Advertisement
ಉಡುಪಿ ಪ್ರೀಮಿಯರ್ ಲೀಗ್ (ಯುಪಿಎಲ್) 50 ಲ.ರೂ. ನಗದು ಬಹುಮಾನವನ್ನು ಹೊಂದಿದ್ದು ವಿಜೇತ ತಂಡವು ಟ್ರೋಫಿ ಮತ್ತು 25 ಲ.ರೂ.,ರನ್ನರ್ ಅಪ್ ತಂಡ 12 ಲ.ರೂ. ಪಡೆಯಲಿದೆ. ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳಿಗೆ ತಲಾ 3 ಲ.ರೂ. ನೀಡಲಾಗುತ್ತದೆ. ಇದಲ್ಲದೇ ವೈಯಕ್ತಿಕವಾಗಿ ಸರಣಿಶ್ರೇಷ್ಠ ಆಟಗಾರನಿಗೆ ಕಾರು, ಫೈನಲ್ ಪಂದ್ಯದ ಮ್ಯಾನ್ ಆಫ್ ದ ಮ್ಯಾಚ್ ಹಾಗೂ ಬೆಸ್ಟ್ ಬೌಲರ್ ಮತ್ತು ಬೆಸ್ಟ್ ಬ್ಯಾಟ್ಸ್‌ಮನ್‌ಗೆ ಬೈಕು ನೀಡಲಾಗುತ್ತದೆ. ಹೆಚ್ಚು ಸಿಕ್ಸರ್ ಬಾರಿಸಿದವರಿಗೆ ಮತ್ತು ಪ್ರತಿ ಮ್ಯಾಚ್‌ನಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಆಟಗಾರನಿಗೆ 2 ಸಾವಿರ ನಗದು ಸಹಿತ ಟ್ರೋಫಿ, ಮೆಡಲ್ ಕೊಡಮಾಡಲಾಗುತ್ತದೆ ಎಂದರು.
ಹಾರ್ಡ್ ಟೆನಿಸ್ ಬಾಲ್‌ನ ಎಲ್ಲ ಪಂದ್ಯಗಳು 10 ಓವರ್‌ನದ್ದಾಗಿರುತ್ತದೆ. 20ಕ್ಕೂ ಅಧಿಕ ತಂಡಗಳು ಭಾಗವಹಿಸಲಿದ್ದು, ದೇಶದ ವಿವಿಧ ರಾಜ್ಯಗಳ ತಂಡ ಸೇರಿದಂತೆ ಗಲ್ಫ್ ರಾಷ್ಟ್ರದ ತಂಡವೂ ಭಾಗವಹಿಸಲಿದೆ. ಕ್ರಿಕೆಟ್ ಆಯೋಜನೆಗೆ ಸಚಿವ ಪ್ರಮೋದ್ ಮಧ್ವರಾಜ್ ಸಹಿತ ಸೌದಿ ಅರೇಬಿಯಾದಲ್ಲಿನ ಸಾಬ್ ಸಂಸ್ಥೆಯ ಎಂಡಿ ಸಲಾಹುದ್ದೀನ್ ಸಲ್ಮಾನ್ ಅವರು ಮುಖ್ಯ ಸಲಹೆ, ಸಹಕಾರ ನೀಡಿದ್ದಾರೆ ಎಂದರು.