Advertisement

ಮಿಜೋರಾಂ: ಅಕ್ರಮ ವಿದೇಶಿ ವಲಸಿಗರ ಗಡಿಪಾರಿಗೆ ಬಿಜೆಪಿ ಆಗ್ರಹ

04:56 PM Oct 23, 2017 | udayavani editorial |

ಐಜಾಲ್‌ : ನೆರೆಯ ದೇಶಗಳಿಂದ ರಾಜ್ಯವನ್ನು ಅಕ್ರಮವಾಗಿ ಪ್ರವೇಶಿಸಿರುವ ವಿದೇಶೀಯರನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವಂತೆ ಮಿಜೋರಾಂ ನ ಕಾಂಗ್ರೆಸ್‌ ಸರಕಾರವನ್ನು ಬಿಜೆಪಿ ರಾಜ್ಯ ಘಟಕ ಆಗ್ರಹಿಸಿದೆ.

Advertisement

ಯಾವುದೇ ದಾಖಲೆ ಪತ್ರ ಇಲ್ಲದೆ ಅಕ್ರಮವಾಗಿ ರಾಜ್ಯವನ್ನು ಪ್ರವೇಶಿಸಿ ನೆಲೆಯೂರಿರುವ ವಿದೇಶೀಯರನ್ನು ತತ್‌ಕ್ಷಣವೇ ಪತ್ತೆ ಹಚ್ಚಿ ಗಡಿಪಾರು ಮಾಡಬೇಕೆಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ದಿಲೀಪ್‌ ಕುಮಾರ್‌ ಅವರು ಕಳೆದ ಆಗಸ್ಟ್‌ 8ರಂದು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಆದರೆ ಕೇಂದ್ರ ಸರಕಾರದ ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯೋನ್ಮುಖವಾಗುವಲ್ಲಿ ರಾಜ್ಯ ಸರಕಾರ ವಿಫ‌ಲವಾಗಿದೆ ಎಂದು ಬಿಜೆಪಿ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದೆ. 

ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿನ ತನ್ನ ವೋಟ್‌ ಬ್ಯಾಂಕ್‌ ಬಲಪಡಿಸುವ ದಿಶೆಯಲ್ಲಿ ಅಕ್ರಮ ವಿದೇಶೀಯರಿಗೆ ಆಸರೆ ನೀಡಿ ರಾಜಕೀಯ ಲಾಭ ಪಡೆಯುತ್ತಿದೆ ಎಂದು ಬಿಜೆಪಿ ದೂರಿದೆ. 

ರಾಜ್ಯದಲ್ಲಿ  ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಅಕ್ರಮ ವಿದೇಶಿ  ವಲಸೆಗಾರರನ್ನು ಗಡಿಪಾರು ಮಾಡುವುದಾಗಿ ಬಿಜೆಪಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next