Advertisement

1500 ಕಿ.ಮೀ ನಡೆದು ಬಂದಿದ್ದ ಪ್ರಧಾನಿ ಮೋದಿ ಅಭಿಮಾನಿಗೆ ‘ಕೈ”ಟಿಕೆಟ್

10:40 AM Mar 25, 2019 | Sharanya Alva |

ನವದೆಹಲಿ: ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಲುವಾಗಿ ಸುಮಾರು 71 ದಿನಗಳ ಕಾಲ 1,500 ಕಿಲೋ ಮೀಟರ್ ಗೂ ಹೆಚ್ಚು ದೂರ ಕಾಲ್ನಡಿಗೆಯಲ್ಲಿಯೇ ಬಂದಿದ್ದ ಒಡಿಶಾದ ಯುವಕ ಮುಕ್ತಿಕಾಂತ್ ಬಿಸ್ವಾಲ್ (31ವರ್ಷ)ಗೆ  ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ.

Advertisement

ಕಳೆದ ವರ್ಷ ಒಡಿಶಾದ ಬಿಸ್ವಾಲ್ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು 1,500 ಕಿಲೋ ಮೀಟರ್ ಗಿಂತ ಹೆಚ್ಚು ದೂರ ನಡೆದುಕೊಂಡು ಬಂದಿದ್ದ. ರೂರ್ಕೆಲಾದಲ್ಲಿರುವ ಇಸ್ಪಾಟ್ ಜನರಲ್ ಆಸ್ಪತ್ರೆಯನ್ನು ಮೇಲ್ದಗೇರಿಸುತ್ತೇನೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಯನ್ನು ಈಡೇರಿಸುವಂತೆ ಮನವಿ ಮಾಡಿಕೊಳ್ಳಲು ಬಂದಿದ್ದ.

ಏತನ್ನಧ್ಯೆ ಬಿಸ್ವಾಲ್ ದೆಹಲಿ ತಲುಪುವ ಮುನ್ನವೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಸಿದು ಬಿದ್ದ ಪರಿಣಾಮ ಆತನನ್ನು ಉತ್ತರಪ್ರದೇಶ ಆಗ್ರಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊನೆಗೂ ಆತನಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲವಾಗಿತ್ತು.

Advertisement

ಇದೀಗ ಒಡಿಶಾ ರೂರ್ಕೆಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಕಾಂಗ್ರೆಸ್ ಹೈಕಮಾಂಡ್ ಶುಕ್ರವಾರ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳ ಹಾಗೂ 54 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next