈ ದೇಶದಲ್ಲಿ ಇನ್ನೂ ಇದೆ ಎಂದೂ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next