Advertisement
ವಿಶ್ವದ ಅತಿದೊಡ್ಡ ಆನ್‌ಲೈನ್ ಗೇಮಿಂಗ್ ಮಾರುಕಟ್ಟೆಯಾಗಿರುವ ಚೀನಾದಲ್ಲಿ ಆನ್‌ಲೈನ್ ಗೇಮಿಂಗ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಅತೀ ಹೆಚ್ಚು ಮಕ್ಕಳು ವಿಡೀಯೋ ಗೇಮ್ ಗೀಳಿಗೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತು ಕೊಂಡಿರುವ ಚೀನ ಸರಕಾರ ಗೇಮ್ ಆಡುವುದರ ಮೇಲೆ ನಿರ್ಬಂಧ ಹೇರಲು ತೀರ್ಮಾನಿಸಿದೆ.
ಹೆಚ್ಚಿನ ಯುವಕರು ದಿನದ ಹೆಚ್ಚು ಸಮಯವನ್ನು ಮೊಬೈಲ್ ಫೋನ್ ಅಲ್ಲಿಯೇ ಕಳೆಯುತ್ತಿದ್ದಾರೆ. ಈ ಹಿನ್ನಲೆ ದಿನದಲ್ಲಿ 18 ವರ್ಷದ ಒಳಗಿನವರು ಕೇವಲ 90 ನಿಮಿಷ ಮಾತ್ರ ವಿಡೀಯೋ ಗೇಮಿಂಗ್ ಆಡಲು ಅನುಮತಿಸಿರುವ ಸರಕಾರ ರಾತ್ರಿ 10 ಗಂಟೆಯ ನಂತರ ಮೊಬೈಲ್ ಬಳಕೆಯನ್ನು ನಿಷೇಧಿಸಿದ್ದು, ರಜಾದ ದಿನಗಳಲ್ಲಿ 3 ಗಂಟೆಗಳ ಕಾಲ ಮಾತ್ರ ಆನ್‌ಲೈನ್ ಗೇಮಿಂಗ್‌ಗೆ ಅವಕಾಶ ನೀಡಿದೆ. ಶೈಕ್ಷಣಿಕ ಚಟುವಟಿಕೆಯಲ್ಲಿ ಹಿಂದೆ
ದಿನದ 24 ಗಂಟೆ ಮೊಬೈಲ್‌ಗೆ ಅಂಟಿಕೊಂಡಿರುವ ಪರಿಣಾಮ ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತಿದ್ದು, ಶೈಕ್ಷಣಿಕ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನಲೆ ಕಟ್ಟುನಿಟ್ಟಿನ ಕ್ರಮ ಕೈ ಗೊಂಡ ಚೀನ ಸರಕಾರ 18 ವರ್ಷ ವಯೋಮಿತಿ ಒಳಗಿನ ಮಕ್ಕಳ ಮೊಬೈಲ್ ಬಳಕೆ ಮೇಲೆ ಕಡಿವಾಣ ಹಾಕಿದೆ.
Related Articles
ಅತಿಯಾಗಿ ಮೊಬೈಲ್ ಬಳಕೆ ಮಾಡುವುದರಿಂದ ಮೆದುಳು ಹಾಗೂ ನರ ವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರುತ್ತದೆ. ದೃಷ್ಟಿದೋಷ, ದೃಷ್ಟಿ ಹೀನತೆ ಹಾಗೂ ಕ್ಯಾನ್ಸರ್ ರೋಗದಂತಹ ಪ್ರಕರಣಗಳ ಹೆಚ್ಚಳಕ್ಕೂ ಮೊಬೈಲ್ ಕಾರಣವಾಗಿದೆ ಎಂದು ಅರಿತು ಈ ನಿರ್ಧಾರವನ್ನು ಮಾಡಿದ್ದೇವೆ ಎಂದು ಚೀನ ಸರಕಾರ ತಿಳಿಸಿದೆ.
Advertisement
ಈ ಹಿಂದೆಯೇ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಚೀನಿಯರಲ್ಲಿ ಕೇಳಿಕೊಂಡಿದ್ದರು. ಆದರೆ ಪರಿಸ್ಥಿತಿ ಸುಧಾರಿಸದ ಕಾರಣ ವಿಡೀಯೋ ಗೇಮಿಂಗ್ ಮೇಲೆ ನಿರ್ಬಂಧ ವಿಧಿಸಲಾಗಿದೆ.ಚೀನದಲ್ಲಿ ಇಲಾಖೆಗಳ ಅಧಿಕಾರಿಗಳು ಈಗಾಗಲೇ ಗೇಮಿಂಗ್ ಅಡಿಕr… ಹಾಗೂ ಹಿಂಸಾತ್ಮಕ ರೂಪದ ಗೇಮ್‌ಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದು ಚೀನದ ರಾಷ್ಟ್ರೀಯ ವಾರ್ತಾ ಮತ್ತು ಪ್ರಸಾರ ಇಲಾಖೆ ವರದಿ ಮಾಡಿದೆ.