ಕುವೈಟ್: ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಇರಾನ್ ವಿದೇಶಾಂಗ ಸಚಿವಾಲಯ ತೆಹ್ರಾನ್ ನಲ್ಲಿರುವ ಭಾರತದ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದ್ದ ಬೆನ್ನಲ್ಲೇ ಕುವೈಟ್ ಸೂಪರ್ ಮಾರ್ಕೆಟ್ ನಲ್ಲಿ ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಡಬ: ನಿಯಂತ್ರಣ ತಪ್ಪಿ ಕಿರು ಸೇತುವೆಯ ತಡೆಗೋಡೆಗೆ ಕಾರು ಢಿಕ್ಕಿ; ಓರ್ವ ಸಾವು, ಇಬ್ಬರು ಗಂಭೀರ
ಪ್ರವಾದಿ ಮುಹಮ್ಮದ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿರುವ ಅಲ್ ಅರ್ದಿಯಾ ಕೋ ಆಪರೇಟಿವ್ ಸೊಸೈಟಿಯ ಕೆಲಸಗಾರರು ಭಾರತದ ಟೀ ಪುಡಿ ಹಾಗೂ ಇತರ ಉತ್ಪನ್ನಗಳನ್ನು ಒಂದೆಡೆ ರಾಶಿ ಹಾಕಿ ಪ್ರತಿಭಟನೆ ನಡೆಸಿರುವುದಾಗಿ ವರದಿ ವಿವರಿಸಿದೆ.
ಬಿಜೆಪಿಯ ನೂಪುರ್ ಶರ್ಮಾ ನೀಡಿರುವ ಹೇಳಿಕೆಗೆ ಸೌದಿ ಅರೇಬಿಯಾ, ಕತಾರ್ ಹಾಗೂ ಕೈರೋದ ಪ್ರಭಾವಿ ಅಲ್ ಅಝರ್ ಯೂನಿರ್ವಸಿಟಿ ತೀವ್ರವಾಗಿ ಖಂಡಿಸಿದೆ.
ಮತ್ತೊಂದೆಡೆ ಕುವೈಟ್ ನಗರದಲ್ಲಿನ ಸೂಪರ್ ಮಾರ್ಕೆಟ್ ನಲ್ಲಿರುವ ಭಾರತದ ಅಕ್ಕಿ, ಮೆಣಸು ಹಾಗೂ ಇತರ ಉತ್ಪನ್ನಗಳ ಮೇಲೆ ಪ್ಲಾಸ್ಟಿಕ್ ಶೀಟ್ ಗಳಿಂದ ಮುಚ್ಚಿಡಲಾಗಿದೆ ಎಂದು ವರದಿ ತಿಳಿಸಿದೆ. “ ನಾವು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿದ್ದೇವೆ” ಎಂದು ಅರೇಬಿಕ್ ಭಾಷೆಯಲ್ಲಿ ಬರೆಯಲಾಗಿದೆ ಎಂದು ವರದಿ ಹೇಳಿದೆ.