Advertisement

ಸಾಮೂಹಿಕವಾಗಿ ಸೇವೆಗೆ ಮುಂದಾಗಿ: ದುಗ್ಗಣ್ಣ ಸಾವಂತರು

12:04 PM Oct 23, 2017 | |

ಮೂಲ್ಕಿ: ಒಂಬತ್ತು ಮಾಗಣೆಯ 32 ಗ್ರಾಮಗಳ ಒಡತಿ ತಾಯಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸಂಭ್ರಮದ ಬ್ರಹ್ಮಲಕಶೋತ್ಸವದಲ್ಲಿ ಸಾಮೂಹಿಕವಾಗಿ ಸೇವೆ ಮಾಡುವುದಕ್ಕಾಗಿ ಎಲ್ಲ ಭಕ್ತರು ಮುಂದಾಗಿ ಯಶಸ್ವಿಗೊಳಿಸಿ ಎಂದು ಮೂಲ್ಕಿ ಸೀಮೆಯರಸರಾದ ದುಗ್ಗಣ್ಣ ಸಾವಂತರು ಹೇಳಿದರು.

Advertisement

ಅವರು ರವಿವಾರ ಮೂಲ್ಕಿಯಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಬಂಧ ಒಂಬತ್ತು ಮಾಗಣೆಯ 32 ಗ್ರಾಮಗಳನ್ನು ಒಳಗೊಂಡ ಮೂಲ್ಕಿ ಸೀಮೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇವಿಯ ಸೇವೆಯ ಅವಕಾಶ ಮತ್ತೆ ಒದಗಿ ಬಂದಿದೆ. ಇಲ್ಲಿ ಸೀಮೆಯ ಎಲ್ಲ ಭಕ್ತ ಜನರಿಗೂ ಮುಕ್ತ ಅವಕಾಶವಿದೆ. ಜತೆಗೆ ದೇವಿ ಸನ್ನಿಧಿಯ ಅಭಿವೃದ್ಧಿಯ ಯೋಜನೆಗಳು ನಡೆಯಲಿದೆ ಸಾಮೂಹಿಕವಾಗಿ ಎಲ್ಲರೂ ಒಂದೇ ಮನಸ್ಸಿನಿಂದ ತಾಯಿ ಸನ್ನಿದಿಯ ಬೆಳವಣಿಗೆಯಲ್ಲಿ ಒಗ್ಗಟ್ಟಿನಿಂದ ಭಾಗವಹಿಸೋಣ ಎಂದು ಸೀಮೆಯರಸರು ಜನತೆಯನ್ನು ಮನವಿ ಮಾಡಿ ಮಾತನಾಡಿದರು.

ಬಪ್ಪನಾಡು ದೇಗುಲದ ಆಡಳಿತ ಮೊಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ ಮಾತನಾಡಿ, ಸರಕಾರದ ಇತಿಮಿತಿಯೊಳಗೆ ದೇವಸ್ಥಾನದ ಎಲ್ಲ ಕೆಲಸ ಕಾರ್ಯಗಳು ನಡೆಯಬೇಕಾಗಿದೆ ಸಮಿತಿಯ ರಚನೆಯಲ್ಲೂ ಸರಕಾರದ ಮಿತಿಯನ್ನು ನೋಡಿಕೊಳ್ಳಬೇಕಾಗಿದೆ. ಸಮಿತಿಯಲ್ಲಿ ಮಾಗಣೆಯ ಆಸಕ್ತ ಎಲ್ಲರಿಗೂ ಅವಕಾಶ ಕೊಡುವುದು ಸಾಧ್ಯವಿಲ್ಲದೆ ಕೇವಲ 15 ಜನರ ಸಮಿತಿಯನ್ನು ರಚಿಸಿದ್ದರೂ ದೇವರ ಸೇವೆ ಮಾಡುವಲ್ಲಿ ವಿವಿಧ ರೂಪದಲ್ಲಿ ಆಸಕ್ತ ಭಕ್ತರನ್ನು ಸೇರಿಸಿಕೊಂಡು ಸಮಾನ ಮನಸ್ಸಿನಿಂದ ದೇವರ ಕೆಲಸದಲ್ಲಿ ಸಹಕರಿಸಿ ಎಂದು ಹೇಳಿದರು.

ಏಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳ ಆಡಳಿತೆ ಮೊಕ್ತೇಸರ ಸಂತೋಷ್‌ ಹೆಗ್ಡೆ ಮಾತನಾಡಿ, ಕಳೆದ 12 ವರ್ಷಗಳ
ಹಿಂದಿನ ಬ್ರಹ್ಮ ಕಲಶೋತ್ಸವದ ಬಳಿಕ ಈಗಿನ ಆಡಳಿತೆಯ ಉಸ್ತುವಾರಿಯ ಮೂಲಕ ದೇವಳದಲ್ಲಿ ಪ್ರಗತಿಯ ಕೆಲಸಕಾರ್ಯಗಳು ನಡೆದಿದೆ ಸೀಮೆಯ ಜನರು ಅವರ ಕೆಲಸವನ್ನು ಪ್ರೋತ್ಸಾಹಿಸಿ ಮತ್ತಷ್ಟು ಬೆಳವಣಿಗೆಗಾಗಿ ಸಹಕರಿಸುವ ಎಂದು ಹೇಳಿದರು.

Advertisement

ಮಾಜಿ ಆಡಳಿತ ಮೊಕ್ತೇಸರ ಹರಿಕಷ್ಣ ಪುನರೂರು ಮಾತನಾಡಿ, ಸಮಿತಿಯ ಒಳಗೆ ಸ್ಥಾನಮಾನ ಸಿಗಲಿಲ್ಲ ಎಂಬ ಮನಸ್ತಾಪ ಬೇಡ ದೇವರ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಬಳಸಿಕೊಂಡು ತಾಯಿ ದುರ್ಗಾಮಾತೆಯ ಪರಮಾನುಗ್ರಹಕ್ಕೆ ಪಾತ್ರರಾಗುವ ಎಂದು ಹೇಳಿದರು.

ಹಿಂದಿನ ಬ್ರಹ್ಮಕಲಶೋತ್ಸವ ಸಮಾರಂಭದ ಮುಂಬಾಯಿ ಸಮಿತಿಯ ಕಾರ್ಯದರ್ಶಿ ಜಯ ಎ.ಶೆಟ್ಟಿ ಮತ್ತು ಸಮಿತಿಯ ಅಶೋಕ್‌ ಸುವರ್ಣ ಮಾತನಾಡಿ, ಮುಂಬಯಿಯಿಂದ ಸಾಕಷ್ಟು ಅನುದಾನವನ್ನು ಪಡೆಯುವಲ್ಲಿ ದೇವಿಯ ಕೃಪೆ ಇದೆ ಎಂದು ಹೇಳಿದರು. ಧಾರ್ಮಿಕ ಆಚರಣೆಗಳ ಬಗ್ಗೆ  ಮಾಹಿತಿಯಿತ್ತು ವಿದ್ವಾಂಸರಾದ ಪಂಜದ ಭಾಸ್ಕರ ಭಟ್‌ ಮಾತನಾಡಿದರು. ಸಭೆಯಲ್ಲಿ ಜಯರಾಮ ಆಳ್ವ,ಕೆ. ಕೃಷ್ಣ ಶೆಟ್ಟಿ, ಡಾ| ಜಗದೀಶ್‌, ಬಿ.ಸಂಜೀವ ದೇವಾಡಿಗ ಮುಂತಾದವರು ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಸುನೀಲ್‌ ಆಳ್ವ ಮಾತನಾಡಿ, ಮಾಹಿತಿ ನೀಡುತ್ತಾ ಬ್ರಹ್ಮ ಕಲಶೋತ್ಸವ ಮತ್ತು ಕೆಲವೊಂದು ಮಹತ್ವದ ಯೋಜನೆಗಳೊಂದಿಗೆ 2.50 ಕೋಟಿ ರೂ.ಗಳ ಮೊದಲ ಹಂತದ ಯೋಜನೆ ಹಾಗೂ ನಂತರದ ನಿತ್ಯ ಅನ್ನದಾನ, ಚಿನ್ನದ ಪಲ್ಲಕ್ಕಿ, ಸೇರಿ ಇತರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ರೂ. 10ಕೋಟಿ ಮೊತ್ತದ ಸಮಗ್ರ ಯೋಜನೆಯನ್ನು ಅಭಿವೃದ್ಧಿ ಸಮಿತಿ ಹಮ್ಮಿಕೊಂಡಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮೂಲ್ಕಿ ಬಪ್ಪನಾಡು ನಾರಾಯಣ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಪಿ.ಜಯಮ್ಮ, ಪವಿತ್ರ ಪಾಣಿ ಅತ್ತೂರು ಬೈಲ ಉಡುಪರು, ಅರ್ಚಕ ಶ್ರೀಪತಿ ಉಪಾಧ್ಯಾಯ, ಮಾಜಿ ಆಡಳಿತೆ ಮೊಕ್ತೇಸರ ಹರಿಕೃಷ್ಣ ಪುನರೂರು, ಜಯ ಶೆಟ್ಟಿ, ಆಡಳಿತ ಮೊಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಮೂಲ ಸೌಕರ್ಯ ಪೂರೈಕೆಗೆ ಮನವಿ
ಬ್ರಹ್ಮಲಕಶೋತ್ಸವದ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ದೇವಳದ ಮಹಾರಥ ಸಂಚರಿಸುವ ವಿಸ್ತಾರವಾದ ಪ್ರದೇಶವನ್ನು ರಥ ಬೀದಿಯಾಗಿ ಪರಿವರ್ತಿಸಿ ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಪೂರೈಸುವ ಯೋಜನೆ ಮತ್ತು ಸ್ವಚ್ಛತೆಗಾಗಿ ನೀರಿನ ಯೋಜನೆ ಅಳವಡಿಕೊಂಡು ಊರಿನ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ಜನಪ್ರತಿನಿಧಿಗಳ ಇಚ್ಛಾಶಕ್ತಿಯನ್ನು ಬಳಸಿಕೊಂಡು ರೂಪಿಸಬೇಕು. 
-ಉದಯ ಶೆಟ್ಟಿ ಶಿಮಂತೂರು, ದೇವಳದ ಆಡಳಿತ ಮೊಕ್ತೇಸರ

Advertisement

Udayavani is now on Telegram. Click here to join our channel and stay updated with the latest news.

Next