ಚೆನ್ನೈ: ಹೊಸತಾಗಿ ಮದುವೆಯಾದ ಯುವತಿ ಆತ್ಮಹತ್ಯೆ ಮಾಡಿಕೊಂಡಲ್ಲಿ ಪತಿಯ ಜತೆಗೆ ಆತನ ಮನೆಯವರು ವಾಸಿಸುತ್ತಿಲ್ಲ ಎಂಬ ಕಾರಣಕ್ಕೆ ಅವರು ತಪ್ಪಿತಸ್ಥರಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನೂತನವಾಗಿ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ ಯುವತಿ ಆತ್ಮಹತ್ಯೆ ಪ್ರಕರಣವೊಂದಲ್ಲಿ ಪತಿಯ ಮನೆಯವರಿಗೆ ಕೆಳಹಂತದ ಕೋರ್ಟ್ ಜೈಲು ಶಿಕ್ಷೆ ವಿಧಿಸಿದ್ದನ್ನು ಹೈಕೋರ್ಟ್ ಪುರಸ್ಕರಿಸಿದೆ.
ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಬೆಳೆಸುವ ಹೊಣೆ ಹೆತ್ತವರದ್ದು. ಅವರನ್ನು ಶಾಲೆಗೆ ಕಳುಹಿಸಿ, ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ಉತ್ತಮ ಉದ್ಯೋಗ ಗಳಿಸುವಂತೆ ಮಾಡುವುದೇ ಹೆತ್ತವರ ಆದ್ಯತೆಯಾಗಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಕರಣದ ಮುಖ್ಯ ಅರ್ಜಿಯ ಬಗ್ಗೆ ಹೈಕೋರ್ಟ್ 28ರಂದು ವಿಚಾರಣೆ ನಡೆಸಲಿದೆ.
ಇದನ್ನೂ ಓದಿ :ಭಾರತದ ಗಡಿಯೊಳಗಡೆ ಬಂದ ಪಾಕಿಸ್ತಾನದ ಪರಿವಾಳ : FIR ದಾಖಲಿಸುವಂತೆ ಸೇನೆ ಒತ್ತಾಯ!
ವರದಕ್ಷಿಣೆ ಕಿರುಕುಳ ಪ್ರಕರಣವೊಂದರಲ್ಲಿ ಪತಿಯ ಮನೆಯವರು ನೂತನ ದಂಪತಿ ಜತೆಗೆ ವಾಸಿಸುತ್ತಿಲ್ಲ. ಅದೇ ಕಾರಣ ಮುಂದಿಟ್ಟುಕೊಂಡು ಶಿಕ್ಷೆ ವಿಧಿಸದೇ ಇರಲು ಸಾಧ್ಯವಿಲ್ಲ ಎಂದು ಕೆಳಹಂತದ ಕೋರ್ಟ್ ತೀರ್ಪು ನೀಡಿತ್ತು. ಜತೆಗೆ ಅವರಿಗೆ 2 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆಯನ್ನೂ ನೀಡಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.