Advertisement

ಶಾಲೆ-ಆಸ್ಪತ್ರೆ ಆವರಣದಲ್ಲಿ ಅಕ್ರಮ ನಡೆದರೆ ಕ್ರಮ: ಎಸ್ಪಿ

04:49 PM Aug 19, 2022 | Team Udayavani |

ಜೇವರ್ಗಿ: ಶಾಲೆ ಹಾಗೂ ಆಸ್ಪತ್ರೆ ಆವರಣದಲ್ಲಿ ಅಕ್ರಮ ಚಟುವಟಿಕೆ ನಡೆದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ಎಚ್ಚರಿಕೆ ನೀಡಿದರು.

Advertisement

ತಾಲೂಕಿನ ಗಂವ್ಹಾರ ಗ್ರಾಮದಲ್ಲಿ ಗುರುವಾರ ಆಯೋಜಿಸಲಾಗಿದ್ದ “ನಿಮ್ಮ ಮನೆ ಬಾಗಿಲಿಗೆ ಪೊಲೀಸ್‌’ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಇಬ್ಬರು ಬೀಟ್‌ ಪೊಲೀಸರನ್ನು ನೇಮಿಸಲಾಗುವುದು. ಜತೆಗೆ ರಾತ್ರಿ ವೇಳೆ ಪೆಟ್ರೋಲಿಂಗ್‌ ಮಾಡುವಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಪಿಎಸ್‌ಐ ಸಂಗಮೇಶ ಅಂಗಡಿ ಮಾತನಾಡಿದರು. ಯುವ ಸಾಹಿತಿ ಸದಾನಂದ ಪಾಟೀಲ ನಿರೂಪಿಸಿ, ವಂದಿಸಿದರು. ಸಭೆ ನಂತರ ಎಸ್ಪಿ ಅವರು ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮೀಜಿ ಮಠಕ್ಕೆ ಹಾಗೂ ಗೋ ಶಾಲೆಗೆ ಭೇಟಿ ನೀಡಿದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಿಂಗಣ್ಣ ದೊಡ್ಡಮನಿ, ಪಿಡಿಒ ರಾಘವೇಂದ್ರ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next