ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ ಟ್ರಂಪ್ ಅವರಿಗೆ ನ್ಯಾಯಾಂಗದಿಂದ ಇನ್ನೊಂದು ಹೊಡೆತ ಬಿದ್ದಿದೆ.
ಮುಸ್ಲಿಂ ಬಾಹುಳ್ಯವಿರುವ ಏಳು ದೇಶಗಳ ಜನರ ಮೇಲೆ ತಾನು ಕಳೆದ ತಿಂಗಳಲ್ಲಿ ವಿಧಿಸಿದ್ದ ತಾತ್ಕಾಲಿಕ ಪ್ರಯಾಣ ನಿಷೇಧದ ಆದೇಶವನ್ನು ಪುನರ್ ಸ್ಥಾಪಿಸುವಂತೆ ಕೋರಿ ಟ್ರಂಪ್ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಫೆಡರಲ್ ಕೋರ್ಟ್ 3-0 ಮತಗಳ ಅಂತರದಲ್ಲಿ ತಿರಸ್ಕರಿಸಿದೆ.
ಮುಸ್ಲಿಂ ಬಾಹುಳ್ಯದ ಏಳು ದೇಶಗಳ ಜನರು ಅಮೆರಿಕ ಪ್ರವೇಶಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿರುವ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಟ್ರಂಪ್ ಸರಕಾರ ವಿಫಲವಾಗಿದೆ ಎಂದು ಅಮೆರಿಕದ 9ನೇ ಸರ್ಕ್ನೂಟ್ ಕೋರ್ಟ್ ಆಫ್ ಅಪೀಲ್ಸ್‌ನ ಮೂವರು ನ್ಯಾಯಾಧೀಶರು ಸರ್ವಾನುಮತದಿಂದ ಹೇಳುವ ಮೂಲಕ ಮೇಲ್ಮನವಿಯನ್ನು ತಿರಸ್ಕರಿಸಿದ್ದಾರೆ.
ಮೇಲ್ಮನವಿ ನ್ಯಾಯಾಲಯವು 29 ಪುಟಗಳ ಈ ಮಹತ್ತರ ತೀರ್ಪನ್ನು ನೀಡಿದ ಒಡನೆಯೇ ಟ್ವಿಟರ್‌ನಲ್ಲಿ ಕಿಡಿ ಕಾರಿರುವ ಟ್ರಂಪ್, “ಕೋರ್ಟಿನಲ್ಲಿ ನೋಡಿಕೊಳ್ಳುತ್ತೇನೆ; ನಮ್ಮ ದೇಶದ ಭದ್ರತೆಗೆ ಅಪಾಯವಿದೆ’ ಎಂದು ಗುಡುಗಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಅಂತಿಮವಾಗಿ ಈ ಕೇಸನ್ನು ನನ್ನ ಸರಕಾರವೇ ಗೆಲ್ಲುತ್ತದೆ; ಇದೊಂದು ರಾಜಕೀಯ ಪ್ರೇರಿತ ತೀರ್ಪಾಗಿದೆ’ ಎಂದು ನ್ಯಾಯಾಂಗವನ್ನು ಕಟುವಾಗಿ ಟೀಕಿಸಿದರು .