Advertisement

Delhi Drug Bust: ಬೃಹತ್‌ ಮಾದಕ ದ್ರವ್ಯ ಜಾಲ-2000 ಕೋಟಿ ರೂ. ಮೌಲ್ಯದ ಕೊಕೇನ್‌ ವಶ

02:49 PM Oct 02, 2024 | Team Udayavani |

ನವದೆಹಲಿ: ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ 500ಕೆಜಿಗೂ ಅಧಿಕ ಕೊಕೇನ್‌ (Cocaine) ಮಾದಕ ದ್ರವ್ಯವನ್ನು ಬುಧವಾರ (ಅ.02) ದೆಹಲಿಯಲ್ಲಿ ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಇದು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಶಪಡಿಸಿಕೊಂಡ ಭಾರೀ ಪ್ರಮಾಣದ ಮಾದಕ ದ್ರವ್ಯ ಪ್ರಕರಣ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ದೆಹಲಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬೃಹತ್‌ ಪ್ರಮಾಣದ ಕೊಕೇನ್‌ ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಲಾಗಿದೆ.

ಈ ಕೊಕೇನ್‌ ಸಾಗಣೆ ಹಿಂದೆ ಅಂತರಾಷ್ಟ್ರೀಯ ಮಟ್ಟದ ಡ್ರಗ್ಸ್‌ ಕಳ್ಳಸಾಗಣೆಯ ಸಿಂಡಿಕೇಟ್‌ (ಗ್ಯಾಂಗ್)‌ ಇದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ದೆಹಲಿಯಲ್ಲಿ 400 ಗ್ರಾಂ ಹೆರಾಯಿನ್‌ ಹಾಗೂ 160 ಗ್ರಾಂ ಕೊಕೇನ್‌ ಹೊಂದಿದ್ದ ಇಬ್ಬರು ಅಫ್ಘಾನ್‌ ಪ್ರಜೆಗಳನ್ನು ಬಂಧಿಸಿದ್ದ ಪ್ರಕರಣದ ನಂತರ ಈ ಬೃಹತ್‌ ಕಾರ್ಯಾಚರಣೆ ನಡೆದಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next