Advertisement

ಕರ್ನಾಟಕದಲ್ಲಿ17ಕ್ಕೆ ಏರಿದ ಸಾವಿನ ಸಂಖ್ಯೆ ; ದೇಶದಲ್ಲಿ 20 ಸಾವಿರ ಸೋಂಕುಪೀಡಿತರು

09:01 AM Apr 23, 2020 | Hari Prasad |

ಬೆಂಗಳೂರು: ಕೋವಿಡ್ 19 ವೈರಸ್ ಮಾರಿಯಿಂದಾಗಿ ರಾಜ್ಯದಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಕಲಬುರಗಿಯ 80 ವರ್ಷದ ವೃದ್ಧ ಮೃತಪಟ್ಟವರಾಗಿದ್ದು, ಈ ಮೂಲಕ ಸಾವಿನ ಸಂಖ್ಯೆಯೂ 17ಕ್ಕೆ ಏರಿದೆ.

Advertisement

ಮಂಗಳವಾರ ರಾಜ್ಯದಲ್ಲಿ ಮತ್ತೆ 10 ಪ್ರಕರಣಗಳು ಕಾಣಿಸಿಕೊಂಡಿದ್ದು, ಒಟ್ಟಾರೆ ಸೋಂಕಿಗೊಳಗಾದವರ ಸಂಖ್ಯೆ 418ಕ್ಕೆ ಏರಿಕೆಯಾಗಿದೆ.

ಕಲಬುರಗಿಯಲ್ಲಿ ಸೋಂಕಿನಿಂದ ಮೃತಪಟ್ಟ ವೃದ್ಧ ನಾಲ್ಕು ವರ್ಷಗಳಿಂದ ಪಾರ್ಕಿನ್‌ಸನ್‌ ಕಾಯಿಲೆಯಿಂದ ಬಳಲುತ್ತಿದ್ದರು. ಎ.19ರಂದು ತೀವ್ರ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಮಂಗಳವಾರ ಪಾಸಿಟಿವ್‌ ವರದಿ ಬಂದಿತ್ತು. ಆದರೆ ಇದಕ್ಕೂ ಮುನ್ನ ವೃದ್ಧ ಸೋಮವಾರ (ಎ. 20) ರಾತ್ರಿ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾರೆ.

17 ಮಂದಿ ಗುಣಮುಖ
ರಾಜ್ಯದ ಸೊಂಕುಪೀಡಿತರ ಪೈಕಿ ಮಂಗಳ ವಾರ 17 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಗುಣಮುಖರಾದವರ ಸಂಖ್ಯೆ 129ಕ್ಕೆ ಏರಿದೆ.

ದೇಶದಲ್ಲಿ 20 ಸಾವಿರ ಸೋಂಕುಪೀಡಿತರು
ಮಂಗಳವಾರ ರಾತ್ರಿ ವೇಳೆಗೆ ದೇಶದಲ್ಲಿ 20 ಸಾವಿರ ಮಂದಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರ ಒಂದರಲ್ಲಿಯೇ ಮಂಗಳವಾರ ಮತ್ತೆ 552 ಮಂದಿಗೆ ಸೋಂಕು ತಗುಲಿದೆ. ಈ ರಾಜ್ಯದಲ್ಲಿ ಪೀಡಿತರ ಸಂಖ್ಯೆ 5,200ನ್ನೂ ದಾಟಿ ಮುಂದುವರಿಯುತ್ತಿದೆ. ಮಂಗಳವಾರ 19 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 259ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ರವಿವಾರ 552 ಮತ್ತು ಸೋಮವಾರ 446 ಪ್ರಕರಣಗಳು ವರದಿಯಾಗಿದ್ದವು.

Advertisement

ದಿಲ್ಲಿಯಲ್ಲಿ ಲೋಕಸಭಾ ಕಾರ್ಯಾಲಯದ ಸ್ಪಚ್ಛತಾ ಸಿಬಂದಿಯೊಬ್ಬರಿಗೆ ಕೋವಿಡ್ 19 ವೈರಸ್ ಸೋಂಕು ಮಂಗಳವಾರ ದೃಢಪಟ್ಟಿದೆ. ಸದ್ಯ ಅವರ ಕುಟುಂಬದ 11 ಮಂದಿಯನ್ನು ಕ್ವಾರಂಟೈನ್‌ ನಲ್ಲಿ ಇರಿಸಲಾಗಿದೆ.

55 ವರ್ಷ ಮೇಲ್ಪಟ್ಟವರಿಗೆ ಪರೀಕ್ಷೆ
ರಾಜ್ಯದಲ್ಲಿ ಅಸ್ತಮಾ, ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುವ 55 ವರ್ಷ ಮೇಲ್ಪಟ್ಟವರಿಗೆ ಶಂಕಿತ ಕೋವಿಡ್ 19 ವೈರಸ್ ಸಣ್ಣ ಪ್ರಮಾಣದ ಲಕ್ಷಣ ಕಂಡುಬಂದರೂ ತಪಾಸಣೆಗೆ ಒಳಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್‌ ಹೇಳಿದ್ದಾರೆ.

ಇದುವರೆಗೆ ಕೋವಿಡ್ 19 ವೈರಸ್ ಸೋಂಕು 55 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಪತ್ತೆಯಾಗಿವೆ. ಅಲ್ಲದೆ 55ರಿಂದ 80 ವರ್ಷ ವಯಸ್ಸಿನವರು ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂದವರು ತಿಳಿಸಿದ್ದಾರೆ.

ಜಾಗತಿಕ ಸೋಂಕು ಪೀಡಿತರ ಸಂಖ್ಯೆ: 25,01,156
ಒಟ್ಟು ಸಾವು (ಜಗತ್ತು) : 1,76,810

ಭಾರತ (ಸೋಂಕು): 20,004

ಸಾವು (ಭಾರತ): 641
ಚೇತರಿಕೆ : 3,121

ಕರ್ನಾಟಕ (ಸೋಂಕು): 418
ಎಲ್ಲಿ ಹೆಚ್ಚು ಸೋಂಕು
ಬೆಂಗಳೂರು 89
ಮೈಸೂರು 86
ಬೆಳಗಾವಿ 43
ವಿಜಯಪುರ 35

ಅತಿ ಹೆಚ್ಚು
ಮಹಾರಾಷ್ಟ್ರ 5,218
ಗುಜರಾತ್‌ 2,178
ದಿಲ್ಲಿ 2,156
ರಾಜಸ್ಥಾನ 1,659

Advertisement

Udayavani is now on Telegram. Click here to join our channel and stay updated with the latest news.

Next