Advertisement

ರೋಗ ಲಕ್ಷಣ ಇಲ್ಲದವರ ಪರೀಕ್ಷೆಯೂ ಅಗತ್ಯ: ವಿಶ್ವ ಆರೋಗ್ಯ ಸಂಸ್ಥೆ

03:38 PM Aug 29, 2020 | Nagendra Trasi |

ಲಂಡನ್‌: ಕೊರೊನಾ ವೈರಸ್‌ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಅವರಿಗೆ ರೋಗ ಲಕ್ಷಣ ಇದ್ದರೂ ಇಲ್ಲದಿದ್ದರೂ ಪರೀಕ್ಷೆಗೆ ಒಳಪಡಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ರೋಗ ಲಕ್ಷಣ ಇಲ್ಲದಿದ್ದರೆ ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ (ಸಿಡಿಸಿ) ಕೇಂದ್ರದ ವೆಬ್‌ಸೈಟ್‌ನಲ್ಲಿ ಕೆಳ ದಿನಗಳ ಹಿಂದೆ ಉಲ್ಲೇಖಿಸಲಾಗಿತ್ತು.

Advertisement

ಈ ಕುರಿತು ಪ್ರತಿಕ್ರಿಕೆ ನೀಡಿದ ಡಬ್ಲ್ಯುಎಚ್‌ಒದ ಕೊರೊನಾ ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮಾರಿಯಾ ವ್ಯಾನ್‌ ಕೆಖೋವ್, ರೋಗಲಕ್ಷಣಗಳ ಬೆಳವಣಿಗೆಯನ್ನು ಲೆಕ್ಕಿಸದೆ ಕೋವಿಡ್‌-19 ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸಬೇಕು.

ಒಂದು ವೇಳೆ ಈ ರೀತಿಯ ಕ್ರಮವನ್ನು ಕೈಗೊಳ್ಳದೆ ಇದ್ದರೆ ಮತ್ತಷ್ಟು ಸಮಸ್ಯೆ ಎದುರಿಸುವ ದಿನಗಳು ಬಹಳ ದೂರವಿಲ್ಲ ಈಗಾಗಲೇ ಕೋವಿಡ್‌ನ‌ ಒಂದು ಹಂತದ ಪ್ರತಾಪಕ್ಕೆ ಸಿಲುಕಿ ಮತ್ತೆ ಎದ್ದು ನಿಲ್ಲಲು ಪರದಾಡುತಿದ್ದೇವೆ ಈ ನಡುವೆ ಮತ್ತೆ ಎಚ್ಚರಿಕೆ ಮರೆತು ಉಡಾಪೆ ಕ್ರಮಗಳನ್ನು ಜಾರಿಗೊಳಿಸಬಾರದು ಎಂದು ಅವರು ಹೇಳಿದ್ದಾರೆ.

ರೋಗ ಲಕ್ಷಣ ಇರುವವರೂ ಹಾಗೂ ಇಲ್ಲದವರೂ ಸೊಂಕು ಹರಡುತ್ತಾರೆ ಎಂಬುದು ನಮಗೆ ತಿಳಿದಿದೆ. ಸೋಂಕು ಹರಡುವಿಕೆಯ ತೀವ್ರತೆಯ ವಿವಿಧ ಹಂತಗಳಲ್ಲಿ ದೇಶಗಳಿಗೆ ಡಬ್ಲ್ಯುಎಚ್‌ಒ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ತಮ್ಮ ಸಾಮರ್ಥ್ಯ, ಸೋಂಕು ಹರಡುವಿಕೆಯ ತೀವ್ರತೆಗೆ ಅನುಗುಣವಾಗಿ ಪರೀಕ್ಷೆ ನಡೆಸುವುದನ್ನು ಆಯಾ ದೇಶಗಳ ವಿವೇಚನೆಗೆ ಬಿಟ್ಟುಬಿಡಲಾಗಿತ್ತು ಆದರೂ ಕೂಡ ಮುನ್ನೆಚರಿಕೆ ಅಗತ್ಯ ಎಂದೂ ಅವರು ಹೇಳಿದ್ದಾರೆ. ವಿಶ್ವದಾದ್ಯಂತ ಈವರೆಗೆ 2.4 ಕೋಟಿಗೂ ಅಧಿಕ ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದ್ದು, 8,37,000 ಮಂದಿ ಮೃತಪಟ್ಟಿದ್ದಾರೆ.

ಕೊಸೊವೊ: ಸಾವಿನ ಸಂಖ್ಯೆಯಲ್ಲಿ ಏಕಾಏಕಿ ಏರಿಕೆ

Advertisement

ಸದ್ಯ ಕೊರೊನಾ ವೈರಸ್‌ನಿಂದ ವಿಶ್ವದಲ್ಲಿಯೇ ಅತ್ಯಂತ ಭೀಕರ ಪರಿಣಾಮವನ್ನು ಎದುರಿಸುತ್ತಿರುವ ದೇಶವೆಂದರೆ ಕೊಸೊವೊ. ಹೌದು, ಬಾಲ್ಕನ್‌ ರಾಜ್ಯವಾಗಿರುವ ಕೊಸೊವೊದಲ್ಲಿ 1.8 ಮಿಲಿಯನ್‌ ಜನಸಂಖ್ಯೆಯಿದ್ದು, ಕಳೆದೊಂದು ವಾರದಲ್ಲಿ ಇಲ್ಲಿ ಕೋವಿಡ್‌ ಸೋಂಕಿತರು ಪ್ರತಿ ಮಿಲಿಯನ್‌ ಜನಸಂಖ್ಯೆಗೆ 54.2ರಷ್ಟು ಪ್ರಮಾಣದಲ್ಲಿ ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next