Advertisement
ಮಹಾರಾಷ್ಟ್ರದಲ್ಲಿ ಅಪಾರ್ಟ್ಮೆಂಟ್ಗಳ ಸಹಿತ ಅವಧಿ ಮೀರಿದ ಕಟ್ಟಡಗಳನ್ನು ವಶಪಡಿಸಿ ಕೆಡವಿ ಹಾಕುವುದರ ವಿರುದ್ಧ ಮುಂಬಯಿ ಪ್ರಾಪರ್ಟಿ ಓನರ್ಸ್ ಅಸೋಸಿಯೇಶನ್ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಅದರ ಜತೆಗೆ ಇದೇ ರೀತಿಯ ಒಟ್ಟು 16 ಅರ್ಜಿಗಳು ಸಲ್ಲಿಕೆಯಾಗಿದ್ದವು.
Related Articles
Advertisement
ನ್ಯಾ| ನಾಗರತ್ನಾ ಆಕ್ಷೇಪನ್ಯಾಯಪೀಠದಲ್ಲಿದ್ದ ನ್ಯಾ| ಬಿ.ವಿ. ನಾಗರತ್ನಾ ಅವರು ನ್ಯಾ| ಕೃಷ್ಣ ಅಯ್ಯರ್ ನೀಡಿದ್ದ 1977ರ ತೀರ್ಪಿನ ಬಗ್ಗೆ ಈಗ ಸಿಜೆಐ ಮಾಡಿರುವ ವ್ಯಾಖ್ಯಾನ ಆಕ್ಷೇಪಾರ್ಹ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಖಾಸಗಿ ಅಥವಾ ಸರಕಾರದ ಆಸ್ತಿಯೇ ಆಗಿದ್ದರೂ ಅದು ಎಲ್ಲರ ಒಳಿತಿಗಾಗಿಯೇ ಇರ ಬೇಕು. ಆರ್ಥಿಕ ನೀತಿ ರೂಪಿಸುವುದು ಕೋರ್ಟ್ಗಳ ಕೆಲಸವಲ್ಲ ಎಂದು ಹೇಳಿದ್ದಾರೆ. ಇದೇ ವೇಳೆಸಂಪೂರ್ಣ ವ್ಯತಿರಿಕ್ತ ತೀರ್ಪು ನೀಡಿರುವ ನ್ಯಾ| ಸುಧಾಂಶು ಧುಲಿಯಾ, ಮುಖ್ಯ ನ್ಯಾಯಮೂರ್ತಿ ಗಳು ವ್ಯಕ್ತಪಡಿಸಿದ ಅಭಿಪ್ರಾಯ ಕಠೊರವಾಗಿವೆ. ಅದನ್ನು ವ್ಯಕ್ತಪಡಿಸುವ ಅಗತ್ಯ ಇರಲಿಲ್ಲ ಎಂದಿದ್ದಾರೆ. ಏನಿದು ರಂಗನಾಥ ರೆಡ್ಡಿ ಪ್ರಕರಣ?
1976ರಲ್ಲಿ ಕರ್ನಾಟಕದ ರಸ್ತೆಗಳಲ್ಲಿ ಸಂಚರಿಸು ತ್ತಿದ್ದ ಖಾಸಗಿ ಬಸ್ಗಳನ್ನು ರಾಜ್ಯ ಸರಕಾರ ಸ್ವಾಧೀನಪಡಿಸಿಕೊಂಡು ರಾಷ್ಟ್ರೀಕರಣಗೊಳಿಸಿತ್ತು. ಅದನ್ನು ಪ್ರಶ್ನಿಸಿ ರಂಗನಾಥ ರೆಡ್ಡಿ ಎಂಬವರು 1977ರಲ್ಲಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ರಾಜ್ಯ ಸರಕಾರ ಕೈಗೊಂಡಿದ್ದ ತೀರ್ಮಾನದ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿದ್ದರು. ಬಸ್ ಕಂಪೆನಿಗಳನ್ನು ವಶಪಡಿಸಿಕೊಳ್ಳುವ ಮೂಲಕ ರಾಜ್ಯ ಸರಕಾರವು ಸಂವಿಧಾನದ ಮೂಲಭೂತ ಹಕ್ಕಿನಂತೆ ಯಾವುದೇ ಉದ್ಯೋಗ ಕೈಗೊಳ್ಳುವ ಹಕ್ಕನ್ನು ಕಸಿದುಕೊಂಡಿದೆ ಎಂದು ಅರ್ಜಿಯಲ್ಲಿ ವಾದಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ವೇಳೆ 7 ನ್ಯಾಯಮೂರ್ತಿಗಳಿದ್ದ ನ್ಯಾಯಪೀಠವು 4:3 ಅನುಪಾತದಲ್ಲಿ ತೀರ್ಪು ನೀಡಿತ್ತು. ಈ ಪೈಕಿ ನ್ಯಾ| ಕೃಷ್ಣ ಅಯ್ಯರ್ ಅವರು ರಾಜ್ಯ ಸರಕಾರವು ಜನರ ಅಭಿವೃದ್ಧಿಗಾಗಿ ಯಾವುದೇ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು ಎಂದಿದ್ದರು. ಏನಿದು ಪ್ರಕರಣ?
– ಬಾಳಿಕೆ ಅವಧಿ ಮೀರಿದ ಕಟ್ಟಡಗಳನ್ನು ವಶಪಡಿಸಿಕೊಳ್ಳುವ ಮಹಾರಾಷ್ಟ್ರ ಸರಕಾರದ ಕ್ರಮದ ವಿರುದ್ಧ ಆಕ್ಷೇಪ
– ಆಸ್ತಿ ಹೊಂದುವ ಹಕ್ಕುಗಳ ಉಲ್ಲಂಘನೆ ಎಂದು ಮುಂಬಯಿ ಆಸ್ತಿ ಮಾಲಕರ ಸಂಘದ ವಾದ
– ಕೋರ್ಟ್ಗಳ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮುಂಬಯಿ ಆಸ್ತಿ ಮಾಲಕರ ಸಂಘದಿಂದ ಅರ್ಜಿ
– ಸುದೀರ್ಘ 32 ವರ್ಷಗಳ ವಿಚಾರಣೆ ಮುಗಿದು ಈಗ ಅಂತಿಮ ತೀರ್ಪು ಸುಪ್ರೀಂ ಕೋರ್ಟ್ ಹೇಳಿದ್ದೇನು?
– ಸಾರ್ವಜನಿಕರ ಹಿತಕ್ಕಾಗಿ ಖಾಸಗಿಸೊತ್ತು ವಶಪಡಿಸಿಕೊಳ್ಳುವ ಅಧಿಕಾರ ಸರಕಾರಕ್ಕೆ ಇಲ್ಲ
– ಸಮಾಜವಾದಿ ಸಿದ್ಧಾಂತದ ಅರ್ಥ ವ್ಯವಸ್ಥೆಯಿಂದ ನಮ್ಮು ದೇಶ ಬಹುದೂರ ಸಾಗಿ ಬಂದಿದೆ
– ಜನರ ಅಭಿವೃದ್ಧಿಗೆ ಸರಕಾರ, ಖಾಸಗಿ ಸಂಸ್ಥೆಗಳು ಜತೆಗೂಡಿ ಕೆಲಸ ಮಾಡಬಹುದು
– ಎಲ್ಲ ಖಾಸಗಿ ಆಸ್ತಿಗಳನ್ನು ಸಮುದಾಯದ ಸಂಪನ್ಮೂಲ ಎಂದು ಪರಿಗಣಿಸಲು ಆಗದು
– ಈ ನಿಟ್ಟಿನಲ್ಲಿ ಕೃಷ್ಣ ಅಯ್ಯರ್ ತೀರ್ಪು ಸಹಿತ ಹಿಂದಿನ ಎಲ್ಲ ತೀರ್ಪುಗಳೂ ರದ್ದು ಕರ್ನಾಟಕ ಮೂಲದ ಪ್ರಕರಣ ರದ್ದು
– 1977ರಲ್ಲಿ ಖಾಸಗಿ ಬಸ್ಗಳನ್ನು ವಶಪಡಿಸಿಕೊಂಡು ರಾಷ್ಟ್ರೀಕರಣಗೊಳಿಸಿದ್ದ ಕರ್ನಾಟಕ ರಾಜ್ಯ ಸರಕಾರ
– ಸರಕಾರದ ಕ್ರಮ ಪ್ರಶ್ನಿಸಿ ರಂಗನಾಥ ರೆಡ್ಡಿ ಎಂಬವರಿಂದ ಸುಪ್ರೀಂನಲ್ಲಿ ದಾವೆ
– ಯಾವುದೇ ಉದ್ಯೋಗ ಕೈಗೊಳ್ಳುವ ಹಕ್ಕನ್ನು ಕಸಿದುಕೊಂಡಿದೆ ಎಂಬ ವಾದ ಮಂಡನೆ
– ಜನರ ಒಳಿತಿಗಾಗಿ ಖಾಸಗಿ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು ಸರಿ ಎಂದು ತೀರ್ಪು ಕೊಟ್ಟಿದ್ದ ನ್ಯಾ| ಕೃಷ್ಣ ಅಯ್ಯರ್
– ಆಗ 7 ನ್ಯಾಯಮೂರ್ತಿಗಳಿದ್ದ ನ್ಯಾಯ ಪೀಠದಿಂದ 4:3 ಅನುಪಾತದ ತೀರ್ಪು