Advertisement

Dhoom ಸಿನಿಮಾ ಶೈಲಿಯಲ್ಲಿ 15 ಕೋಟಿ ಮೌಲ್ಯದ ಚಿನ್ನಾಭರಣ ದೋಚಲು ಹೋಗಿ ಕಾಲು ಮುರಿದುಕೊಂಡ ಕಳ್ಳ

06:16 PM Sep 04, 2024 | Team Udayavani |

ಭೋಪಾಲ್: ಬಾಲಿವುಡ್ ಚಿತ್ರ ‘ಧೂಮ್ 2’ ನಲ್ಲಿ ಹೃತಿಕ್ ರೋಷನ್ ಅವರ ಪಾತ್ರದಿಂದ ಪ್ರೇರಿತರಾಗಿ ಕಳ್ಳನೊಬ್ಬ ವಸ್ತುಸಂಗ್ರಹಾಲಯದಲ್ಲಿದ್ದ ಸುಮಾರು 15 ಕೋಟಿ ಮೌಲ್ಯದ ಚಿನ್ನಾಭರಣವನ್ನು ಕದಿಯಲು ಹೋಗಿ ಕೊನೆಗೆ ಹಾಕಿದ ಪ್ಲಾನ್ ಕೈಕೊಟ್ಟು ಕಾಲು ಮುರಿದುಕೊಂಡು ವಸ್ತುಸಂಗ್ರಹಾಲಯದ ಆವರಣದೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಭೋಪಾಲ್ ನಲ್ಲಿ ನಡೆದಿದೆ.

Advertisement

ವಿನೋದ್ ಯಾದವ್ ಎಂಬವನೇ ಕಳ್ಳತನಕ್ಕೆ ಯತ್ನಿಸಿ ಪೊಲೀಸರ ಅತಿಥಿಯಾದ ವ್ಯಕ್ತಿ.

ಏನಿದು ಪ್ರಕರಣ:
ವಿನೋದ್ ಯಾದವ್ ಎಂಬ ವ್ಯಕ್ತಿಯೊಬ್ಬ ಕಳೆದ ಸೋಮವಾರ ಭೋಪಾಲ್‌ನ ಸ್ಟೇಟ್ ಮ್ಯೂಸಿಯಂಗೆ ಪ್ರವಾಸಿಗನಂತೆ ಟಿಕೆಟ್ ಪಡೆದು ಒಳ ಪ್ರವೇಶಿಸಿದ್ದಾನೆ ಸಂಜೆ ವರೆಗೂ ಮ್ಯೂಸಿಯಂ ಒಳಗೆ ಪ್ರವೇಶಿಸಿ ಅಲ್ಲಿ ಯಾವೆಲ್ಲಾ ವಸ್ತುಗಳು ಇವೆ ಎಂದು ಪರಿಶೀಲನೆ ನಡೆಸಿ ಬಳಿಕ ಮ್ಯೂಸಿಯಂ ಒಳಗೆ ಅಡಗಿ ಕೂತಿದ್ದಾನೆ. ಸಂಜೆಯಾಗುತ್ತಿದ್ದಂತೆ ಮ್ಯೂಸಿಯಂ ಸಿಬ್ಬಂದಿ ಬೀಗ ಹಾಕಿ ತೆರಳಿದ್ದಾರೆ ಆದರೆ ಮ್ಯೂಸಿಯಂ ಒಳಗೆ ಅವಿತು ಕುಳಿತ್ತಿದ್ದ ಯಾದವ್ ಅಲ್ಲಿದ್ದ ಸುಮಾರು ಹದಿನೈದು ಕೋಟಿ ಮೌಲ್ಯದ ಬೆಲೆಬಾಳುವ ಚಿನ್ನದ ನಾಣ್ಯ, ಚಿನ್ನಾಭರಣಗಳನ್ನು ಚೀಲದೊಳಗೆ ತುಂಬಿಸಿ ಕಟ್ಟಡದಿಂದ ಜಿಗಿದು ರಾತ್ರಿ ಹೊತ್ತು ಪರಾರಿಯಾಗಲು ಯತ್ನಿಸಿ ಕಾಲು ಮುರಿದುಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾನೆ.

ಮಂಗಳವಾರ ಬೆಳಿಗ್ಗೆ ಸಿಬ್ಬಂದಿ ಮ್ಯೂಸಿಯಂ ಬೀಗ ತೆಗೆದ ವೇಳೆ ಮ್ಯೂಸಿಯಂ ಒಳಗಿದ್ದ ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಅಲ್ಲದೆ ಒಡೆದ ಗಾಜಿನ ಚೂರುಗಳು ಅಲ್ಲಲ್ಲಿ ಬಿದ್ದಿರುವುದು ಕಂಡು ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ ಈ ಕುರಿತು ಪಕ್ಕದ ಪೊಲೀಸ್ ಠಾಣೆಗೂ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಅಷ್ಟರಲ್ಲಿ ಮ್ಯೂಸಿಯಂನ ಭದ್ರತಾ ಸಿಬ್ಬಂದಿ ಮ್ಯೂಸಿಯಂನ ಹೊರ ಆವರಣದಲ್ಲಿ ಪರಿಶೀಲನೆ ನಡೆಸಿದ ವೇಳೆ ವ್ಯಕ್ತಿಯೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಜೊತೆಗೆ ಆತನ ಬಳಿ ಮ್ಯೂಸಿಯಂನಲ್ಲಿದ್ದ ಬೆಲೆಬಾಳುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಇತರ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಆತನನ್ನು ಹಿಡಿದು ಹಾಕಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ಕದ್ದಿರುವ ವಸ್ತುಗಳಲ್ಲಿ ಗುಪ್ತರ ಕಾಲದ ಚಿನ್ನದ ನಾಣ್ಯಗಳು ಮತ್ತು ಆಭರಣಗಳು ಮತ್ತು ಅಮೂಲ್ಯ ಪಾತ್ರೆಗಳು ಸೇರಿದಂತೆ ಬ್ರಿಟಿಷ್ ಮತ್ತು ನವಾಬರ ಕಾಲದ ವಸ್ತುಗಳೂ ಇತ್ತು ಎನ್ನಲಾಗಿದೆ.

ಕಳ್ಳನನ್ನು ವಶಕ್ಕೆ ಪಡೆದ ಪೊಲೀಸರು ಕಾಲಿಗೆ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತನಿಖೆ ಕೈಗೆತ್ತಿಕೊಂಡ ಪೊಲೀಸರು ಆತನ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ಕುರಿತು ತನಿಖೆ ನಡೆಸಬೇಕಾಗಿದೆ.

ಇದನ್ನೂ ಓದಿ: Missing Case; ಕೋಟ್ ಧರಿಸಿ ಕೋರ್ಟ್ ಗೆ ಆಗಮಿಸಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ

Advertisement

Udayavani is now on Telegram. Click here to join our channel and stay updated with the latest news.

Next