Advertisement

ಸರಕು ಸಾಗಾಣಿಕೆ ವಾಹನದಲ್ಲಿ ಪ್ರಯಾಣ ಅಪರಾಧ

04:07 PM Jun 19, 2019 | Suhan S |

ಅರಸೀಕೆರೆ: ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಕಾನೂನು ರೀತಿಯಲ್ಲಿ ಅಪರಾಧವಾಗಿದ್ದು, ಈ ಬಗ್ಗೆ ಉಂಟಾಗುವ ಅನೇಕ ಸಮಸ್ಯೆಗಳನ್ನು ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಜೆಎಂಎಫ್ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ನಿರ್ಮಲಾ ತಿಳಿಸಿದರು.

Advertisement

ನಗರದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯಿತಿ, ಆರಕ್ಷಕ ಇಲಾಖೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ತಾಲೂಕಿನಲ್ಲಿ ಜೂ.18ರಿಂದ 21ರವರೆಗೆ ಸಂಚರಿಸಲಿರುವ ಕಾನೂನು ಸಾಕ್ಷರತಾ ರಥಯಾತ್ರೆಗೆ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಅಪಾಯಕ್ಕೆ ಆಹ್ವಾನ: ನಗರದ ಪ್ರದೇಶವು ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಸರಕು ಸಾಗಾಣಿಕೆ ವಾಹನಗಳು ಪ್ರಯಾಣಿಕರನ್ನು ತುಂಬಿಕೊಂಡು ಸಾಗಿ ಸುತ್ತಿರುವುದು ಮೋಟಾರ್‌ ವಾಹನದ ಕಾಯ್ದೆಯ ರೀತಿಯಲ್ಲಿ ಅಪರಾಧವಾಗಿದ್ದು, ಅಲ್ಲದೇ ತಾವುಗಳೇ ಅಪಾಯಕ್ಕೆ ಆಹ್ವಾನ ನೀಡಿದಂತೆ ಆಗುತ್ತದೆ.

ಆಕಸ್ಮಾತ್‌ ಏನಾದರೂ ಅಪಘಾತ ಸಂಭವಿಸಿದರೇ ಪ್ರಯಾಣಿಕರ ಸಾವು ನೋವುಗಳಿಗೆ ಯಾವುದೇ ರೀತಿಯಲ್ಲಿ ಕಾನೂನು ರೀತಿ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ವಾಹನದ ಮಾಲೀಕರು ಮತ್ತು ಚಾಲಕರ ಮೇಲೆಯೇ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.ಇದರಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ, ಆದಕಾರಣ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾನೂನು ಸಾಕ್ಷರತ ರಥಯಾತ್ರೆ ಮೂಲಕ ಕಾರ್ಯಕ್ರಮಗಳ ಸಂಯೋಜನೆ ಮಾಡಲಾಗಿದೆ ಎಂದರು.

ಪರಿಸರ ಸಂರಕ್ಷಣೆ ಅಗತ್ಯ: ಅಪರ ಸಿವಿಲ್ ನ್ಯಾಯಾ ಧೀಶರಾದ ಅಮಿತ್‌ ಘಟ್ಟಿ ಅವರು ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ದೈನಂದಿನ ಬದುಕಿನಲ್ಲಿ ಆವರಿಸಿಕೊಂಡಿರುವ ಪ್ಲಾಸ್ಟಿಕ್‌ ಬಳಕೆಯನ್ನು ಹಂತ-ಹಂತವಾಗಿ ನಿಷೇಧಿಸುವ ಸಂಕಲ್ಪವನ್ನು ನಾವು ಮಾಡಬೇಕಾಗಿದೆ ಎಂದರು.

Advertisement

ಜೀವಸಂಕುಲದ ಉಸಿರಾದ ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದ್ದು, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ನೈಸರ್ಗಿಕ ಸಂಪತ್ತನ್ನು ಮಾಡಿರುವ ಕಾರಣ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಕಾಲ, ಕಾಲಕ್ಕೆ ಉತ್ತಮ ಮಳೆಯಾಗದೇ ಹೆಚ್ಚಿನ ಮರಗಿಡಗಳು ಬೆಳೆಯದ ಪರಿಣಾಮ ಕುಡಿಯಲು ಜನರಿಗೆ ಶುದ್ಧ ಗಾಳಿಯಿಲ್ಲ, ಹಾಗೂ ಉಸಿರಾಡಲು ಪರಿಶುದ್ಧ ಗಾಳಿ ಇಲ್ಲದಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ನಾವುಗಳು ಬಾರಿ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಅತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎ.ಜಿ.ಪಿ. ವಕೀಲರಾದ ವಿಜಯಕುಮಾರ್‌ ಪರಿಸರ ಉಳಿಸುವ ಮತ್ತು ಸಂರಕ್ಷಿಸುವ ಬಗ್ಗೆ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಯು.ಮೂರ್ತಿ, ಕಾರ್ಯದರ್ಶಿ ಕಿರಣ್‌ ಮೈಲಾರ್‌, ಸರ್ಕಾರಿ ಸಹಾಯಕ ಅಭಿ ಯೋಜಕರಾದ ಶಿವಮ್ಮ, ಹಿರಿಯ ವಕೀಲರಾದ ಸಿ. ನಟರಾಜ್‌, ಸಿದ್ದಮಲ್ಲಪ್ಪ, ಲೋಕೇಶ್‌ ಚಂದ್ರಶೇಖರ್‌, ಕಾರ್ಮಿಕ ಇಲಾಖೆ ನಿರೀಕ್ಷಕರಾದ ಪ್ರಭಾಕರ್‌ ನಗರ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ತಿಮ್ಮಯ್ಯ ಹಾಗೂ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next