Advertisement

ಛತ್ತೀಸಗಢ ಚುನಾವಣೆಯಲ್ಲಿ ಮೋದಿಗೆ ಮಣೆ -ಮಾಜಿ CM ರಮಣ್‌ ಸಿಂಗ್‌ಗೆ ಆದ್ಯತೆಯಿಲ್ಲ?

08:58 PM Jul 13, 2023 | Team Udayavani |

ರಾಯಪುರ: ಈ ವರ್ಷ ನಡೆಯಲಿರುವ ಛತ್ತೀಸಗಢ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಮೂರು ಬಾರಿಯ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳಿಗೆ ಬ್ರೇಕ್‌ ಬಿದ್ದಿದೆ. ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲದೇ ಛತ್ತೀಸಗಢ ಚುನಾವಣೆ ಎದುರಿಸಲು ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

Advertisement

ಅರ್ಥಾತ್‌ ಇಲ್ಲೂ ಕರ್ನಾಟಕದಲ್ಲಿ ಮಾಡಿದಂತೆ ಮೋದಿಯನ್ನು ಎದುರಿಟ್ಟುಕೊಂಡು ಮತ ಕೇಳಬಹುದು! ಪ್ರಧಾನಿ ನರೇಂದ್ರ ಮೋದಿ ಅವರ ರಾಯಪುರ ಭೇಟಿಯ ನಂತರ ಪಕ್ಷವು ಈ ತಂತ್ರಕ್ಕೆ ಮುಂದಾಗಿದ್ದು, ಮೋದಿ ಅವರ ಜನಪ್ರಿಯತೆಯ ಆಧಾರದಲ್ಲೇ ಚುನಾವಣೆ ಎದುರಿಸಲು ಪಕ್ಷ ಸಜ್ಜಾಗಿದೆ ಎನ್ನಲಾಗಿದೆ.

ಛತ್ತೀಸಗಢದ ಬಿಜೆಪಿ ನಾಯಕರೊಂದಿಗೆ ಕಳೆದ ವಾರ ಅಮಿತ್‌ ಶಾ ಅವರು ಸರಣಿ ಸಭೆಗಳನ್ನು ಹಮ್ಮಿಕೊಂಡಿದ್ದರು. ಅಲ್ಲದೇ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಓಂ ಮಾಥುರ್‌ ಮತ್ತು ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಅವರನ್ನು ಛತ್ತೀಸಗಢ ಚುನಾವಣಾ ಉಸ್ತುವಾರಿಯಾಗಿ ನೇಮಿಸಲಾಗಿದೆ.

2018ರ ಚುನಾವಣೆಯಲ್ಲಿ 90 ಸ್ಥಾನಗಳ ಪೈಕಿ 68 ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿತು. ಆದರೆ ಬಿಜೆಪಿ ಕೇವಲ 15 ಸ್ಥಾನಗಳನ್ನು ಗೆಲ್ಲಲು ಶಕ್ತವಾಯಿತು. ಆದಾಗ್ಯೂ, 2019ರ ಲೋಕಸಭೆ ಚುನಾವಣೆಯಲ್ಲಿ 11 ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಸಫ‌ಲವಾಯಿತು. ಇದೀಗ ಛತ್ತೀಸಗಢದಲ್ಲಿ ಪುನಃ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ತಂತ್ರ ಹಣೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next