ಮಹಾರಾಷ್ಟ್ರ : ಮಕ್ಕಳ ಕಳ್ಳರೆಂದು ಭಾವಿಸಿ ತಂಡವೊಂದು ನಾಲ್ವರು ಸಾಧುಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಲವನ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜಿಲ್ಲೆಯಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು ಅದಕ್ಕೆ ಸರಿಯಾಗಿ ನಾಲ್ವರು ಸಾಧುಗಳು ಕಾಣಿಸಿಕೊಂಡಿದ್ದಾರೆ ಇದರಿಂದ ಅನುಮಾನಗೊಂಡ ಜನರ ಗುಂಪೊಂದು ಸಾಧುಗಳ ಮೇಲೆ ದೊಣ್ಣೆ, ಕೋಲಿನಿಂದ ಮನಬಂದಂತೆ ಥಳಿಸಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸಾಧುಗಳನ್ನು ವಿಚಾರಿಸಿದಾಗ ಉತ್ತರ ಪ್ರದೇಶ ಮೂಲದ ನಾಲ್ವರು ಕಾರಿನಲ್ಲಿ ಕರ್ನಾಟಕದ ಬಿಜಾಪುರದಿಂದ ಪಂಢರಾಪುರದ ದೇವಸ್ಥಾನದ ಕಡೆಗೆ ಹೋಗುತ್ತಿದ್ದು ಈ ವೇಳೆ ಜಾಟ್ ತೆಹಸಿಲ್‌ನ ಲವಂಗಾ ಗ್ರಾಮದಲ್ಲಿ ಅವರು ಸೋಮವಾರ ತಂಗಿದ್ದಾರೆ ಬಳಿಕ ಮಂಗಳವಾರ ಮತ್ತೆ ತಮ್ಮ ಪ್ರಯಾಣವನ್ನು ಮುಂದುವರೆಸಿದ್ದು ದೇವಸ್ಥಾನದ ದಾರಿ ಗೊತ್ತಿಲ್ಲದ ಕಾರಣ ರಸ್ತೆ ಬದಿ ಇದ್ದ ಮಕ್ಕಳಲ್ಲಿ ದಾರಿ ಕೇಳಿದ್ದಾರೆ ಈ ವೇಳೆ ಅದನ್ನು ಗಮನಿಸಿದ ಜನರ ಗುಂಪು ಇವರು ಮಕ್ಕಳ ಕಳ್ಳರೆಂದು ತಿಳಿದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಘಟನೆ ಕುರಿತು ಹೇಳಿಕೆ ನೀಡಿದ ಪೊಲೀಸ್ ಅಧಿಕಾರಿ ಹಲ್ಲೆ ಕುರಿತು ಯಾವುದೇ ದೂರು ಬಂದಿಲ್ಲ ಆದರೂ ವಿಡಿಯೋ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.